ಪಾರ್ಲರ್‌ ಹೋಗದೆ ಮನೆಯಲ್ಲಿಯೇ ಮುಖ ಪಳ ಪಳ ಹೊಳೆಯುವಂತೆ ಮಾಡಬೇಕಾ? ಹಾಗಾದ್ರೆ ಹೀಗೆ ಮಾಡಿ..Glow Skin

Glow Skin

Glow Skin: ಮುಖ ನೋಡಲು ಪಳಪಳ ಹೊಳೆಯಬೇಕು ಎನ್ನುವ ಆಸೆ ಮಹಿಳೆಯರಿಗೆ ಇರುತ್ತದೆ. ಯಾವುದೇ ಪಾರ್ಟಿ ಅಥವಾ ಮದುವೆ, ಫಂಕ್ಷನ್​ಗ ಹೋಗುವ ಮೊದಲು ಮುಖದ ಹೊಳಪು ಹೆಚ್ಚಿಸಲು ಪಾರ್ಲರ್​​ಗೆ ಹೋಗಿ ದುಬಾರಿ ಉತ್ಪನ್ನಗಳಿಂದ ಗೋಲ್ಡ್​​ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿಸಿಗುವ ದುಬಾರಿ ಕ್ರೀಮ್​ಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಇರುವ ರಾಸಾಯನಿಕಗಳು ಚರ್ಮಕ್ಕೆ ಹಾನಿ ಮಾಡಬಹುದು. ಹಾಗಾಗಿ ಮನೆಯಲ್ಲೆ ಸಿಂಪಲ್​ ಗೋಲ್ಡ್​​ ಫೇಶಿಯಲ್ ಮಾಡುವುದರಿಂದ ನಿಮ್ಮ ಮುಖಕ್ಕೆ ಪಾರ್ಲರ್​​ನಂತಹ ಹೊಳಪು ಸಿಗುತ್ತದೆ. ಹಾಗಾದ್ರೆ ಮನೆಯಲ್ಲಿಯೇ ಗೋಲ್ಡ್​​ ಫೇಶಿಯಲ್ ಮಾಡುವ ವಿಧಾನ ಇಲ್ಲಿದೆ ನೋಡಿ.

blank

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಖಾಸಗಿ ವಿಡಿಯೋ ಪೋಸ್ಟ್ ಮಾಡಿದ ಗೆಳೆಯ! ಅವಮಾನ ತಾಳಲಾರದೆ ಪ್ರಾಣ ಬಿಟ್ಟ ಇಬ್ಬರು ಮಕ್ಕಳ ತಾಯಿ.

ಹಂತ 1:ಸ್ವಚ್ಛಗೊಳಿಸುವುದು
ಗೋಲ್ಡ್ ಫೇಶಿಯಲ್ ಮಾಡುವ ಮೊದಲು ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದಕ್ಕಾಗಿ, 1/2 ಟೀ ಚಮಚ ಕಡಲೆ ಹಿಟ್ಟನ್ನು 1 ಟೀ ಚಮಚ ಹಸಿ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಅದನ್ನು ಮುಖಕ್ಕೆ ಹಚ್ಚಿ 1 ನಿಮಿಷ ಮಸಾಜ್ ಮಾಡಿ. ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಹಂತ 2: ಚರ್ಮದ ಸಿಪ್ಪೆ ತೆಗೆಯುವುದು

ನಿಮ್ಮ ಮುಖದ ಚರ್ಮ ಡ್ರೈ ಆಗಿದ್ದರೆ, ಇದನ್ನು ಹೋಗಲಾಡಿಸಲು ಮೊದಲು ಒಂದು ಬಟ್ಟಲಿನಲ್ಲಿ 1/2 ಟೀಸ್ಪೂನ್ ಕಡಲೆ ಹಿಟ್ಟು, 1/2 ಟೀಸ್ಪೂನ್ ಅಕ್ಕಿ ಹಿಟ್ಟು ಮತ್ತು ಟೊಮ್ಯಾಟೋ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ನೀವು ಅದಕ್ಕೆ 1/2 ಟೀಸ್ಪೂನ್ ಮೊಸರು ಕೂಡ ಸೇರಿಸಬಹುದು. ನಂತರ ಈ ಮಿಶ್ರಣವನ್ನು ಅರ್ಧ ಕತ್ತರಿಸಿದ ಟೊಮ್ಯಾಟೋ ಹೋಳುಗಳಲ್ಲಿ ಅದ್ದಿ ಮತ್ತು ನಿಮ್ಮ ಮುಖವನ್ನು 2 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಹಂತ 3: ಫೇಶಿಯಲ್ ಪ್ಯಾಕ್
ಮುಖದ ಡ್ರೈ ಸ್ಕೀನ್​ ತೆಗೆದ ನಂತರ ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಬೇಕು. ಇದಕ್ಕಾಗಿ, 1 ಚಮಚ ಕಡಲೆ ಹಿಟ್ಟು, 1 ಚಮಚ ಮೊಸರು ಮತ್ತು 1/2 ಚಮಚ ಅರಿಶಿನ ಮಿಶ್ರಣವನ್ನು ತಯಾರಿಸಿ. ನಂತರ ಈ ಪೇಸ್ಟ್​​ನ್ನು ನಿಮ್ಮ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಇದರ ನಂತರ, ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಹಂತ 4: ಮಾಯಿಶ್ಚರೈಸಿಂಗ್
ಫೇಶಿಯಲ್​​ನ ಕೊನೆಯ ಹಂತವೆಂದರೆ ಚರ್ಮವನ್ನು ಮಾಯಿಶ್ಚರೈಸ್ ಮಾಡುವುದು. ಇದಕ್ಕಾಗಿ, ನಿಮ್ಮ ಚರ್ಮಕ್ಕೆ ಅನುಗುಣವಾಗಿ ನೀವು ಯಾವುದೇ ಮಾಯಿಶ್ಚರೈಸರ್ ಅಥವಾ ಅಲೋವೆರಾ ಜೆಲ್​ನ್ನು ಬಳಸಬಹುದು. ಇದನ್ನು ಮುಖಕ್ಕೆ ಹಚ್ಚಿ ಹಗುರವಾದ ಕೈಗಳಿಂದ ಮಸಾಜ್ ಮಾಡದರೆ ಸಾಕು ಪಾರ್ಲರ್‌ ಹೋಗದೆ ಮನೆಯಲ್ಲಿಯೇ ಮುಖ ಪಳ ಪಳ ಹೊಳೆಯುವಂತೆ ನೀವೆ ಸರಳವಾಗಿ ಮಾಡಿಕೊಳ್ಳಬಹುದು.

 

Share This Article

ಮಾವಿನ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿದೆ…mangoes

mangoes : ಮಾವು ಹಣ್ಣುಗಳ ರಾಜ. ಎಲ್ಲರೂ ಮಾವಿನ ಹಣ್ಣುಗಳಿಗಾಗಿ ಬೇಸಿಗೆಯನ್ನು ಎದುರು ನೋಡುವುದರಲ್ಲಿ ಆಶ್ಚರ್ಯವಿಲ್ಲ.…

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

Battery Drain: ಇದು ಸ್ಮಾರ್ಟ್​ಫೋನ್ ಯುಗ. ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ…

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…