ಆಸಿಸ್​​​ ಮಾಜಿ ನಾಯಕ ‘ಜಾರ್ಜ್​ ಬೈಲಿ’ ವಿಚಿತ್ರ ಬ್ಯಾಟಿಂಗ್​ ಭಂಗಿ ವಿಡಿಯೋ ವೈರಲ್​!

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಜಾರ್ಜ್​ ಬೈಲಿ ಅವರ ವಿಶೇಷವಾದ ಬ್ಯಾಟಿಂಗ್​ ಭಂಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕಾಮೆಂಟ್​ಗಳ ಭರಪೂರ ಹರಿದುಬರುತ್ತಿದೆ.

ಸದ್ಯ ಬೈಲಿ ಪ್ರೈಮ್​ ಮಿನಿಸ್ಟರ್ ಇಲೆವೆನ್​ ತಂಡವನ್ನು ಮುನ್ನೆಡೆಸುತ್ತಿದ್ದು, ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ಕ್ಯಾನ್ಬೆರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ​ ವಿಚಿತ್ರ ಬ್ಯಾಟಿಂಗ್​ ಶೈಲಿಯನ್ನು ತೋರಿ ಕ್ರೀಡಾಭಿಮಾನಿಗಳ ಗಮನವನ್ನು ತಮ್ಮಡೆಗೆ ಸೆಳೆದರು.

ಸಾಕಷ್ಟು ವೈರಲ್​ ಆಗಿರುವ ವಿಡಿಯೋದಲ್ಲಿ ಬೈಲಿ ಸಾಮಾನ್ಯರಂತೆ ಬ್ಯಾಟ್​ ಮಾಡದೆ, ತಮ್ಮ ಬ್ಯಾಕ್​ ಅನ್ನು ಸಂಪೂರ್ಣ ಬೌಲರ್​ ಕಡೆ ತಿರುಗಿಸಿ ನಿಂತು ವಿಶಿಷ್ಟವಾದ ಭಂಗಿಯಲ್ಲಿ ಬ್ಯಾಟ್​ ಬೀಸಿದ್ದಾರೆ. ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿ ಅವರ ಬೌಲಿಂಗ್​ನಲ್ಲಿ ಈ ಘಟನೆ ನಡೆದಿದೆ.

ಆಶೀಸ್​ ಪರ 90 ಏಕದಿನ ಪಂದ್ಯಗಳನ್ನು ಆಡಿರುವ ಬೈಲಿ, ಕೇವಲ 5 ಟೆಸ್ಟ್​ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲೂ ಭಾಗವಹಿಸಿರುವ ಇವರು ಕಿಂಗ್ಸ್​ ಇಲೆವೆನ್​ ಪಂಜಾಬ್​, ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಪುಣೆ ಸೂಪರ್​ಗೇಂಟ್ಸ್​ ಪರ ಬ್ಯಾಟ್​ ಬೀಸಿದ್ದಾರೆ. (ಏಜೆನ್ಸೀಸ್​)