16 C
Bangalore
Thursday, December 12, 2019

ನನ್ನನ್ನು ಮನೆಯಲ್ಲೇ ಬಂಧಿಸಿ ಇಡಲಾಗಿತ್ತು: ಗೃಹ ಸಚಿವರು ಸುಳ್ಳು ಹೇಳಿದ್ದಾರೆ: ಫಾರೂಕ್​ ಅಬ್ದುಲ್ಲಾ

Latest News

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ...

ಡಿಸೆಂಬರ್ 14 ರಂದು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯಿಂದ ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಕೊಡಮಾಡುವ ಪ್ರಸಕ್ತ ಸಾಲಿನ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯು...

ನವದೆಹಲಿ: ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರನ್ನು ಬಂಧಿಸಿಯೂ ಇಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ 81 ವರ್ಷದ ಫಾರೂಕ್‌ ಅಬ್ದುಲ್ಲಾ ಕಿಡಿಕಾರಿದ್ದು, ನನ್ನ ಮನೆಯಲ್ಲೇ ನನ್ನನ್ನು ಬಂಧನದಲ್ಲಿ ಇಡಲಾಗಿತ್ತು. ಆದರೆ ಗೃಹ ಸಚಿವರ ಈ ರೀತಿಯ ಸುಳ್ಳು ಹೇಳಿರುವುದರಿಂದಾಗಿ ನನಗೆ ನೋವಾಗಿದೆ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿಯ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ನಾಯಕಿ ಸುಪ್ರೀಯಾ ಸುಳೆ ಅವರು, ಸದನದಲ್ಲಿ ಹಿರಿಯ ನಾಯಕ ಫಾರೂಕ್‌ ಅಬ್ದುಲ್ಲಾ ಅನುಪಸ್ಥಿತಿ ಎದ್ದು ಕಾಣಿಸುತ್ತಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮಿತ್‌ ಷಾ, ಫಾರುಕ್‌ ಅಬ್ದುಲ್ಲಾ ಅವರನ್ನು ವಶಕ್ಕೆ ಪಡೆದಿಲ್ಲ ಅಥವಾ ಬಂಧಿಸಿಯೂ ಇಲ್ಲ. ಅವರ ಬಯಕೆಯಂತೆಯೇ ಅವರು ಮನೆಯಲ್ಲಿದ್ದಾರೆ ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಫಾರೂಕ್​ ಅಬ್ದುಲ್ಲಾ ನನ್ನ ರಾಜ್ಯವು ಹೊತ್ತಿ ಉರಿಯುತ್ತಿರುವಾಗ, ನನ್ನ ಜನರಿಗೆ ಜೈಲಿನಲ್ಲಿ ಮರಣದಂಡನೆ ವಿಧಿಸುವಾಗ ನಾನೇಕೆ ನನ್ನ ಮನೆಯೊಳಗೆ ಕುಳಿತುಕೊಳ್ಳುತ್ತೇನೆ? ನಾನು ನಂಬಿದಂತಹ ಭಾರತ ಇದಲ್ಲ ಎಂದು ಭಾವನಾತ್ಮಕವಾಗಿ ವಿವರಿಸುತ್ತಾ, ನನ್ನನ್ನು ಬಂಧಿಸಿಲ್ಲ ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ನನ್ನನ್ನು ಬಂಧಿಸಲು ನೀವು ಯಾರು? ಎಂದು ಭದ್ರತಾ ಸಿಬ್ಬಂದಿಯನ್ನು ನಾನು ಕೇಳಿದೆ. ಇದರಿಂದಾಗಿ ನನ್ನ ಎಷ್ಟು ಮಂದಿ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗುತ್ತದೆಯೋ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಅವರು ಪ್ರದೇಶಗಳನ್ನು ಒಡೆಯುತ್ತಿದ್ದಾರೆ, ಅಲ್ಲದೆ ಅವರು ಹೃದಯಗಳನ್ನು ಭಾಗ ಮಾಡಲು ಮುಂದಾಗಿದ್ದಾರೆಯೇ? ಅವರು ಹಿಂದು ಮತ್ತು ಮುಸ್ಲಿಂರನ್ನು ಒಡೆಯುತ್ತಿದ್ದಾರೆಯೇ? ನನ್ನ ಭಾರತ ಎಲ್ಲರಿಗೂ ಸೇರಿದ್ದು, ಇಲ್ಲಿ ಪ್ರತಿಯೊಬ್ಬರು ಜಾತ್ಯಾತೀತತೆ ಮತ್ತು ಏಕತೆಯಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ಕಳೆದ 70 ವರ್ಷಗಳಿಂದಲೂ ನಾವು ಹೋರಾಡುತ್ತಲೇ ಇದ್ದೇವೆ ಮತ್ತು ಇಂದು ನಾವು ಅಪರಾಧಿಗಳಾಗಿದ್ದೇವೆ.
ಸರ್ವಾಧಿಕಾರಿಯ ಅಧಿಕಾರವನ್ನು ಅವರು ಹೇರುತ್ತಿದ್ದಾರೆ. ಎಷ್ಟು ಜನ ಬಂಧನಕ್ಕೊಳಗಾಗಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಯಾರೊಬ್ಬರು ಒಳಗೆ ಬರಲು ಅಥವಾ ಹೊರಹೋಗಲು ಆಗುತ್ತಿಲ್ಲ. ನಾವು ಗೃಹ ಬಂಧನದಲ್ಲಿದ್ದೇವೆ ಎಂದು ತಿಳಿಸಿದರು.

ನನ್ನ ಪುತ್ರ ಒಮರ್‌ ಅಬ್ದುಲ್ಲಾ ಮತ್ತು ಮತ್ತೋರ್ವ ಮಾಜಿ ಮುಖ್ಯಮಂತ್ರಿಯ ಬಂಧನವಾಗಿದೆ ಎಂಬುದನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಯಾವುದೇ ಲಿಖಿತ ಆದೇಶವಿಲ್ಲದೆಯೇ ನಾವು ಗೃಹಬಂಧನಕ್ಕೊಳಗಾಗಿದ್ದೇವೆ. ನಾವು ಕಾನೂನಿನಲ್ಲಿ ನಂಬಿಕೆಯಿಟ್ಟಿದ್ದೇವೆ. ನಾವು ಕಲ್ಲು ತೂರಾಟಗಾರರೋ ಅಥವಾ ಕೊಲೆಗಾರರಲ್ಲ. ನಾವು ಎಂದಿಗೂ ಬಂದೂಕಿನ ದಾರಿಯನ್ನು ಹಿಡಿದಿಲ್ಲ. ನಾವು ಮಹಾತ್ಮ ಗಾಂಧಿಯ ದಾರಿಯನ್ನು ಅನುಸರಿಸಿದ್ದೇವೆ. ಏಕೆ ಈ ರೀತಿ ಮಾಡಲಾಗಿದೆ? ಏನು ಬೇಕಾಗಿದೆ?. ಅಕಸ್ಮಾತ್‌ ಇದು ಸಂವಿಧಾನದ ಪ್ರಕಾರವೇ ನಡೆಯುತ್ತಿದ್ದರೆ, ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವಿರುವಾಗ ಏಕೆ ಗೃಹ ಸಚಿವರು ಕಾಯುತ್ತಿಲ್ಲ. ಆರ್ಟಿಕಲ್‌ 370 ರಾಷ್ಟ್ರಪತಿಯವರ ಆದೇಶವಲ್ಲ, ಇದು ಸಾಂವಿಧಾನಿಕ ಭರವಸೆಯಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...