ಆಲಿಸ್ಟರ್​ ಕುಕ್​ ನೆನೆದು ಗದ್ಗದಿತರಾದ ಜೇಮ್ಸ್​ ಆಂಡರ್ಸನ್​

ನವದೆಹಲಿ: ಟೀಂ ಇಂಗ್ಲೆಂಡ್​ನ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರು ಸಹ ಆಟಗಾರ ಹಾಗೂ ಸ್ನೇಹಿತ ಆಲಿಸ್ಟರ್​ ಕುಕ್​ ಬಗ್ಗೆ ಮಾತನಾಡುವ ವೇಳೆ ದುಃಖತಪ್ತರಾದ ಪ್ರಸಂಗ ನಡೆದಿದೆ.

ಕುಕ್​ ಅವರು ಟೀಂ ಇಂಡಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್​ ಪಂದ್ಯದ ವೇಳೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿ, ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ದಾಖಲೆಯ ಇನ್ನಿಂಗ್ಸ್​ ಆಡಿ ನಿರ್ಗಮಿಸಿದ್ದರು.​

ಟೀಂ ಇಂಡಿಯಾ ವಿರುದ್ಧ 4-1 ಅಂತರದಲ್ಲಿ ಟೆಸ್ಟ್​ ಸರಣಿ ಗೆದ್ದ ಸಂಭ್ರಮದ ನಡುವೆ ಸರಣಿಯಲ್ಲಿ ಕುಕ್ ಅವರ ಕೊಡುಗೆಯನ್ನು ನೆನೆದು ಮಾತನಾಡುವಾಗ ಆಂಡರ್ಸನ್​ ಗದ್ಗದಿತರಾದರು.​ ಕುಕ್​ ಅವರು ಮೈದಾನದಲ್ಲಿರುವುದನ್ನು ನೋಡಲು ತಂಬಾ ಖುಷಿಯಾಗುತ್ತಿತ್ತು. ನಮಗೆ ಇದೊಂದು ಕಠಿಣ ವಾರವಾಗಿತ್ತು. ಅವರು ಉತ್ತಮ ಜತೆಯಾಟ ಆಡುತ್ತಿದ್ದರೆ , ವೃತ್ತಿ ಜೀವನದ ಅಂತ್ಯದ ಹತ್ತಿರ ಹೋಗುತ್ತಿದ್ದಾರೆ ಎಂದೆನಿಸುತ್ತಿತ್ತು ಎಂದು ಹೇಳಿದರು.

ಕುಕ್​ ಅವರನ್ನು ನೀವು ಡ್ರೆಸಿಂಗ್​ ರೂಮಿನಲ್ಲಿ ಮಿಸ್​ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಂಡರ್ಸನ್​​ ಹೌದು, ಖಂಡಿತವಾಗಿಯೂ, ಆತ ನನ್ನ ಒಳ್ಳೆಯ ಸ್ನೇಹಿತ ಹಾಗೂ ಪ್ರತಿಭಾನ್ವಿತ ಆಟಗಾರನಾಗಿದ್ದು, ಅವರು ಸಾರ್ವಕಾಲಿಕರಾಗಿತ್ತಾರೆ ಎಂದು ತಿಳಿಸಿದರು.

ಕುಕ್​ ವಿದಾಯದ ಬೆನ್ನಲ್ಲೆ ಆಂಡರ್ಸನ್​ ಅವರು ಟೆಸ್ಟ್​ ಕ್ರಿಕೆಟ್​ನ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಖ್ಯಾತಿಗೆ ಪಾತ್ರರಾಗಿದ್ದಾರೆ. ಟೆಸ್ಟ್​ನಲ್ಲಿ 564 ವಿಕೆಟ್​ ಪಡೆದಿರುವ ಆಂಡರ್ಸನ್ 563 ವಿಕೆಟ್​ ಪಡೆದಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್ಗ್ರಾತ್ ಅವರನ್ನು ಹಿಂದಿಕ್ಕಿದ್ದಾರೆ. (ಏಜೆನ್ಸೀಸ್​)

https://twitter.com/DRVcricket/status/1039554796267745285