More

    ಯುದ್ಧೋನ್ಮಾದ ಮತ್ತು ಉಳಿವಿನ ಪ್ರಶ್ನೆ

    ಯುದ್ಧೋನ್ಮಾದ ಮತ್ತು ಉಳಿವಿನ ಪ್ರಶ್ನೆಥಟ್ ಅಂತ ಪೃಥ್ವಿಯು ರಕ್ತ ನೆಕ್ಕುವ ಯುದ್ಧೋನ್ಮಾದದ ಅಂಚಿಗೆ ಬಂದು ನಿಂತಿತ್ತು. ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವರ್ಷ 2020ರ ಪ್ರಾರಂಭಕ್ಕೆ ರಣಾಂಗಣವನ್ನು ನಿರ್ವಿುಸಿ ಭೂಮಿಯನ್ನು ರಕ್ತದ ಮಡುವಿಗೆ ತಳ್ಳುವ ರೀತಿಯಲ್ಲಿ ಇರಾನ್ ದೇಶವನ್ನು ಕೆಣಕಿದರು. 2019ರ ಕೊನೆಯಲ್ಲಿ ಆವಿರ್ಭವಿಸಿದ ಕಂಕಣ ಸೂರ್ಯಗ್ರಹಣ ಟ್ರಂಪ್ ಅವರನ್ನು ಉದ್ರೇಕಿಸಿತೇ? ಉರಿಯುವ ಅಗ್ನಿಪಿಂಡವಾದ – ಮೊದಲೇ ಅಗ್ನಿತತ್ವದ್ದೂ ಆದ – ಧನುರಾಶಿಯಲ್ಲಿ ಚಂದ್ರ, ಕೇತು, ಶನಿ, ಗುರು ಮತ್ತು ಬುಧಗ್ರಹಗಳು ಬೀಡುಬಿಟ್ಟಿದ್ದವು. ರಕ್ತರಂಜಿತವಾದುದನ್ನು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಕುಜಗ್ರಹನದಾದ ಮೇಷರಾಶಿಯಿಂದ ದುಃಸ್ಥಾನವಾದ ಅಷ್ಟಮದಲ್ಲಿ ಅಂದರೆ ಕುಜಗ್ರಹದ ಮನೆಯೇ ಆದ ವೃಶ್ಚಿಕರಾಶಿಯಲ್ಲಿದ್ದ ಅಮೆರಿಕದ ಮಿಲಿಟರಿ ಪಡೆ ಜನವರಿ ಮೂರರಂದು ಇರಾನ್ ದೇಶದ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಯನ್ನು ಯುದ್ಧ ಕ್ಷಿಪಣಿಯ ಮೂಲಕ ಹೊಡೆದುರುಳಿಸಿತು. ಬೇಕಿರದ ರಕ್ತದಾಹಕ್ಕೆ ಟ್ರಂಪ್ ಕೈಹಾಕಿದರು. ಸುಲೇಮಾನಿ ಪ್ರಪಂಚದ ಬಹುದೊಡ್ಡ ಭಯೋತ್ಪಾದಕ ಹಿಂಡಿನ ಹಿಂದಿನ ನೈಜ ಶಕ್ತಿಯಾಗಿದ್ದ ಎಂಬ ಹೇಳಿಕೆಯನ್ನು ಕೂಡ ಟ್ರಂಪ್ ನೀಡಿದರು. ಇರಾನ್ ಕೂಡ ಮಸೀದಿಯ ಮೇಲೆ ಕೆಂಪು ಬಾವುಟವನ್ನು ಹಾರಿಸಿತು. ಇದು ಸೇಡನ್ನು ತೀರಿಸಿಕೊಳ್ಳುವುದರ ಹಿಂದಿನ ಸಂಕೇತ ಎಂದು ಜಗತ್ತು ಗುರುತಿಸಿತು. ಇರಾಕ್ ದೇಶದಲ್ಲಿ ನೆಲೆಯಾಗಿದ್ದ ಅಮೆರಿಕದ ಮಿಲಿಟರಿ ಡೇರೆಗಳ ಮೇಲೆ ಇರಾನ್ ನಾಲ್ಕು ಕ್ಷಿಪಣಿಗಳನ್ನು ಹಾರಿಸಿತು. ಅಮೆರಿಕಕ್ಕೆ ಮಾಡಬೇಕಿರುವ ಶಾಸ್ತಿಯನ್ನು ಮಾಡಿದೆ ಎಂದು ಘೊಷಿಸಿತು. ಟ್ರಂಪ್ ಸುದ್ದಿಗೋಷ್ಠಿ ಕರೆದರು. ಅದು ಯುದ್ಧವನ್ನು ಘೊಷಿಸುವ ಮುಂಚಿನ ಸುದ್ದಿಗೋಷ್ಠಿ ಎಂದು ಜನ ರ್ಚಚಿಸುವಂತಾಯ್ತು. ಆದರೆ ಯುದ್ಧ ಇಲ್ಲ. ಇರಾನ್​ನ ಕ್ಷಿಪಣಿ ದಾಳಿಯಿಂದ ಒಂದು ಕೂದಲು ಕೂಡ ಕೊಂಕಿಲ್ಲ ಎಂದು ಜಗತ್ತಿಗೆ ತಿಳಿಸಿದರು. ಇರಾನ್ ಜಾಗತಿಕವಾಗಿ ಅಪಾಯ ತರಬಲ್ಲ ರಾಷ್ಟ್ರ ಎಂದು ಮತ್ತೆ ಒತ್ತಿ ಹೇಳಿದರು.

    ಟ್ರಂಪ್​ಗೆ ಗುರುಗ್ರಹ ಮುಂದಿನ ಚುನಾವಣೆಯನ್ನು ಗೆಲ್ಲಿಸಬಹುದೇ?

    ಯುದ್ಧೋನ್ಮಾದ ಮತ್ತು ಉಳಿವಿನ ಪ್ರಶ್ನೆಪ್ರಸ್ತುತ ಟ್ರಂಪ್​ಗೆ ಗುರುದಶೆ ನಡೆಯುತ್ತಿದೆ. ಟ್ರಂಪ್ ಪಾಲಿಗೆ ಅತ್ಯಂತ ಒಳ್ಳೆಯ ದಶಾಕಾಲವೂ ಹೌದು. ಆದರೆ ಇದೇ ಗುರು ಟ್ರಂಪ್ ಅವರ ಜಾತಕದ ಅಷ್ಟಮ ಸ್ಥಾನದ ಅಧಿಪತಿಯೂ ಆಗಿ, ಎರಡನೇ ಮನೆಯಾಗಿ ಮಾರಕ ಸ್ಥಳವೂ ಆದ ವಾಕ್ ಸ್ಥಾನದಲ್ಲಿದ್ದು, ತನ್ನ ಸ್ವಂತ ಮನೆಯನ್ನು (ಮರಣದ ಮನೆ) ದೃಷ್ಟಿಸಿದ್ದಾನೆ. ನಷ್ಟಭಾವದಲ್ಲಿರುವ ಶನೈಶ್ಚರನ ದೃಷ್ಟಿಯ ಘಾತವೂ ಗುರುವಿನ ಮೇಲಿದೆ. ಜನವರಿ 24ರವರೆಗೂ ಸಾಡೇಸಾತಿ ಶನಿಕಾಟ ಇದೆ. ದಿಗ್ಬಲ ಪಡೆದ ಬಹುಮುಖ್ಯ ಗ್ರಹ ರವಿಯು ವೃಷಭದಲ್ಲಿ ಉಚ್ಚನಾದ ವಿಷಕಾರಕ ರಾಹುವಿನ ಜತೆಗಿದ್ದಾನೆ.

    ಆರ್ಥಿಕ ಸ್ಥಾನಾಧಿಪತಿಯೂ ಆದ ಬುಧನು ಏಕಾದಶ ಸ್ಥಾನವೂ ಆದ ತನ್ನ ಸ್ವಂತ ಮನೆ ಮಿಥುನದಲ್ಲಿದ್ದಾನೆ. ಟ್ರಂಪ್ ಜಾತಕದ ಲಗ್ನಭಾವದಲ್ಲಿರುವ ಭಾಗ್ಯಾಧಿಪತಿ ಕುಜನು ವರ್ಚಸ್ಸು ನೀಡಿದರೂ, ತನ್ನ ಮಾತೇ ಅಂತಿಮ ಎಂಬ ಹಠದ ಸ್ವಭಾವವನ್ನು ಧಾರೆ ಎರೆಯುತ್ತಾನೆ. ಒಳ್ಳೆಯದನ್ನು ಕೊಡಬೇಕಾದ ಗುರುಗ್ರಹನು ಬರುವ ಅಧ್ಯಕ್ಷೀಯ ಚುನಾವಣೆಯ (ನವೆಂಬರ್ 2020) ಹೊತ್ತಿಗೆ ದುಃಸ್ಥಾನವಾದ ಮಕರರಾಶಿಯನ್ನು ಪ್ರವೇಶಿಸುತ್ತಾನೆ. ಈಗಲೂ ಟ್ರಂಪ್ ಅಧ್ಯಕ್ಷ ಪಟ್ಟದ ಮೇಲೆ ಸ್ಥಾನ ಪದಚ್ಯುತಿಯ ತೂಗುಕತ್ತಿ ಹೊಯ್ದಾಡುತ್ತಲೇ ಇದೆ. ಛೀಮಾರಿ ಹಾಕಿಸಿಕೊಂಡು ವಾಗ್ದಂಡನೆ ವಿಧಿಸಲ್ಪಟ್ಟಿದ್ದರಿಂದ ಟ್ರಂಪ್ ಈಗಾಗಲೇ ಅವಮಾನದಿಂದ ಕಿಡಿಕಿಡಿಯಾಗಿರುವ ವರ್ತಮಾನ ಇದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯವರೆಗೆ ಇರುವೆನೋ, ಇದ್ದರೂ ಮತ್ತೊಮ್ಮೆ ರಿಪಬ್ಲಿಕ್ ಪಕ್ಷದ ಹುರಿಯಾಳಾಗಿ ಚುನಾವಣೆಗೆ ನಿಲ್ಲುವೆನೋ, ನಿಂತರೂ ಗೆಲ್ಲಬಹುದೇ ಇತ್ಯಾದಿ ಪರದಾಟ, ಚಡಪಡಿಕೆ ಟ್ರಂಪ್​ಗೆ ಇದ್ದೇ ಇದೆ. ಡೆಮಾಕ್ರಟಿಕ್ ಪಕ್ಷದಲ್ಲಿ ಅತ್ಯಂತ ಹೆಚ್ಚಿನ ವರ್ಚಸ್ಸಿನ, ವೃದ್ಧಾಪ್ಯ ಆವರಿಸದ ಸೂಕ್ತ ಅಭ್ಯರ್ಥಿಗಳ ಕೊರತೆ ಇದೆ. 74 ವರ್ಷವಾಗಿದ್ದರೂ 54ರ ಹುಮ್ಮಸ್ಸಿನಲ್ಲಿರುವ ವ್ಯಕ್ತಿತ್ವ ಟ್ರಂಪ್ ಪಾಲಿಗೆ ವರವಾಗಿದೆ. ಆದರೂ ಟ್ರಂಪ್ ಅವಮಾನ, ರೊಚ್ಚು, ಭಯ, ಅನಿಶ್ಚಿತತೆಗಳ ನಡುವೆ ಇದ್ದಾರೆ. ಹೆಣ್ಣು, ಹೊನ್ನು, ಮಣ್ಣುಗಳು ಅವರನ್ನು ಎಲ್ಲ ರೀತಿಯ ಅವಸ್ಥಾಂತರಗಳಲ್ಲೂ ನಿಲ್ಲಿಸಿ ನೋಡಿವೆ. ಆರ್ಥಿಕ ಬಲಾಢ್ಯತೆ, ಏನನ್ನೇ ಆದರೂ ದಕ್ಕಿಸಿಕೊಳ್ಳುವ ನಿಗೂಢ ಶಕ್ತಿ, ಆದರೂ ಎಲ್ಲೆಲ್ಲಿಂದಲೋ ಎಲ್ಲ ರೀತಿಯ ಮುಳ್ಳುಗಳು ಚುಚ್ಚಿ ನಲುಗಿಸುವ ನಿಗ್ರಹಿಸಲಾಗದ ಪರದಾಟ ಇದ್ದಿದ್ದೇ. ಶನೈಶ್ಚರನು ಗುರುವನ್ನು ಮಾತಿಗೂ ಮುನ್ನ ಯೋಚಿಸಲಾಗದಂತೆ ದುರ್ಬಲನಾಗಿದ್ದಾನೆ. ಹೀಗಾಗಿ ಟ್ರಂಪ್​ಗೆ – ಏನೇನೋ ಯೋಚನೆಗಳನ್ನು ತನಗೆ ತಾನೇ ಒಮ್ಮೆಯೂ ವಿಮಶಿಸಿಕೊಳ್ಳದೆ ಟೀಕೆಗೆ ಗುರಿಯಾದ ಪ್ರಸಂಗ ನೂರಾರು ಬಾರಿ ಎದುರಾಗಿದೆ.

    ಆದರೆ ಮೃಗಶಿರಾ ನಕ್ಷತ್ರದಲ್ಲಿ ಸ್ಥಿತನಾದ ರಾಹುವಿನಿಂದ ನಿಗೂಢ ಶಕ್ತಿಯನ್ನು ಪಡೆದಿರುವ ಸೂರ್ಯಗ್ರಹನು ಅವರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಈಗ ಸುಲಭವಾಗಿ ಪದಚ್ಯುತಗೊಳಿಸಲು ಸಾಧ್ಯವಾಗದಂತೆ ರಕ್ಷೆಯಲ್ಲಿರಿಸಿ ಕಾಪಾಡುತ್ತಿದ್ದಾನೆ. ವಿರೋಧಿಗಳ ಶಕ್ತಿಯನ್ನು ಛೇದಿಸುವ ಇದು ಒಂದು ರೀತಿಯ ಪವಾಡವೇ ಎನ್ನಿ. ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ, ಭುವನಸುಂದರಿ ಸ್ಪರ್ಧೆಯನ್ನು ಜಾಗತಿಕವಾಗಿ ಏರ್ಪಡಿಸುವ ಮೆಗಾ ಇವೆಂಟ್​ಗಳ ಮೂಲಕ ಟ್ರಂಪ್ ದಿವಾಳಿಯಾದರೂ, ಆರ್ಥಿಕವಾಗಿ ಮತ್ತೆ ಬಲಾಢ್ಯತೆಯನ್ನು ರೂಪಿಸಿಕೊಳ್ಳುವ ಕ್ರಿಯಾಶೀಲತೆಯನ್ನು ಪಡೆದಿದ್ದಾರೆ. 2016ರಲ್ಲಿ ಹಿಲರಿ ಕ್ಲಿಂಟನ್ ವಿರುದ್ಧ ಗೆದ್ದಿದ್ದೇ ಒಂದು ಪವಾಡ. ಮಹಾಚುನಾವಣೆಗಿಂತ ಐದು ದಿನಗಳ ಮುಂಚೆ ಹಿಲರಿ ವಿರುದ್ಧ ಪ್ರಶ್ನಾರ್ಹವಾದ ಅಪವಾದಗಳು ವೈರಲ್ ಆದವು. ಸೋಲಬಹುದಾದ ಟ್ರಂಪ್ ಗೆದ್ದು ಬೀಗಿದರು. ಈ ಬಾರಿಯೂ ಮತ್ತೆ ಪವಾಡವನ್ನು ನಿರೀಕ್ಷಿಸುತ್ತಿದ್ದಾರೆ. ಪದಚ್ಯುತಿಯನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಹುಡುಕಿಕೊಂಡು ಟ್ರಂಪ್​ಗೆ ಮಣ್ಣು ಮುಕ್ಕಿಸುವ ಕೆಲಸ ಡೆಮಾಕ್ರಟಿಕ್ ಪಕ್ಷಕ್ಕೆ ಸುಲಭವಲ್ಲ.

