ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಕಥಾನ್​: ‘ಮಹಿಳೆಯರ ಸಮಾನತೆಗಾಗಿ ನಡಿಗೆ’ಯಲ್ಲಿ ನೀವೂ ಭಾಗವಹಿಸಿ

ನಾನಾ ಕ್ಷೇತ್ರದ ಸಾಧಕಿಯರನ್ನೂ ಗುರುತಿಸುವ ಸದವಕಾಶ ನಿಮ್ಮ ಪಾಲಿಗೆ

ಬೆಂಗಳೂರು: ಲಿಂಗ ಸಮಾನತೆ ಸಮಾಜ ಸ್ವಾಸ್ಥ್ಯದ ಮೂಲಬೇರು. ಇದನ್ನು ವಿಶ್ವಾದ್ಯಂತ ಸಾಧಿಸುವುದು ಎಲ್ಲರ ಆಶಯ. ಇದೇ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನದ ಥೀಮ್ ಕೂಡ. ಬರುವ ಮಾರ್ಚ್ 8 ರಂದು ಬ್ಯಾಲೆನ್ಸ್ ಫಾರ್ ಬೆಟರ್’ ಘೋಷಾವಾಕ್ಯದಡಿ ವಿಜಯವಾಣಿ-ದಿಗ್ವಿಜಯ ನ್ಯೂಸ್ ​ವತಿಯಿಂದ KLM FASHION MALL ವಾಕಥಾನ್ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. Chemmanur Jewellers ಮತ್ತು Oriental Insurance ಪ್ರಾಯೋಜಕತ್ವವು ಇದೆ.

ಮಾರ್ಚ್​ 8ರ ಶುಕ್ರವಾರ ಬೆಳಗ್ಗೆ 7.30ಕ್ಕೆ ಆರಂಭವಾಗುವ ವಾಕಥಾನ್​ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲಾ ಸೇರಿದಂತೆ ನಾಡಿನ ನಾನಾ ರಂಗಗಳ ಗಣ್ಯರು ನಡಿಗೆಯಲ್ಲಿ ಮತ್ತು ನಂತರ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಕಥಾನ್​ ಎಲ್ಲಿಂದ? ಎಲ್ಲಿಗೆ?
ವಿಧಾನಸೌಧದ ಮುಂಭಾಗದಿಂದ ಆರಂಭವಾಗುವ ವಾಕಥಾನ್​ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್​ ವೃತ್ತದವರೆಗೆ ನಡೆಯಲಿದೆ. ಬಳಿಕ ಕೆಂಪೇಗೌಡ ರಸ್ತೆಯ ಎಫ್‍ಕೆಸಿಸಿಐ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಾನಾ ರಂಗಗಳ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಾಕಥಾನ್​ನಲ್ಲಿ ಭಾಗವಹಿಸಲು ಏನು ಮಾಡಬೇಕು?
ವಾಕಥಾನ್​ನಲ್ಲಿ ಭಾಗವಹಿಸುವ ಆಸಕ್ತರು 9029059273 ಗೆ ಮಿಸ್ಡ್​ ಕಾಲ್ ಕೊಡಬಹುದು ಅಥವಾ walkathon.vijayavani.net ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಸಾಧಕಿಯರನ್ನು ಗುರುತಿಸಿ
ನಮ್ಮ ಸಮಾಜ ಇಂದಿಗೂ ಒಂದಿಷ್ಟು ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ಅದು ನಿಸ್ವಾರ್ಥವಾಗಿ ಸೇವಾಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡ ಹಲವರಿಂದ. ಯಾವುದೇ ಸೇವೆ, ಸಾಧನೆಗೆ ವಯಸ್ಸು, ಕ್ಷೇತ್ರಗಳ ಹಂಗಿಲ್ಲ. ಅದು ಬಯಸುವುದು ಸ್ವಾರ್ಥರಹಿತ ಮನಸ್ಥಿತಿಯೊಂದನ್ನೇ. ಅಂಥವರನ್ನು ವಿರಳವಾಗಿ ಅಲ್ಲಲ್ಲಿ ನಮ್ಮ ನಡುವೆ ಕಾಣಬಹುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ ಮತ್ತು ಅನುಕರಣೀಯ ಕೆಲಸ ಮಾಡುತ್ತಿರುವ ಅಂಥ ಮಹಿಳಾ ಸಾಧಕರು ನಿಮ್ಮ ಸುತ್ತಲೂ ಇದ್ದೇ ಇರುತ್ತಾರೆ. ಮಾರ್ಚ್ 8ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜ್ಯದ ನಾನಾ ರಂಗಗಳ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ಕೆ ವಿಜಯವಾಣಿ- ದಿಗ್ವಿಜಯ ನ್ಯೂಸ್ ಮುಂದಾಗಿವೆ. ಅಂಥ ಸಾಧಕಿಯರನ್ನು ಗುರುತಿಸುವ ಅವಕಾಶವನ್ನು ನಿಮಗೂ ನೀಡಲಾಗಿದೆ. ನಿಮಗೆ ಪರಿಚಯ, ಸಂಪರ್ಕ ಇರುವ ಅರ್ಹ, ಅನನ್ಯ ಸಾಧಕಿಯರ ಬಗ್ಗೆ ನಮಗೆ ಬರೆದು ನಮ್ಮ ವಿಳಾಸಕ್ಕೆ ಕಳುಹಿಸಿ, ಬರಹ ಚಿಕ್ಕ-ಚೊಕ್ಕದಾಗಿರಲಿ. ಪದಗಳ ಮಿತಿ 150. ಜತೆಗೆ, ಸಾಧಕಿಯರ ಫೋಟೋ, ಪೂರಕ ದಾಖಲೆಗಳು ಕೂಡ ಇರಲಿ.

