ಹೈದರಾಬಾದ್/ನವದೆಹಲಿ : ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಜನರಿಗೆ ಕರೊನಾ ಲಸಿಕಾ ಅಭಿಯಾನ ತೆರೆದುಕೊಂಡ ದಿನವೇ, ರಷ್ಯಾದ ಸ್ಪುಟ್ನಿಕ್ ವಿ ಕರೊನಾ ಲಸಿಕೆಯ ಮೊದಲ ಕನ್ಸೈನ್ಮೆಂಟ್ ಇಂದು ಹೈದರಾಬಾದ್ ತಲುಪಿದೆ. ಭಾರತದ ಎರಡು ಕರೊನಾ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ನೊಂದಿಗೆ ಇದೀಗ ಸ್ಪುಟ್ನಿಕ್ ವಿ ಕೂಡ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗಿದೆ.
“ಇದು ಸ್ಪುಟ್ನಿಕ್ ವಿ ಲಸಿಕೆಯ 1.5 ಲಕ್ಷ ಡೋಸ್ಗಳನ್ನು ಒಳಗೊಂಡ ಮೊದಲನೇ ಕನ್ಸೈನ್ಮೆಂಟ್. ಇನ್ನೂ ಮಿಲಿಯನ್ಗಟ್ಟಲೆ ಡೋಸ್ಗಳು ಮುಂದೆ ಬರಲಿವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಭಾರತ, ರಷ್ಯಾ ಮತ್ತು ಬೇರೆ ದೇಶಗಳಲ್ಲಿ ಬಳಸಲು ಭಾರತದಲ್ಲೇ ಸ್ಪುಟ್ನಿಕ್ ವಿ ಲಸಿಕೆಯನ್ನು ತಯಾರಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
ಇಂದು ಸ್ಪುಟ್ನಿಕ್ ವಿ ಕರೊನಾ ಲಸಿಕೆಯು ಹೈದರಾಬಾದ್ ವಿಮಾನ ನಿಲ್ದಾಣ ತಲುಪಿದಾಗಿನ ದೃಶ್ಯವನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ:
#WATCH The first consignment of Sputnik V vaccines from Russia arrive in Hyderabad pic.twitter.com/PqH3vN6ytg
— ANI (@ANI) May 1, 2021
“ಕರೊನಾ ವಿರುದ್ಧ ಹೋರಾಟಕ್ಕೆ ಸ್ಪುಟ್ನಿಕ್-ವಿ ಲಸಿಕೆ ಭಾರತದ ಶಸ್ತ್ರಾಗಾರ ಸೇರಿದೆ. ಈ ಮೂರನೇ ಆಯ್ಕೆಯು ನಮ್ಮ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಲಸಿಕಾ ಅಭಿಯಾನಕ್ಕೆ ವೇಗ ನೀಡುತ್ತದೆ” ಎಂದಿರುವ ಬಾಗ್ಚಿ, ಈ ಸಹಾಯಕ್ಕೆ ಭಾರತದ ದೀರ್ಘಾವಧಿಯ ಮಿತ್ರ ರಷ್ಯಾಗೆ ಧನ್ಯವಾದ ಎಂದಿದ್ದಾರೆ. (ಏಜೆನ್ಸೀಸ್)