ಪಾಕ್​ ಓಪನರ್​ ಫಖರ್ ಝಮನ್ ಔಟಾದ ಪರಿ ಕಂಡು ನೆಟ್ಟಿಗರ ವ್ಯಂಗ್ಯ

ದುಬೈ: ಏಷ್ಯಾ ಕಪ್​ ಟೂರ್ನಿಯ ಎರಡೂ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲನ್ನು ಅನುಭವಿಸಿ ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಈ ಮಧ್ಯೆ ಭಾರತದ ವಿರುದ್ಧ ಭಾನುವಾರ ನಡೆದ ಎರಡನೇ ಪಂದ್ಯದ ವೇಳೆ ಪಾಕ್​ ತಂಡದ ಆರಂಭಿಕ ಆಟಗಾರ ಫಖರ್ ಝಮನ್ ಔಟಾದ ಪರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯ ಸಾಧಿಸಿದ್ದ ಫಖರ್ ಝಮನ್ ಟೂರ್ನಿಯಲ್ಲಿ ವೈಯಕ್ತಿಕವಾಗಿ ಕೇವಲ 31 ರನ್ ಮಾತ್ರ ಗಳಿಸಿದ್ದಾರೆ.​ ಭಾನುವಾರ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಕುಲದೀಪ್​ ಯಾದವ್​ ಬೌಲಿಂಗ್​ನಲ್ಲಿ ವಿಚಿತ್ರವಾಗಿ ಔಟ್​ ಆದರು.

ಯಾದವ್​ ಎಸೆದ 14ನೇ ಓವರ್​ನಲ್ಲಿ ಸ್ವೀಪ್​ ಮಾಡಲು ಹೋದ ಝಮನ್ ಸ್ಲಿಪ್​ ಆಗಿ ಬಿದ್ದರು. ಈ ವೇಳೆ ಟೀ ಇಂಡಿಯಾದ ಮನವಿಗೆ ಎಲ್​ಬಿಡಬ್ಳ್ಯೂ ನಿರ್ಣಯವನ್ನು ಅಂಪೈರ್ ನೀಡಿದರು.​

ಔಟ್​ ಆಗಿದ್ದನ್ನು ಪುನಃ ಪರಿಶೀಲಿಸಿದಾಗ ಚೆಂಡು ಝಮನ್​ ಅವರ ಗ್ಲೋವ್ಸ್​ಗೆ ತಾಕಿರುವುದು ಗೊತ್ತಾಗಿದೆ. ಆದರೂ​ ಥರ್ಡ್​ ಅಂಪೈರ್​ಗೆ ಮನವಿ ಮಾಡದೆ ಝಮನ್ ಮೈದಾನದಿಂದ ಹೊರ ನಡೆದರು.

ಝಮನ್ ಅವರ ಅವಿವೇಕದ ಆಟಕ್ಕೆ ಅಸಮಾಧಾನಗೊಂಡಿರುವ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)

https://twitter.com/KabaliOf/status/1043843663418265600

https://twitter.com/Saqlain_Cricket/status/1043844282677891072