More

    ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಒಲಿದ ಮೊದಲ ಏಕದಿನ ಪಂದ್ಯದ ಗೆಲುವು; ಭಾರತ ವಿರುದ್ಧ 10 ವಿಕೆಟ್​ಗಳ ಭರ್ಜರಿ ಜಯ

    ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಪ್ರವಾಸಿ ಆಸ್ಟ್ರೇಲಿಯಾ ತಂಡದ ಪಾಲಾಗಿದೆ.

    ಟಾಸ್​ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿ 255 ರನ್​ಗೆ ಆಲೌಟ್​ ಆಗಿತ್ತು. ಬಳಿಕ ಬ್ಯಾಟಿಂಗ್​ಗೆ ಇಳಿದು 256 ರನ್​ಗಳ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 37.4 ಓವರ್​ಗಳಲ್ಲಿ ಒಂದೂ ವಿಕೆಟ್​ ನಷ್ಟವಿಲ್ಲದೆ 258 ರನ್​ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.

    ಆಸ್ಟ್ರೇಲಿಯಾದ ಡೇವಿಡ್ ವಾರ್ನರ್​ 128*(112) ಮತ್ತು ಆರೋನ್​ ಫಿಂಚ್​ 110* (114) ರನ್​ ಗಳಿಸುವ ಮೂಲಕ ಉತ್ತಮ ಜತೆಯಾಟ ಆಡಿದರು. ಇವರಿಬ್ಬರ ಶತಕವೇ ಆಸ್ಟ್ರೇಲಿಯಾದ ಗೆಲುವಿಗೆ ಮುಖ್ಯ ಕಾರಣವಾಯಿತು.

    ಇಂದಿನ ಮ್ಯಾನ್​ ಆಫ್​ ದಿ ಮ್ಯಾಚ್​ ಆಗಿ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್ ಹೊರಹೊಮ್ಮಿದರು. (ಏಜೆನ್ಸೀಸ್​)

    ಆಸಿಸ್​ ಮಾರಕ ಬೌಲಿಂಗ್​ ದಾಳಿ: 255 ರನ್​ಗೆ ಟೀಮ್​ ಇಂಡಿಯಾ ಆಲೌಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts