ವಕ್ಫ್​ ಬಿಲ್​ ತಿದ್ದುಪಡಿ ಬೇಡ

waqf act central government sdpi protest koppal

ಕೊಪ್ಪಳ: ಕೇಂದ್ರ ಸರ್ಕಾರ ವಕ್ಫ್​ ಆಸ್ತಿ ರಕ್ಷಣೆ ಹಾಗೂ ಸುಧಾರಣೆ ಹೆಸರಿನಲ್ಲಿ ಜಾತ್ಯಾತಿತ ಮೌಲ್ಯಗಳಿಗೆ ವಿರುದ್ಧವಾದ ತಿದ್ದುಪಡಿ ಮಾಡುತ್ತಿದೆ ಎಂದು ಆರೋಪಿಸಿ ಎಸ್​ಡಿಪಿಐ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಕ್ಫ್​ ಬಿಲ್​ -2024 ತಂದಿದ್ದು ಆಘಾತಕಾರಿ. ಮುಸ್ಲಿಮ್​ ಸಮುದಾಯ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್​ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಇದರಲ್ಲಿ ಅಡಿಗಿದೆ. ಸದ್ಯದ ಕಾಯ್ದೆಗೆ 40 ತಿದ್ದುಪಡಿ ಮಾಡುವ ಮೂಲಕ ನಾಶಕ್ಕೆ ಮುಂದಾಗಿದೆ. ಇದು ಜಾತ್ಯಾತಿತ ಮೌಲ್ಯಗಳ ವಿರುದ್ಧವಾಗಿದೆ. ತಾರತಾಮ್ಯದಿಂದ ಕೂಡಿದೆ. ಇದನ್ನು ಸೋಶಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ವಿರೋಧಿಸಿದರು.

ಹೊಸ ಮಸೂದೆ ನ್ಯಾಯಾಂಗ ಅಧಿಕಾರ ಕಸಿಯಲಿದೆ. ಹಿಂದುಗಳಿಗೆ ವಕ್ಫ್​ ಮಂಡಳಿ ಸದಸ್ಯರನ್ನಾಗಿ ನೇಮಿಸುದು ಸರಿಯಲ್ಲ. ಆಸ್ತಿಗಳನ್ನು ವಕ್ಫ್​ ನಿಯಂತ್ರಣದಿಂದ ದೂರ ಇಡುವುದು ಹಾನಿ ಮಾಡಲಿದೆ. ಭೂ ಪರಿವರ್ತನೆಗೆ 90 ದಿನ ನೀಡಿದ್ದು ಸಾಕಾಗುವುದಿಲ್ಲ. ದುರುದ್ದೇಶದಿಂದ ಕೂಡಿದ ಮಸೂದೆ ಮುಸಲ್ಮಾನರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ತಕ್ಷಣ ಮಸೂದೆ ಕೈ ಬಿಡುವಂತೆ ಆಗ್ರಹಿಸಿದರು. ಪ್ರತಿಭಟನೆ ಬಳಿಕ ತಹಸೀಲ್ದಾರ್​ ವಿಠ್ಠಲ ಚೌಗಲಾ ಮೂಲಕ ಮನವಿ ಸಲ್ಲಿಸಿದರು. ಹುಜೂರ್​ ಅಹ್ಮದ್​, ಯೂಸುಫಿಯ ಮಸ್ಜಿದ್​ ಇಮಾಮ್​ ಮುಫ್ತಿ ನಜಿರ್​ ಅಹ್ಮದ್​, ಪ್ರಮುಖರಾದ ನಿಜಾಮುದ್ದಿನ್​ ಮಾಳೇಕೊಪ್ಪ, ಸಲೀಮ್​ ಖಾದ್ರಿ, ಫಾರೂಕ್​ ಅತ್ತಾರ, ಮೊಹಮ್ಮದ್​ ಸಾಧಿಕ್​, ಅರ್ಷದ್​ ಶೈಖ್​, ತಬ್ರೇಜ್​ ಶೈಖ್​ ಖಾಜಾ ಹುಸೇನ್​ ಗದಗ ಇತರರಿದ್ದರು.

Share This Article

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…