Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಪಾಕ್​ ಆಟಗಾರನ ಎಡವಟ್ಟು: ಕ್ರಿಕೆಟ್​ ಇತಿಹಾಸದಲ್ಲಿ ಹಿಂದೆಂದೂ ನೋಡಿರದಂತಹ ರನೌಟ್​!

Friday, 19.10.2018, 10:42 AM       No Comments

ನವದೆಹಲಿ: ಕ್ರಿಕೆಟ್​ ಲೋಕದಲ್ಲಿ ಹಲವು ವಿಚಿತ್ರ ಸಂಗತಿಗಳನ್ನು ಕಾಣಸಿಗುತ್ತವೆ. ಬೌಲಿಂಗ್​, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್​​ ಮಾಡುವ ವೇಳೆ ಹಲವು ಮನರಂಜನೀಯ ಕ್ಷಣಗಳು ಕ್ರೀಡಾಭಿಮಾನಿಗಳಿಗೆ ಸಿಕ್ಕರೂ, ಅದೇ ಮನರಂಜನೆ ಆಟಗಾರರನ್ನು ಪೇಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.​

ಗುರುವಾರ ಅಬುದಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಆಟಗಾರರು ಮಾಡಿದ ಒಂದು ಎಡವಟ್ಟು ಸಾಮಾಜಿಕ ತಾಲತಾಣದಲ್ಲಿ ಪಾಕ್​ ತಂಡ ಮತ್ತೊಮ್ಮೆ ನಗೆಪಾಟಲಿಗೆ ಗುರಿಯಾಗುವಂತೆ ಮಾಡಿದೆ.

ಆಶಿಸ್​ ತಂಡದ ಬೌಲರ್​ ಪೀಟರ್​ ಸಿಡ್ಲ್ ಎಸೆದ 52ನೇ ಓವರ್​ನಲ್ಲಿ​ ಚೆಂಡು ಪಾಕ್​ ಆಟಗಾರ ಅಝರ್​ ಅಲಿ ಬ್ಯಾಟಿಗೆ ತಾಗಿ ಥರ್ಡ್​ ಮ್ಯಾನ್​ ವಿಭಾಗದಲ್ಲಿ ಬೌಂಡರಿ ಗೆರೆಯತ್ತ ಸಾಗುತ್ತಿತ್ತು. ಹೊಡೆತದಲ್ಲಿ ಬಲವಿಲ್ಲದಿದ್ದರಿಂದ ಚೆಂಡು ನಿಧಾನಗತಿಯಲ್ಲಿ ಸಾಗಿ ಬೌಂಡರಿ ಗೆರೆಯ ಸಮೀಪ ಹೋಗಿ ನಿಂತ್ತಿತ್ತು. ಇದನ್ನು ಗಮನಿಸಿದ ಪಾಕ್​ ಆಟಗಾರ ಆಲಿ ಬೌಂಡರಿ ಎಂದು ಭಾವಿಸಿ ಮತ್ತೊಬ್ಬ ಆಟಗಾರ ಅಸಾದ್​ ಆಶೀಫ್ ಜತೆ ಕ್ರೀಸ್​ ಮಧ್ಯದಲ್ಲಿ ಸಂಭ್ರಮಿಸುತ್ತಾ ನಿಂತಿದ್ದರು.

ಬೌಂಡರಿ ಗೆರೆ ಬಳಿಯಿದ್ದ ಚೆಂಡನ್ನು ಆಶಿಸ್​ ಫೀಲ್ಡರ್​ ಮಿಚೆಲ್​ ಸ್ಟಾರ್ಕ್​ ತೆಗೆದುಕೊಂಡು ವಿಕೆಟ್​ ಕೀಪರ್​ ಹಾಗೂ ನಾಯಕ ಟೀಮ್​ ಪೈನೆಗೆ ಎಸೆಯಲು ಅದನ್ನು ಹಿಡಿದು ರನ್​ ಔಟ್​ ಮಾಡುವ ಮೂಲಕ ಆಸ್ಟ್ರೇಲಿಯಾ ಪಾಳಯದಲ್ಲಿ ಸಂಭ್ರಮ ಮನೆಮಾಡಿತ್ತು. ಇತ್ತ ತಮ್ಮ ಎಡವಟ್ಟಿನಿಂದ ವಿಕೆಟ್​ ಕಳೆದುಕೊಂಡ ಅಲಿ ಸಪ್ಪೆ ಮೊರೆ ಹಾಕಿಕೊಂಡು ಫೆವಿಲಿಯನ್​ ಕಡೆ ತೆರಳಿದರು. ಈ ಮೂಲಕ ಈ ಒಂದು ರನ್​ ಔಟ್​ ಕ್ರಿಕೆಟ್​ ಇತಿಹಾಸದಲ್ಲಿ ದಾಖಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top