ಧರ್ಮದ ಹೆಸರಲ್ಲಿ ದೇಶದಲ್ಲಿ ದ್ವೇಷದ ಗೋಡೆ ನಿರ್ಮಿಸಲಾಗುತ್ತಿದೆ: ನಸೀರುದ್ದೀನ್‌ ಶಾ

ನವದೆಹಲಿ: ದೇಶದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷದ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಈ ಅನ್ಯಾಯದ ವಿರುದ್ಧ ನಿಲ್ಲುವವರೇ ಶಿಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಬಾಲಿವುಡ್‌ನ ಹಿರಿಯ ನಟ ನಸೀರುದ್ದೀನ್‌ ಶಾ ಅವರು ಅಮ್ನೆಸ್ಟಿ ಇಂಡಿಯಾ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಮಾನವ ಹಕ್ಕುಗಳ ಎನ್‌ಜಿಒ ಅಮ್ನೆಸ್ಟಿ ಬಿಡುಗಡೆ ಮಾಡಿರುವ 2.13 ನಿಮಿಷವಿರುವ ವಿಡಿಯೋದಲ್ಲಿ ಮಾನವ ಹಕ್ಕುಗಳನ್ನು ಕೇಳುವವರು ಬಂಧಿಯಾಗುತ್ತಿದ್ದಾರೆ. ಕಲಾವಿದರು, ನಟರು, ಸಂಶೋಧಕರು, ಕವಿಗಳು ಸೇರಿ ಎಲ್ಲರನ್ನು ನಿಗ್ರಹಿಸಲಾಗುತ್ತಿದೆ. ಪತ್ರಕರ್ತರನ್ನು ಕೂಡ ಮೌನಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ದ್ವೇಷದ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಮುಗ್ಧರನ್ನು ಕೊಲ್ಲಲಾಗುತ್ತಿದೆ. ಭಯಾನಕ ದ್ವೇಷ ಮತ್ತು ಕ್ರೌರ್ಯದೊಂದಿಗೆ ದೇಶವು ತೇಲುತ್ತಿದೆ. ಯಾರು ಅನ್ಯಾಯದ ವಿರುದ್ಧ ನಿಲ್ಲುತ್ತಾರೋ ಅವರು ಸತ್ಯ ಮಾತನಾಡುವುದನ್ನು ನಿಲ್ಲಿಸಲು ಕಚೇರಿಗಳ ಮೇಲೆ ದಾಳಿ, ಪರವಾನಗಿಯನ್ನು ನಿಷೇಧ ಮತ್ತು ಬ್ಯಾಂಕ್ ಖಾತೆಗಳನ್ನು ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಮ್ಮ ದೇಶ ಎತ್ತ ಸಾಗುತ್ತಿದೆ? ಭಿನ್ನಾಭಿಪ್ರಾಯಗಳಿಗೆ ಜಾಗವೇ ಇಲ್ಲದ ಸ್ಥಳದಲ್ಲಿ ನಾವು ಕನಸನ್ನು ಕಾಣಬಹುದೇ ಮತ್ತು ಶ್ರೀಮಂತರು ಮತ್ತು ಬಲಿಷ್ಟರ ಧ್ವನಿಗಳಿಗೆ ಮಾತ್ರ ಬೆಲೆಯಿದೆಯಾದರೆ ಅಲ್ಲಿನ ಬಡವರು ಮತ್ತು ಅತ್ಯಂತ ತುಳಿತಕ್ಕೊಳಗಾದವರ ಗತಿಯೇನು? ಎಲ್ಲಿದೆ ಕಾನೂನು? ಅಲ್ಲಿ ಬರೀ ಕತ್ತಲು ತುಂಬಿಕೊಂಡಿದೆ ಎಂದು ಉರ್ದುವಿನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)