ವಿಡಿಯೋ| ಧೋನಿಯ ಹೆಲಿಕಾಪ್ಟರ್​ ಶಾಟ್​ ಅನುಕರಿಸಿದ ಆಸಿಸ್​ ಆಲ್​ರೌಂಡರ್​ ಮ್ಯಾಕ್ಸ್​ವೆಲ್​

ಸಿಡ್ನಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ಅವರ ಹೆಲಿಕಾಪ್ಟರ್​ ಶಾಟ್​ ಅಂದರೆ ಕ್ರೀಡಾಭಿಮಾನಿಗಳಿಗೆ ಬಲು ಇಷ್ಟ. ಧೋನಿ ಅನ್ವೇಷಿಸಿದ ಈ ಹೊಡೆತವನ್ನು ನಕಲು ಮಾಡಲು ಅನೇಕರು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಾರೆ.

ಭಾರತದ ಯುವ ಆಟಗಾರ ಸೂರ್ಯಕುಮಾರ್​ ಯಾದವ್​​ ಹಾಗೂ ಅಫ್ಘಾನಿಸ್ತಾನದ ಯುವ ಕ್ರಿಕೆಟಿಗ ರಶೀದ್​ ಖಾನ್​ ಹೆಲಿಕಾಪ್ಟರ್​ ಶಾಟ್​ ಟ್ರೈ ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ. ಇದೀಗ ಆಸಿಸ್​ ಪಡೆಯ ಸ್ಫೋಟಕ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್ ಇದೇ ಶೈಲಿಯನ್ನು ಮುಂದಿನ ಭಾರತದ ವಿರುದ್ಧ ಪಂದ್ಯಕ್ಕೆ ಪ್ರಯೋಗಿಸಲು ತಯಾರಿ ನಡೆಸುತ್ತಿದ್ದಾರೆ.​

ಮ್ಯಾಕ್ಸ್​ವೆಲ್​, ಧೋನಿ ಅವರ ಹೆಲಿಕಾಪ್ಟರ್​ ಶೈಲಿಯನ್ನು ಅನುಕರಿಸುತ್ತಿರುವ ವಿಡಿಯೋ ಡೈರೆಕ್ಟ್​ ಹಿಟ್​ ಎಂಬ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಆಗಿದ್ದು, ವೈರಲ್​ ಆಗಿದೆ. ಪಂದ್ಯವೊಂದರಲ್ಲಿ ಧೋನಿ ಅವರ ಕ್ಯಾಚ್​ ಬಿಟ್ಟಿದನ್ನು ಮ್ಯಾಕ್ಸ್​ವೆಲ್​ ನೆನಪಿಸಿಕೊಂಡಿದ್ದು, ಅದರ ಮುಂದಿನ ಎಸೆತದಲ್ಲಿ ವೇಗಿ ಜೇಮ್ಸ್​ ಫಾಲ್ಕನರ್​ಗೆ ಸಿಕ್ಸರ್​ ಸಿಡಿಸಿದ್ದರ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಆಸಿಸ್​ ಪಡೆಯ ಪ್ರಮುಖ ಆಲ್​​ರೌಂಡರ್​ ಆಗಿರುವ ಮ್ಯಾಕ್ಸ್​ವೆಲ್ ಭಾರತದ ವಿರುದ್ಧ​ ಶನಿವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. 87 ಪಂದ್ಯಗಳಲ್ಲಿ ಆಸಿಸ್​ ತಂಡವನ್ನು ಪ್ರತಿನಿಧಿಸಿರುವ ಮ್ಯಾಕ್ಸ್​ವೆಲ್​ 32.02 ಸರಾಸರಿಯಲ್ಲಿ 2,200 ರನ್​ ಬಾರಿಸಿದ್ದಾರೆ. 102 ಅವರ ವ್ಯಯಕ್ತಿಕ ಗರಿಷ್ಠ ರನ್ ಆಗಿದೆ. (ಏಜೆನ್ಸೀಸ್​)​