ಮಾಡೆಲಿಂಗ್​ಗೆ ಮರಳಿದ ಶಮಿ ಪತ್ನಿ!

ನವದೆಹಲಿ: ಕೌಟುಂಬಿಕ ಕಲಹದಿಂದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಅವರಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್ ಮತ್ತೆ ಮಾಡೆಲಿಂಗ್ ಕ್ಷೇತ್ರಕ್ಕೆ ಮರಳಿದ್ದಾರೆ. 2014ರಲ್ಲಿ ಶಮಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಹಸಿನ್, ಐಪಿಎಲ್​ನಲ್ಲಿ ಕೆಕೆಆರ್ ತಂಡದ ಚಿಯರ್​ಲೀಡರ್ ಆಗಿಯೂ ಕುಣಿದಿದ್ದರು. ವೃತ್ತಿಪರ ಮಾಡೆಲಿಂಗ್ ಫೋಟೋಶೂಟ್​ನಲ್ಲಿ ಭಾಗವಹಿಸಿರುವ ವಿಡಿಯೋವನ್ನು ಹಸಿನ್ ಟ್ವಿಟರ್​ನಲ್ಲಿ ಶನಿವಾರ ಪ್ರಕಟಿಸಿದ್ದಾರೆ. ಮಗಳ ಉತ್ತಮ ಭವಿಷ್ಯಕ್ಕಾಗಿ ತಾನು ಕೆಲಸ ಮಾಡುವುದು ಅನಿವಾರ್ಯ ಎಂದಿರುವ ಹಸಿನ್, ನಟನೆಯ ಬಗ್ಗೆಯೂ ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಶಾರ್ಟ್ ಫಿಲ್ಮ್ ಒಂದರಲ್ಲಿ ನಟಿಸಿದ್ದರು.