    ಟ್ರಂಪ್ ಸುಳ್ಳುಗಾರರೇ?: ಅವರ ದೇಶದ ಸಾಕಷ್ಟು ಜನ ಟ್ರಂಪ್ ದೊಡ್ಡ ಸುಳ್ಳುಗಾರ ಎಂದು ಮಾತನಾಡಿಕೊಳ್ಳುತ್ತಾರೆ. ‘ಅನೇಕ ಕಂಪನಿಗಳು ದಿವಾಳಿ ಎದ್ದವು ಎಂದು ಬಿಂಬಿಸಿ ತಮ್ಮನ್ನು ಸುರಕ್ಷಿತವಾಗಿಸಿಕೊಂಡರು’ ಎಂದು ಹೇಳುವವರೂ ಅಲ್ಲಿ ಅಧಿಕ. ಅವರು ಗೆಲ್ಲಲು ರಷ್ಯಾ ಕಾರಣವಾಯಿತು ಎಂಬುದನ್ನು ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಜತೆಗಿರುವ ಜನರು ಟ್ರಂಪ್ ಅವರನ್ನು ತೊರೆದುಹೋದ ಅಥವಾ ಟ್ರಂಪ್ ಅವರೇ ಹತ್ತಿರದವರನ್ನು

    ದೂರ ಕಳಿಸಿದ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಬರೋಬ್ಬರಿ ಮೂರು ಮದುವೆ ಆಗಿದ್ದಾರೆ. ಮಗಳು ಟ್ರಂಪ್ ಆಡಳಿತದಲ್ಲಿ ಸುದ್ದಿಯಾಗುತ್ತಿರುವುದು ಪತ್ರಿಕೆಯಲ್ಲಿ ಬರುತ್ತಿರುತ್ತದೆ. ಏನೇ ಆದರೂ ಟ್ರಂಪ್ ಪಾಲಿಗೆ ರಾಹುವು ನಿಗೂಢ ಅನೂಹ್ಯ ಶಕ್ತಿಯೊಂದನ್ನು ಒದಗಿಸುತ್ತಾನೆ. ರಾಹುವಿನ ಬಲವೇ ಅದು. ಎಡವಟ್ಟಾಗಿ ಪರಿವರ್ತನೆಗೊಂಡರೆ ರಾಹು ಆಡುವ ಆಟ ವೈರಿಗಳಿಗೂ ಬೇಡ. ರಾಹು ಮೃದುವಾಗಿದ್ದರೆ ಒಬ್ಬನನ್ನು ರಾಜನನ್ನಾಗಿಸಿ, ಸಾತ್ವಿಕನಾಗಿ ಬಳಸಬಲ್ಲ. ಟ್ರಂಪ್​ಗೆ ಟ್ರಬಲ್ ಶೂಟರ್. ವಾಕ್​ಸ್ಥಾನದ ಗುರುವನ್ನು ಶನೈಶ್ಚರನ ದೃಷ್ಟಿ ಕೆಣಕಿರುವುದರಿಂದಾಗಿ ಸುಳ್ಳುಗಾರ ಎಂಬ ಪಟ್ಟ ಸಿಗುತ್ತಿದೆ. ಆದರೆ ಕುಚೋದ್ಯ ಮಾಡುವವರು, ಅಮೆರಿಕದ ಅಧ್ಯಕ್ಷರಲ್ಲಿ ಯಾರು ಸುಳ್ಳುಗಾರರಲ್ಲ ಎಂಬ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಕಾಂಗ್ರೆಸ್​ನವರು ಮೋದಿಯವರನ್ನು ಟೀಕಿಸುವುದನ್ನು ನೆನಪಿಸಿಕೊಳ್ಳಿ. ಪ್ರತಿಪಕ್ಷದವರು ಆಡಳಿತ ಪಕ್ಷವನ್ನು ಏನೆನ್ನುತ್ತಾರೆ? ಟ್ರಂಪ್ ಜಾತಕದ ಶನೈಶ್ಚರಸ್ವಾಮಿ ಅವರ ಮಾತಿನ ವರಸೆಯನ್ನು ಓರೆಕೋರೆ ಮಾಡುತ್ತಿರುತ್ತಾನೆ.

