VIDEO| ಸೇನಾ ಸಮವಸ್ತ್ರ ತೊಟ್ಟು ರಣರಂಗಕ್ಕಿಳಿದ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡ!

ನವದೆಹಲಿ: ಐಪಿಎಲ್​ 12ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಕ್ರೀಡಾಭಿಮಾನಿಗಳ ಸಂಭ್ರಮಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ತನ್ನ ಅಭಿಮಾನಿಗಳಿಗೆ ಹೋಳಿ ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದು, ಇದರಲ್ಲಿ ತಂಡದ ಆಟಗಾರರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪೇಂಟ್​ ಬಾಲ್​ ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ.

ತಂಡದ ನಾಯಕ ರವಿಚಂದ್ರನ್​ ಅಶ್ವಿನ್​ ಸೇರಿದಂತೆ ಕೆ.ಎಲ್​.ರಾಹುಲ್​, ಆ್ಯಂಡ್ರಿವ್​​​ ಟೈ ಎಲ್ಲರು ಭಾರತೀಯ ಸೇನೆಯ ಸಮವಸ್ತ್ರ ತೊಟ್ಟು ಬಣ್ಣದೋಕುಳಿಯ ಯುದ್ಧಕ್ಕೆ ಸಜ್ಜಾದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಡಿಯೋ ಕುರಿತು ಪಂಜಾಬ್​ ತಂಡ ಹೋಳಿ ಹಬ್ಬದ ಸಂಭ್ರಮಕ್ಕೆ ನಮ್ಮ ಆಟಗಾರರು ಪೇಂಟ್​ಬಾಲ್​ ಸ್ಪರ್ಧೆ ಮೂಲಕ ಮನರಂಜಿಸಿದ್ದಾರೆ ಎಂದು ಬರೆದುಕೊಂಡಿದೆ.

ಒಮ್ಮೆಯೂ ಐಪಿಎಲ್​ ಕಿರೀಟ ಧರಿಸದ ಪಂಜಾಬ್​ ತಂಡ ಈ ಬಾರಿ ಟ್ರೋಫಿ ಎತ್ತಿಡಿಯುವ ಕನಸನ್ನು ನನಸು ಮಾಡುವ ಪ್ರಯತ್ನಕ್ಕೆ ಕೈಹಾಕಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *