ಏಷ್ಯಾ ಕಪ್​ 2018: ಈ ಒಂದು ಕ್ಯಾಚ್​ ಬಾಂಗ್ಲಾ ಫೈನಲ್​ ಕನಸನ್ನು ನನಸು ಮಾಡಿತು

ದುಬೈ: ನಿನ್ನೆ(ಬುಧವಾರ) ನಡೆದ ಏಷ್ಯಾ ಕಪ್​ ಟೂರ್ನಿಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬಾಂಗ್ಲಾ ತಂಡದ ನಾಯಕ ಮಶ್ರಾಫ್​ ಮೊರ್ಟಾಜ ಅವರು ಹಿಡಿದ ಅತ್ಯದ್ಭುತ ಕ್ಯಾಚ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಬಾಂಗ್ಲಾ ನೀಡಿದ್ದ 240 ರನ್​ ಗುರಿಯನ್ನು ಬೆನ್ನತ್ತಿದ ಪಾಕ್​ ತಂಡ ಆರಂಭದಲ್ಲಿ ಆಘಾತಕ್ಕೆ ಒಳಗಾದರೂ ಅಪಾಯಕಾರಿ ಬ್ಯಾಟ್ಸ್​ಮನ್​ ಶೋಯೆಬ್ ಮಲಿಕ್​ ತಮ್ಮ ಶಾಂತ ಸ್ವಭಾವದ ಆಟದಿಂದ ಇನ್ನಿಂಗ್ಸ್​ ಕಟ್ಟಲು ಆರಂಭಿಸಿದ್ದರು. ಆದರೆ, ಬಾಂಗ್ಲಾ ಬೌಲರ್​ ರುಬೆಲ್​ ಹೊಸೈನ್​ ಮಲ್ಲಿಕ್​ರನ್ನು ಔಟ್​ ಮಾಡಿದ್ದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು.

21ನೇ ಓವರ್​ನಲ್ಲಿ ಮಲ್ಲಿಕ್​ ಮಿಡ್​ ವಿಕೆಟ್ ಭಾಗದಲ್ಲಿ ಚೆಂಡನ್ನು ಹೊಡೆದಾಗ ಫ್ರಂಟ್​ ವಿಭಾಗದಲ್ಲಿ ನಿಂತಿದ್ದ ಮೊರ್ಟಾಜ ಅವರು ರೋಮಾಂಚನಕಾರಿಯಾದ ಡೈವ್​ ಹೊಡೆಯುವ ಮೂಲಕ ಕ್ಯಾಚ್​ ಹಿಡಿದರು. ಮಲ್ಲಿಕ್​ ಫೆವಲಿಯನ್​ ಕಡೆ ತೆರಳುತ್ತಿದ್ದಂತೆ ಬಾಂಗ್ಲಾ ಪಾಳಯದಲ್ಲಿ ಸಂತಸ ಮುಗಿಲು ಮುಟ್ಟಿತ್ತು. ಅಲ್ಲದೆ, ಪಾಕ್​ ಪಾಳಯ ಆಘಾತಕ್ಕೆ ಒಳಗಾಯಿತು.

37 ರನ್​ ಅಂತರದಿಂದ ಪಂದ್ಯದಲ್ಲಿ ವಿಜಯ ಸಾಧಿಸಿದ ಬಾಂಗ್ಲಾ ತಂಡ ಪ್ರತಿಷ್ಠಿತ ಏಷ್ಯಾ ಕಪ್​ 2018 ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿತು. ಫೈನಲ್​ನಲ್ಲಿ ಭಾರತವನ್ನು ಎದುರಿಸಲಿದೆ. (ಏಜೆನ್ಸೀಸ್​)

https://twitter.com/KabaliOf/status/1045004197954031621