ನಮ್ಮ ವಿಳಾಸ
ಸಂಪಾದಕರು, ವಿಜಯವಾಣಿ , ಸಾಧಕಿಯರಿಗೆ ಪ್ರಶಸ್ತಿ ವಿಭಾಗ, ವಿಆರ್​ಎಲ್​ ಮೀಡಿಯಾ ಲಿಮಿಟೆಡ್​, ನಂ 24, ಶ್ರೀ ಸಾಯಿರಾಂ ಟವರ್ಸ್​, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018.
ಇ-ಮೇಲ್​ : [email protected]edia.com
ಕೊನೆಯ ದಿನಾಂಕ : ಫೆಬ್ರವರಿ 22-02-2019

ವಾಕಥಾನ್​: ಮಹಿಳೆಯರ ಸಮಾನತೆಗಾಗಿ ನಡಿಗೆ

ವಾಕಥಾನ್​: ಮಹಿಳೆಯರ ಸಮಾನತೆಗಾಗಿ ನಡಿಗೆಮಾರ್ಚ್​ 8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಮಹಿಳೆಯರಿಗಾಗಿ 'ವಾಕಥಾನ್​ ವಿಶೇಷ ಅಭಿಯಾನ'ವನ್ನು ಆಯೋಜಿಸಲಾಗಿದೆ.​ 'ಮಹಿಳೆಯರ ಸಮಾನತೆಗಾಗಿ ನಡಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ವಾಕಥಾನ್​ ನಡೆಯಲಿದೆ. ಆಸಕ್ತರು ಭಾಗವಹಿಸಲು 90290 59273 ನಂಬರ್​ಗೆ ಮಿಸ್ಡ್​ ಕಾಲ್ ಕೊಡಿ ಅಥವಾ walkathon.vijayavani.net ಗೆ ಭೇಟಿ ನೀಡಿ. #Walkathon #Vijayavani #DighvijayNews #InternationalWomensDay #WomensDay #March8

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 20, 2019