ಗೋಡೆ ಕುಸಿದು 4 ವರ್ಷದ ಮಗು ಸಾವು, ತಾಯಿಗೆ ಗಾಯ

ಚಾಮರಾಜನಗರ: ತಾಲೂಕಿನ ದೇಶಿಗೌಡನಪುರ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಕುಸಿದ ಗೋಡೆಯಡಿ ಸಿಲುಕಿ ಮಗು ಮೃತಪಟ್ಟು, ತಾಯಿ ಗಾಯಗೊಂಡಿದ್ದಾರೆ.

ಗ್ರಾಮದ ಮಲ್ಲೇಶ್ ಅವರ ಮಗು ವೀರಭದ್ರಸ್ವಾಮಿ(4) ಮೃತಪಟ್ಟಿದ್ದು, ಪತ್ನಿ ಚೆನ್ನಾಜಮ್ಮ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಮಲ್ಲೇಶ್ ಹಳೆ ಮನೆ ಗೋಡೆ ನೆನೆದಿತ್ತು. ಬೆಳಗಿನ ಜಾವ 4.30ರ ಸುಮಾರಿನಲ್ಲಿ ಗೋಡೆ ಕುಸಿದು ಮಲಗಿದ್ದ ತಾಯಿ, ಮಗು ಮೇಲೆ ಬಿದ್ದಿದೆ.

ಗೋಡೆಯಡಿ ಸಿಲುಕಿದ ಮಗು ಮೃತಪಟ್ಟರೆ, ತಾಯಿ ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *