ಪಾಂಡವಪುರ: ಪಟ್ಟಣದ ಹನುಮಂತನಗರದಲ್ಲಿ ಪುರಸಭೆ ವತಿಯಿಂದ ಬುಧವಾರ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸದಸ್ಯ ಚಂದ್ರು ಮಾತನಾಡಿ, ಪುರಸಭೆಯಿಂದ ಪ್ರತಿ ಮನೆಗೆ ಬಕೆಟ್ ವಿತರಿಸಲಾಗಿದ್ದು, ಪ್ರತಿಯೊಬ್ಬರು ಹಸಿ ಕಸವನ್ನು ಹಸಿರು ಬಕೆಟ್ ಮತ್ತು ಒಣ ಕಸವನ್ನು ನೀಲಿ ಬಕೆಟ್‌ಗೆ ಹಾಕಿ ಮನೆ ಬಾಗಿಲಿಗೆ ಬರುವ ಪುರಸಭೆ ವಾಹನಕ್ಕೆ ನೀಡಬೇಕು ಎಂದು ಕೋರಿದರು. ಪರಿಸರ ಇಂಜಿನಿಯರ್ ಶಫಿನಾಜ್, ಪುರಸಭೆ ನೌಕರರಾದ ಶೇಖರ್, ಸುಬ್ರಹ್ಮಣ್ಯ, ನಂದೀಶ ಇತರರು ಇದ್ದರು.
ತ್ಯಾಜ್ಯ ನಿರ್ವಹಣೆ ಜಾಗೃತಿ
ಪಾಂಡವಪುರ ಪಟ್ಟಣದ ಹನುಮಂತ ನಗರದಲ್ಲಿ ಪುರಸಭೆ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುರಸಭೆ ಸದಸ್ಯ ಚಂದ್ರು, ಪರಿಸರ ಇಂಜಿನಿಯರ್ ಶಫಿನಾಜ್, ಸುಬ್ರಹ್ಮಣ್ಯ ಇತರರು ಇದ್ದರು.