VIDEO | ತಾಯಂದಿರ ದಿನ ಪ್ರಯುಕ್ತ ಮಗನೊಂದಿಗೆ ತಾಯಿ ಮಾಡಿದ ಸಾಹಸ ಏನು ಗೊತ್ತೆ?

ನವದೆಹಲಿ: ತಾಯಂದಿರ ದಿನದಂದು ಮಗನೊಂದಿಗೆ 80 ವರ್ಷದ ತಾಯಿ ಮಾಡಿದ ಸಾಹಸವೇನು ಎಂದು ತಿಳಿದರೆ ಒಮ್ಮೆ ಆಶ್ಚರ್ಯವಾಗುತ್ತದೆ.

ಭಾರತದ ಮಾಡೆಲ್​​​ ಮತ್ತು ಬಾಲಿವುಡ್​​​ ನಟ ಮಿಲಂದ್​​​ ಸೋಮನ್​​​​ ಅವರ ತಾಯಿ ಉಷಾ ಸೋಮನ್​​​​​​ ಅವರು 80ರ ಇಳಿವಯಸ್ಸಿನಲ್ಲಿಯೂ ಇತರರಿಗೆ ನಾನೇನು ಕಮ್ಮಿ ಇಲ್ಲವೆಂಬಂತೆ ಮಗನೊಂದಿಗೆ ಸೇರಿ ಸಾಹಸ ಮಾಡಿದ್ದಾರೆ.

ಭಾನುವಾರ ನಡೆದ ವಿಶ್ವ ತಾಯಂದಿರ ದಿನದಂದು ಉಷಾ ಸೋಮನ್​​ ಅವರು ತಮ್ಮ ಪುತ್ರನೊಂದಿಗೆ ಸೇರಿ 16 ಪುಶ್​​-ಅಪ್​​ (ಡಿಪ್ಸ್​​)ಗಳನ್ನು ಹೊಡೆಯುವ ಮೂಲಕ ದೈಹಿಕ ಫಿಟ್​ನೆಸ್​ ಸಾಹಸ ಮಾಡಿದ್ದಾರೆ.

80ನೇ ವಯಸ್ಸಿನಲ್ಲಿಯೂ ಇಂತಹ ಸಾಹಸ ಮಾಡಿರುವ ಉಷಾ ಅವರು ಹಿರಿಯ ನಾಗರಿಕರಿಗೆ ಮಾದರಿಯಾಗಿದ್ದಾರೆ. ಈ ವಿಡಿಯೋವನ್ನು ಮಿಲಂದ್​ ಸೋಮನ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಆಪ್​ ಲೋಡ್​​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

80ನೇ ವರ್ಷದಲ್ಲಿ ನನ್ನ ತಾಯಿ ಈ ಸಾಹಸ ಮಾಡಿರುವುದು ಮೆಚ್ಚಲೇ ಬೇಕಾಗಿದೆ. ಕೇವಲ ಒಂದು ದಿನ ಮಾತ್ರ ತಾಯಂದಿರ ದಿನ ಆಚರಿಸುವುದಲ್ಲ ದಿನವೂ ತಾಯಂದಿನ ಆಚರಿಸಬೇಕು ಎಂದು ತಮ್ಮ ಟ್ವಿಟರ್​​ ಖಾತೆಯಲ್ಲಿ ಮಿಲಂದ್​​ ಬರೆದುಕೊಂಡಿದ್ದಾರೆ.

ಉಷಾ ಸೋಮನ್​​ ಅವರಿಗೆ ಈ ಸಾಹಸ ಹೊಸದೇನಲ್ಲ ಅವರು 2016ರಲ್ಲಿ ಬರಿಗಾಲಿನಲ್ಲಿ ಮ್ಯಾರಥಾನ್​​ನಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಇದಕ್ಕೂ ಮೊದಲು 100 ಕಿ.ಮೀ ನಡೆದಿದ್ದರು. (ಏಜನ್ಸೀಸ್​)