VIDEO| ಅಮೆರಿಕ ಮಹಿಳೆಯ ಮನೆಯ ಸಿಸಿಕ್ಯಾಮೆರಾದಲ್ಲಿ ಪತ್ತೆಯಾದ ವಿಚಿತ್ರ ದೃಶ್ಯ ನೋಡಿದರೆ ಶಾಕ್​ ಖಂಡಿತ

ವಾಷಿಂಗ್ಟನ್​: ಸಾಮಾನ್ಯ ದಿನಗಳಂತೆ ಭಾನುವಾರ ತಮ್ಮ ಸೆಕ್ಯೂರಿಟಿ ಕ್ಯಾಮೆರಾ ಫುಟೇಜ್​ ಅನ್ನು ಪರಿಶೀಲನೆ ನಡೆಸಿದ ಅಮೆರಿಕದ ಮಹಿಳೆಯೊಬ್ಬಳು ವಿಚಿತ್ರವಾದ ದೃಶ್ಯವನ್ನು ಕಂಡು ಅಚ್ಚರಿಗೆ ಒಳಗಾಗಿರುವ ಘಟನೆ ನಡೆದಿದೆ. ಎಲ್ಫ್​ (ಜರ್ಮನಿಯ ಪುರಾಣದಲ್ಲಿ ಉಲ್ಲೇಖವಾಗಿರುವ ಮಾನವ ರೀತಿಯ ಅತೀಂದ್ರಿಯ ಶಕ್ತಿ) ರೀತಿಯ ದೃಶ್ಯವನ್ನು ಮಹಿಳೆ ನೋಡಿದ್ದಾಳೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಿವಿಯನ್​ ಗೊಮೆಜ್​ ಎಂಬ ಮಹಿಳೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದುವರೆಗೂ 10 ಮಿಲಿಯನ್​ ಮಂದಿ ವಿಡಿಯೋ ವೀಡಿಯೋ ವೀಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಮಹಿಳೆ, ಭಾನುವಾರ ಬೆಳಗ್ಗೆ ನಾನು ಎದ್ದು ಕ್ಯಾಮೆರಾವನ್ನು ನೋಡಿದಾಗ ವಿಚಿತ್ರವಾದ ದೃಶ್ಯವನ್ನು ನೋಡಿದೆ. ಅದನ್ನು ಏನು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಮೊದಲಿಗೆ ನನ್ನ ಮನೆಯ ಮುಖ್ಯ ದ್ವಾರದಿಂದ ಯಾರೋ ಒಬ್ಬರು ನಡೆದುಕೊಂಡು ಹೋಗುತ್ತಿರುವ ನೆರಳನ್ನು ನೋಡಿದೆ. ಬಳಿಕ ವಿಚಿತ್ರವಾದ ದೃಶ್ಯವನ್ನು ನೋಡಿದೆ. ಈ ರೀತಿಯ ದೃಶ್ಯವನ್ನು ಯಾರಾದರೂ ಅವರ ಕ್ಯಾಮೆರಾದಲ್ಲಿ ನೋಡಿದ್ದಾರೆಯೇ ಎಂದು ಮಹಿಳೆ ಪ್ರಶ್ನಿಸಿದ್ದಾರೆ.

ವಿಡಿಯೋವನ್ನು ನೋಡಿದ ಹಲವರು ತಮ್ಮದೇ ಶೈಲಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದು ಒಂದು ರೀತಿಯ ಎಲ್ಫ್​ ಅಥವಾ ಗೊಬ್ಲಿನ್​(ಯೂರೋಪ್​ ಪುರಾಣದ ಪ್ರಕಾರ ರಾಕ್ಷಸ ಜೀವಿ) ಎಂದು ಹೇಳಿದ್ದಾರೆ. ಹ್ಯಾರಿ ಪಾಟರ್​ ಚಿತ್ರ ಸರಣಿಯಲ್ಲಿ ಕಂಡುಬರುವ ಡಾಬಿ ಪಾತ್ರಧಾರಿಯ ರೀತಿಯಲ್ಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

So I woke up Sunday morning and saw this on my camera and am trying to figure out…what the heck?? First I saw the shadow walking from my front door then I saw this thing….has anyone else seen this on their cameras?? The other two cameras didn’t pick it up for some reason.

Vivian Gomez ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 6, 2019

3 Replies to “VIDEO| ಅಮೆರಿಕ ಮಹಿಳೆಯ ಮನೆಯ ಸಿಸಿಕ್ಯಾಮೆರಾದಲ್ಲಿ ಪತ್ತೆಯಾದ ವಿಚಿತ್ರ ದೃಶ್ಯ ನೋಡಿದರೆ ಶಾಕ್​ ಖಂಡಿತ”

  1. ಇವನ್ನೆಲ್ಲಾ ನಂಬಲಾಗುವುದಿಲ್ಲ. ಈ ಲೋಕದಲ್ಲಿ ಅಂತಹ ವಿಚಿತ್ರಗಳು ಇಲ್ಲವೇ ಇಲ್ಲ.

Leave a Reply

Your email address will not be published. Required fields are marked *