    ಟ್ರಂಪ್ ಮತ್ತೆ ಯುದ್ಧಕ್ಕೆ ಮುಂದಾಗುವರೇ?: ಟ್ರಂಪ್​ಗೆ ಯುದ್ಧೋನ್ಮಾದ ಇರುವುದಿಲ್ಲ ಎಂದು ಹೇಳಲಾಗದು. ಆದರೆ ಪ್ರಸ್ತುತ ಅವರ ಕುಂಡಲಿಯಲ್ಲಿ ನಡೆಯುತ್ತಿರುವ ಗುರುದಶಾ ಯುದ್ಧಕ್ಕೆ ತೊಡಗಲು ಮುಂದಾಗುವುದಿಲ್ಲ. ಆದರೂ ನಿಗೂಢವಾದ ರಾಹುಗ್ರಹದ ಮೂಲಕ ಶಕ್ತಿ ಪಡೆಯುವ ಅವರ ಜಾತಕದ ಸೂರ್ಯನು ಜೂನ್ ತಿಂಗಳ ಹೊತ್ತಿಗೆ ಮತ್ತೊಮ್ಮೆ ಜಗತ್ತನ್ನು ತಲ್ಲಣಕ್ಕೆ ತಳ್ಳುವ ಸಂದರ್ಭವನ್ನು ನಿರೀಕ್ಷಿಸಬಹುದು. ಆದರೆ ಅವರು ಶ್ವೇತಭವನದಲ್ಲಿ ಮುಂದುವರಿಯುವ ಬಗ್ಗೆ, ವಿವಾದಗಳ ಮುಖಾಂತರ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಫೆಬ್ರವರಿ ತಿಂಗಳ ಕೊನೆಯ ತನಕ ಬಿಕ್ಕಳಿಕೆಗಳನ್ನು ಎದುರಿಸಲೇಬೇಕಾಗುತ್ತದೆ. ಟ್ರಂಪ್ ಈ ಕುರಿತಾಗಿ ಈಗಾಗಲೇ ಪಕ್ಷದಲ್ಲಿ ಆಂತರಿಕ ಹಿಡಿತವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಪೂರ್ವಪುಣ್ಯಸ್ಥಾನದಲ್ಲಿ ಗೋಚಾರದಲ್ಲಿರುವ ಗುರುಗ್ರಹದ ಬಲಾಢ್ಯತೆಯಿಂದಾಗಿ ಅಧಿಕಾರದಿಂದ ನಿರ್ಗಮಿಸುವ ಸಂದರ್ಭ ಬರಲಾರದು. ಈಗ ಟ್ರಂಪ್ ಮಟ್ಟಿಗೆ ಶನೈಶ್ಚರನು ನಿಷ್ಠನಾಗಿರುವ ವರ್ತಮಾನ ದೂರವಾಗುತ್ತಿದೆ. ಸದ್ಯಕ್ಕೆ ರಾಜಕೀಯದ ಪ್ರಕ್ಷುಬ್ಧತೆಯಿಂದ ಹೊರಬರುವುದು ಬಹುತೇಕ ಖಚಿತವಾದರೂ ಅವರು ಇರಾನ್ ದೇಶವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸದಾ ತವಕದಲ್ಲಿರುತ್ತಾರೆ. ಅಮೆರಿಕನ್ನರಿಗೆ ಒಬ್ಬ ಗುಮ್ಮನನ್ನು ತೋರಿಸುವ ಅನಿವಾರ್ಯತೆ ಟ್ರಂಪ್​ಗೆ ಇದ್ದೇ ಇರುತ್ತದೆ. ಆದರೆ ಚೀನಾವನ್ನು ಎದುರಿಸುವಲ್ಲಿ ಟ್ರಂಪ್ ಅವಸರ ಮಾಡಲಾರರು. ಏಕೆಂದರೆ ಇರಾನ್ ವಿರುದ್ಧದ ಯುದ್ಧ ಮುಗಿದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts