VIDEO| ಆರು ಭಾಷೆಯಲ್ಲಿ ಧೋನಿ ಕೇಳಿದ ಪ್ರಶ್ನೆಗೆ ಅದೇ ಭಾಷೆಯಲ್ಲಿ ಉತ್ತರಿಸಿದ ಮಗಳು!

ನವದೆಹಲಿ: ಶನಿವಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಐಪಿಎಲ್ ಮೊದಲನೇ ಪಂದ್ಯ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ ಖುಷಿಯಲ್ಲಿರುವ ಧೋನಿ, ಬಿಡುವಿನ ವೇಳೆಯಲ್ಲಿ ಮಗಳೊಂದಿಗೆ ಸಮಯ ಕಳೆದಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಜೀವಾಳೊಂದಿಗೆ ಧೋನಿ 6 ಭಾಷೆಯಲ್ಲಿ ಮಾತನಾಡಿಸಿದ್ದಾರೆ. ತಮಿಳು, ಬೆಂಗಾಳಿ, ಗುಜರಾತಿ, ಭೋಜ್​ಪುರಿ, ಪಂಜಾಬಿ ಹಾಗೂ ಉರ್ದು ಭಾಷೆಯಲ್ಲಿ ‘ಹೇಗಿದ್ದೀಯ’ ಎಂಬ ಪ್ರಶ್ನೆಗೆ ಜೀವಾ ಆಯಾ ಭಾಷೆಯಲ್ಲೇ ‘ಚೆನ್ನಾಗಿದೀನಿ’ ಎಂದು ಉತ್ತರಿಸಿರುವುದು ಆಸಕ್ತಿದಾಯಕವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಕೂಡ ಆಗಿದೆ.

ಆರ್​ಸಿಬಿ ವಿರುದ್ಧ ಚೆನ್ನೈ ತ್ರಾಸದಾಯಕವಾಗಿ ಗೆಲುವು ಸಾಧಿಸಿದ್ದು ಧೋನಿಗೆ ತೃಪ್ತಿತಂದಿಲ್ಲ. ಅದಕ್ಕೆ ಕಾರಣ ಚೆನ್ನೈ ಕ್ರೀಡಾಂಗಣ. ನಮ್ಮ ಆಟಗಾರರು ನಿರಂತರತೆ ಕಾಯ್ದುಕೊಳ್ಳಬೇಕಾದರೆ, ತವರು ಮೈದಾನ ಉತ್ತಮವಾಗಿರಬೇಕು. ಆದರೆ, ಚೆನ್ನೈ ಪಿಚ್​ ಅದಕ್ಕೆ ವಿರುದ್ಧವಾಗಿದೆ ಎಂದು ಪಂದ್ಯದ ಬಳಿಕ ಅಸಮಾಧಾನ ಹೊರಹಾಕಿದ್ದಾರೆ.

ಚೆನ್ನೈ ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಎದುರು ತನ್ನ ಎರಡನೇ ಪಂದ್ಯಕ್ಕೆ ಅಣಿಯಾಗುತ್ತಿದೆ. (ಏಜೆನ್ಸೀಸ್​)