ರಜೆ ಪಡೆದು ಊರಿಗೆ ಬಂದಿದ್ದ ಜಮಖಂಡಿ ಯೋಧ ಅಪಘಾತದಲ್ಲಿ ಸಾವು

ಬಾಗಲಕೋಟೆ: ತುಳಸಿಗೇರಿ ಸಮೀಪ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ, ಜಮಖಂಡಿಯ ಯೋಧ ಮೃತಪಟ್ಟಿದ್ದಾರೆ.

ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರಾದ ಯೋಧ ವಿರೂಪಾಕ್ಷಯ್ಯ ಮಠಪತಿ (23) ಮೃತರಾಗಿದ್ದು ಇವರು ಆಸ್ಸಾಂನ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ಪಡೆದು ನ.25ರಂದು ಊರಿಗೆ ಬಂದಿದ್ದರು. ಡಿ.25 ರಂದು ವಾಪಸ್​ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

ಅಪಘಾತದಲ್ಲಿ ಯೋಧ ವಿರೂಪಾಕ್ಷಯ್ಯ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.