ಸರ್ಕಾರಿ ಕಾನು ಉಳಿವಿಗಾಗಿ ಪಾದಯಾತ್ರೆ 9ಕ್ಕೆ

blank

ಸಾಗರ: ತಾಲೂಕಿನ ಬರದವಳ್ಳಿ ಗ್ರಾಮದ ಸುಮಾರು 70 ಎಕರೆ ಸರ್ಕಾರಿ ಜಮೀನು ರಕ್ಷಣೆಗಾಗಿ ಅ.9ರಂದು ಬರದವಳ್ಳಿಯಿಂದ ಸಾಗರ ಉಪವಿಭಾಗಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ ಹೇಳಿದರು.

ಗ್ರಾಮಸ್ಥರು ಕಾಪಾಡಿಕೊಂಡು ಬಂದಿರುವ ಜಾಗದ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಅಗತ್ಯ ದಾಖಲೆ ಒದಗಿಸುವಂತೆ ಒತ್ತಾಯಿಸುವ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಂದಾಯ ಇಲಾಖೆ ನಿರ್ಲಕ್ಷೃದ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತರಲಾಗಿದೆ. ಸಚಿವರ ಮಾತಿಗೂ ಕಂದಾಯ ಮತ್ತು ಅರಣ್ಯ ಇಲಾಖೆ ಬೆಲೆ ಕೊಡುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ಸರ್ವೇ ನಂ. 275ರಲ್ಲಿ 46.3 ಎಕರೆ, ಸ.ನಂ. 285ರಲ್ಲಿ 22.29 ಎಕರೆ ಕಾಡನ್ನು ವ್ಯಕ್ತಿಯೊಬ್ಬರು ಸ್ವಂತದ್ದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 34 ವರ್ಷಗಳ ಹಿಂದೆಯೂ ಈ ಭೂಮಿಗೆ ಸಂಬಂಧಿಸಿ ಈ ವ್ಯಕ್ತಿಯ ಕುಟುಂಬದವರು ನ್ಯಾಯಾಲಯಕ್ಕೆ ದಾವೆ ಹೂಡಿದಾಗ ತೀರ್ಪು ಗ್ರಾಮಸ್ಥರ ಪರವಾಗಿ ಬಂದಿತ್ತು. ಅದನ್ನು ಕಾಡು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಕುಟುಂಬದ ವ್ಯಕ್ತಿ ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಕಂದಾಯ ಇಲಾಖೆಗೆ ಮನವಿ ಕೊಟ್ಟಿದ್ದೇವೆ. ಆದರೆ ಕಂದಾಯ ಇಲಾಖೆ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆ ಒದಗಿಸುತ್ತಿಲ್ಲ ಎಂದು ದೂರಿದರು.
ಶಿರವಂತೆ ಗ್ರಾಪಂ ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಬರದವಳ್ಳಿ ಮಾತನಾಡಿ, ಗ್ರಾಮ ಸುಧಾರಣಾ ಸಮಿತಿ, ಕಾನು ಉಳಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ಬರದವಳ್ಳಿ ರಾಮೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಕಂದಾಯ ಇಲಾಖೆಗೆ ಒಂದು ವರ್ಷದಿಂದ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಒಂದು ಕುಟುಂಬದ ಹಿತಕ್ಕಾಗಿ ಇಡೀ ಗ್ರಾಮದ ಹಿತಾಸಕ್ತಿ ಬಲಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಜಿ.ಕೆ.ಗಣಪತಿ, ಕಾರ್ಯದರ್ಶಿ ಗಣಪತಿ, ಹುಚ್ಚಪ್ಪ ತಟ್ಟೆಗುಂಡಿ, ನಾಗರಾಜ್, ಜಿ.ಗಣಪತಿ, ರವಿಚಂದ್ರ ಇತರರಿದ್ದರು.

Share This Article

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…

ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ; ಅದಕ್ಕೆ ಕಾರಣ & ಲಕ್ಷಣವೇನು ಎಂಬ ಮಾಹಿತಿ ಇಲ್ಲಿದೆ | Health Tips

ನೀವು ಆಹಾರವನ್ನು ಸೇವಿಸಿದಾಗ ನಿಮ್ಮ ಜೀರ್ಣಾಂಗವು ಅದನ್ನು ತುಂಡುಗಳಾಗಿ ಮಾಡುತ್ತದೆ ಮತ್ತು ಅದನ್ನು ಶಕ್ತಿಯಾಗಿ ಬಳಸುತ್ತದೆ.…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