ಧವನ್​ ಡ್ಯಾನ್ಸ್​ ಮೋಡಿಗೆ ಕ್ರೀಡಾಭಿಮಾನಿಗಳು ಫಿದಾ: ಭಜ್ಜಿ ಭರ್ಜರಿ ಸ್ಟೆಪ್ಸ್​!

ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಆಟಗಾರ ಶಿಖರ್​ ಧವನ್​ ಯಾಕೋ ಆಂಗ್ಲರ ನಾಡಿನಲ್ಲಿ ಆರ್ಭಟಿಸದಿರುವುದು ಅವರ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ. ಆದರೂ, ಧವನ್​ ಬೇರೆ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಅಭಿಮಾನಿಗಳ ಮನವನ್ನು ತಣಿಸಿದ್ದಾರೆ.

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್​ ಎದುರು ಅಂತಿಮ ಟೆಸ್ಟ್​ ಪಂದ್ಯವನ್ನು ಆಡುತ್ತಿದೆ. ಹೇಗಾದರೂ ಮಾಡಿ ಓವಲ್​ ಟೆಸ್ಟ್​ ಗೆಲ್ಲಬೇಕು, ಈ ಮೂಲಕ ಟೆಸ್ಟ್​ ಸರಣಿಯ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಕೊಹ್ಲಿ ಹುಡುಗರು ಪಣ ತೊಟ್ಟಿದ್ದಾರೆ. ಈ ನಡುವೆ ಶಿಖರ್​ ಧವನ್ ಮೈದಾನದಲ್ಲೇ​ ಡ್ಯಾನ್ಸ್​ ಮಾಡಿ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡಿದ್ದಾರೆ.

ಓವಲ್​ನಲ್ಲಿ ನೂರಾರು ಜನ ಭಾರತದ ಅಭಿಮಾನಿಗಳು ಟೀಂ ಇಂಡಿಯಾವನ್ನು ಹುರಿದುಂಬಿಸೋಕೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ಪಂಜಾಬಿ ಸಾಂಗ್​ ಹಾಕಿ ಗ್ಯಾಲರಿಯಲ್ಲಿ ಬಾಂಗ್ರಾ ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೆ ಬೌಂಡರಿ ಬಳಿ ಫೀಲ್ಡ್​ ಮಾಡುತ್ತಿದ್ದ ಧವನ್​ ಇದನ್ನು ಕಂಡು ಖುಷ್​ ಆಗಿ ಮೈದಾನದಲ್ಲಿಯೇ ಡ್ಯಾನ್ಸ್​ ಮಾಡಿ ಫ್ಯಾನ್ಸ್​ಗೆ ಮನೋರಂಜನೆ ನೀಡಿದ್ದಾರೆ.

ಇತ್ತ ಮೈದಾನದಲ್ಲಿ ಗಬ್ಬರ್​ ಕುಣಿದು ಕುಪ್ಪಳಿಸುತ್ತಿದ್ದರೆ, ಅತ್ತ ಕಾಮೆಂಟರಿ ಬಾಕ್ಸ್​ನಲ್ಲಿ ಹರ್ಭಜನ್​ ಸಿಂಗ್​ ಮತ್ತು ಡೇವಿಡ್​ ಲಾಯ್ಡ್​ ಕೂಡ ಬಾಂಗ್ರಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಈ ಮೂಲಕ ಧವನ್​ ಡ್ಯಾನ್ಸ್​ಗೆ ಸಾಥ್​ ನೀಡಿದರು. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಧವನ್​ ಡ್ಯಾನ್ಸ್​ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸದ್ಯ ಮೊದಲ ದಿನದ ಅಂತ್ಯಕ್ಕೆ ಆತಿಥೇಯ ಇಂಗ್ಲೆಂಡ್​ ತಂಡ 7 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸಿದೆ. ಜಾಸ್​ ಬಟ್ಲರ್​ ಹಾಗೂ ಆದಿಲ್​ ರಶೀದ್​ ಅವರು ಎರಡನೇ ದಿನದಾಟವನ್ನು ಮುಂದುವರಿಸಲು ಕಾದು ಕುಳಿತಿದಿದ್ದಾರೆ. (ಏಜೆನ್ಸೀಸ್​)

https://twitter.com/DRVcricket/status/1038118345248305152

https://twitter.com/DRVcricket/status/1038119703108042752