ಆಸಿಸ್​​ ವಿರುದ್ಧ ಟೆಸ್ಟ್​ ಸರಣಿಗೆ ಆಯ್ಕೆಯಾಗದ ಧವನ್​ ಬೇಸರಗೊಂಡು ಹೇಳಿದ್ದೇನು?

ಸಿಡ್ನಿ: ಟೀಂ ಇಂಡಿಯಾದ ಗಬ್ಬರ್​ ಸಿಂಗ್​ ಶಿಖರ್​ ಧವನ್​ ತಮಗಾದ ಬೇಸರವನ್ನ ಹೊರ ಹಾಕಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಧವನ್​ ಬೇಸರಗೊಳ್ಳಲು ಕಾರಣ ಏನೆಂಬುದನ್ನು ತಿಳಿಯಲು ಈ ಸ್ಟೋರಿ ಓದಿ…

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಶಿಖರ್​ ಧವನ್​ ಆಯ್ಕೆಯಾಗಿಲ್ಲ ಎಂಬುದು ಹಳೇ ಸುದ್ದಿಯಾದರೂ ಕೂಡ ಗಬ್ಬರ್ ಸಿಂಗ್​ ಈ ಬಗ್ಗೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ನನಗೆ ಸ್ವಲ್ಪ ಬೇಸರ ಆಗಿದೆ. ಹಾಗಂತ ನಾನು ಕೊರಗಿ ಕೂರುವುದಿಲ್ಲ. ನಾನು ನನ್ನ ಆಟವನ್ನು ಇಷ್ಟಪಡುತೇನೆ. ಈ ಬಿಡುವಿನ ಸಮಯದಲ್ಲಿ ಹೆಚ್ಚಿನ ಅಭ್ಯಾಸ ಮಾಡಿ ಫಿಟ್​ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದಕ್ಕೆ ಇದೇ ಉತ್ತಮವಾದ ಸರಣಿ ಎಂದು ನನಗನಿಸುತ್ತದೆ. ಮೂರು ವಿಭಾದಲ್ಲೂ ನಾವು ಉತ್ತಮ ಆಟವನ್ನು ಆಡಬೇಕು. ಬ್ಯಾಟಿಂಗ್​, ಫೀಲ್ಡಿಂಗ್​, ಬೌಲಿಂಗ್​ ಹಾಗೂ ಕ್ಯಾಚಿಂಗ್​ನಲ್ಲಿ ನಾವು ಬಲವಾಗಬೇಕು. ಸ್ಥಿರ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾವನ್ನು ಬಗ್ಗುಬಡಿಯುವ ಪ್ರಯತ್ನ ಮಾಡಬೇಕು ಎಂದು 33 ವರ್ಷದ ಸ್ಟಾರ್​ ಆಟಗಾರ ಧವನ್​​ ಸಲಹೆ ನೀಡಿದ್ದಾರೆ.

ವಿಶ್ವಕಪ್​ಗೆ ಇನ್ನು ಆರೇ ತಿಂಗಳು ಬಾಕಿ ಇದೆ. ಹೀಗಿರುವಾಗ ಅದರ ಕಡೆ ಗಮನಹರಿಸಿ ಉತ್ತರ ಪ್ರದರ್ಶನ ನೀಡಬೇಕಿದ್ದು, ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕಿದೆ ಎಂದು ಧವನ್​ ವಿಶ್ವಕಪ್​ಗೆ ಸಜ್ಜಾಗುತ್ತಿದ್ದಾರೆ. (ಏಜೆನ್ಸೀಸ್​)