ಸೊಂಟದ ಬೊಜ್ಜು ಕರಗಲು ಪಶ್ಚಿಮೋತ್ಥಾನಾಸನ

Yoga

ಸೊಂಟದ ಬೊಜ್ಜು ಕರಗಲು ಪಶ್ಚಿಮೋತ್ಥಾನಾಸನಯೋಗವು ಭಾರತೀಯ ಸಂಸ್ಕೃಯ ಅವಿಭಾಜ್ಯ ಅಂಗವಾಗಿದೆ. ಯೋಗಕ್ಕಿರುವ ವ್ಯಾಪಕ ಪ್ರಯೋಜನಗಳಿಂದಾಗಿ, ಯೋಗದ ಅಭ್ಯಾಸವು ಈಗ ಜಾಗತಿಕ ಮನ್ನಣೆಯನ್ನು ಗಳಿಸಿದೆ. ವಿವಿಧ ಆಸನಗಳೊಂದಿಗೆ, ಪ್ರತಿಯೊಂದೂ ವಿಶಿಷ್ಟ ಪ್ರಯೋಜನಗಳೊಂದಿಗೆ, ಯೋಗವು ಶಕ್ತಿ ಮತ್ತು ನಮ್ಯತೆಯನ್ನು ನೀಡುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಲು ಪರಿಣಾಮಕಾರಿ ಮಾರ್ಗವಾಗಿದೆ.

blank

ಪಶ್ಚಿಮೋತ್ಥಾನಾಸನವು ಮೂಲಭೂತವಾಗಿ, ಕುಳಿತಿರುವ ಮತ್ತು ಮುಂದಕ್ಕೆ ಬಾಗಿದ ಭಂಗಿಯಾಗಿದೆ. ಅದು ನೋಡಲು ಸರಳವಾಗಿ ಕಾಣುತ್ತದೆ. ಆದರೆ ಇದನ್ನು ಕರಗತಗೊಳಿಸಿಕೊಳ್ಳಲು ಸಮರ್ಪಣೆ ಮತ್ತು ಹೆಚ್ಚಿನ ತಾಳ್ಮೆ ಅಗತ್ಯವಿರುತ್ತದೆ. ಇದು ಹಠಯೋಗದ ಒಂದು ಶ್ರೇಷ್ಠ ಭಂಗಿಯಾಗಿದೆ.

ಮಂಡಿರಜ್ಜು ಮತ್ತು ಬೆನ್ನುಮೂಳೆ ಸೇರಿದಂತೆ ನಿಮ್ಮ ಬೆನ್ನಿನ ಭಾಗಕ್ಕೆ ತೀವ್ರವಾದ ವಿಸ್ತರಣೆಯನ್ನು ಈ ಆಸನ ಒದಗಿಸುತ್ತದೆ. ಕುಳಿತಿರುವ, ಮುಂದಕ್ಕೆ ಬೆಂಡ್ ಎಂದೂ ಕರೆಯಲ್ಪಡುವ ಪಶ್ಚಿಮೋತ್ಥಾನಾಸನವು ಬೆನ್ನುಮೂಳೆ, ಮಂಡಿರಜ್ಜು ಮತ್ತು ಕೆಳ ಬೆನ್ನನ್ನು ವಿಸ್ತರಿಸುವ ಯೋಗ ಭಂಗಿಯಾಗಿದೆ. ಈ ಹೆಸರು ಸಂಸ್ಕೃ ಪದಗಳಾದ ಪಶ್ಚಿಮದಿಂದ ಬಂದಿದೆ, ಇದರರ್ಥ ಪಶ್ಚಿಮ ಉತ್ಥಾನ್ ಅಂದರೆ ತೀವ್ರವಾದ ಹಿಗ್ಗುವಿಕೆ ಮತ್ತು ಆಸನ ಅಂದರೆ ಭಂಗಿ.

YogaAsana

ವಿಧಾನ: ಮೊದಲು ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ. ಕೈಗಳನ್ನು ಸೊಂಟದ ಪಕ್ಕದಲ್ಲಿ ಕೆಳಗೆ ಊರಿ. ಅಂದರೆ ದಂಡಾಸನದಲ್ಲಿ ಕುಳಿತುಕೊಳ್ಳಿ. ಉಸಿರನ್ನು ತೆಗೆದುಕೊಂಡು ಎರಡೂ ಕೈಗಳನ್ನು ತಲೆಯ ಮೇಲಕ್ಕೆ ತನ್ನಿ. ಈಗ ಉಸಿರನ್ನು ಹೊರಕ್ಕೆ ಬಿಡುತ್ತಾ ನಿಧಾನವಾಗಿ ಸೊಂಟದಿಂದ ಮುಂದೆ ಬಗ್ಗುತ್ತಾ ಎರಡೂ ಕೈಗಳಿಂದ ಎರಡೂ ಕಾಲಿನ ಹೆಬ್ಬೆರಳನ್ನು ಹಿಡಿಯಿರಿ. ಆಮೇಲೆ ಬೆನ್ನನ್ನು ಇನ್ನೂ ಬಗ್ಗಿಸುತ್ತಾ ತಲೆಯನ್ನು, ಹಣೆಯನ್ನು ಮಂಡಿಗಳಿಗೆ ಮುಟ್ಟಿಸಿ. ಮಂಡಿಯು ನೆಟ್ಟಗಿರಲಿ. ಈ ಭಂಗಿಯಲ್ಲಿ ಸಮನಾದ ಉಸಿರಾಟದೊಂದಿಗೆ 1/2 ನಿಮಿಷದಿಂದ 2 ನಿಮಿಷ ಕಾಲ ಇರಿ. ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಸಹಜ ಸ್ಥಿತಿಗೆ ಬನ್ನಿ. ಅನಂತರ ತುಸು ವಿಶ್ರಾಂತಿ.

ಪ್ರಯೋಜನ: ಹೊಟ್ಟೆಯ ಮತ್ತು ಸೊಂಟದ ಬೊಜ್ಜು ಕರಗಿ ಮೈ ತೆಳ್ಳಗಾಗುತ್ತದೆ. ಆಂತರಿಕ ಅಂಗಗಳನ್ನು ಇದು ಉತ್ತೇಜಿಸು ವುದು. ಪಶ್ಚಿಮೋತ್ಥಾನಾಸನ ಯೋಗವು ನಿಮ್ಮ ಮಣಿಪುರ ಚಕ್ರವನ್ನು ಜಾಗೃತಗೊಳಿಸುತ್ತದೆ. ಇದು ಜೀರ್ಣಾಗ್ನಿಯನ್ನು ಸಕ್ರಿಯಗೊಳಿಸುವ ಮೂಲಕ ದೇಹದ ಶಕ್ತಿಯ ಸಮತೋಲನವನ್ನು ನಿಯಂತ್ರಿಸುತ್ತದೆ. ಈ ಚಕ್ರವನ್ನು ಸಕ್ರಿಯಗೊಳಿಸುವುದರಿಂದ ಮೇದೋಜ್ಜೀರಕ ಗ್ರಂಥಿ ಮತ್ತು ಜೀರ್ಣಕಾರಿ ಅಂಗಗಳ ಕಾರ್ಯವನ್ನು ನಿಯಂತ್ರಣಗೊಳ್ಳುತ್ತದೆ ಮತ್ತು ವರ್ಧಿಸುತ್ತದೆ. ನಿತ್ಯ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಆರೋಗ್ಯವು ಉತ್ತಮ ಗೊಂಡು, ಮೂತ್ರ ದೋಷ ನಿವಾರಣೆಗೆ ಸಹಕಾರಿಯಾಗುತ್ತದೆ. ಬೆನ್ನೆಲುಬು ಬಲಿಷ್ಠವಾಗುತ್ತದೆ. ಈ ಆಸನ ದಿನಾಲೂ ಅಭ್ಯಾಸ ಮಾಡಿದರೆ ಲವಲವಿಕೆ ಇರುತ್ತದೆ. ಜೀರ್ಣಶಕ್ತಿ ಹೆಚ್ಚುವುದು ಹಾಗೂ ದೇಹದಲ್ಲಿ ತಾರುಣ್ಯ ಭಾವ ಹೊಂದಿರುತ್ತದೆ. ಯೋಗದಿಂದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ವ್ಯಕ್ತಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ.

ಪತಂಜಲಿ ಮುನಿಗಳು ತಿಳಿಸಿದ ಅಷ್ಟಾಂಗ: ಯೋಗದ ಮೂರನೇ ಮೆಟ್ಟಿಲಾದ ಆಸನವು ದೇಹದ ಬೊಜ್ಜು ಕರಗಿಸಲು ತುಂಬಾ ಸಹಕಾರಿಯಾಗಿದೆ ಇದರೊಂದಿಗೆ ನಿಯಮಿತವಾದ ಪೋಷಕಾಂಶಗಳ ಆಹಾರ ಸೇವನೆ ಅಗತ್ಯ.

ಸೂಚನೆ: ಸ್ಲಿಪ್‌ಡಿಸ್ಕ್, ಬೆನ್ನು ನೋವು, ಮಂಡಿರಜ್ಜು ಗಾಯಗಳು, ಸಿಯಾಟಿಕಾ, ಅಸ್ತಮಾ, ಅತಿಸಾರ, ಕಿಬ್ಬೊಟ್ಟೆಯ ಹುಣ್ಣುಗಳು ಮತ್ತು ಗರ್ಭಧಾರಣೆಯ ಸಂದರ್ಭದಲ್ಲಿ ಈ ಆಸನವನ್ನು ಮಾಡಬಾರದು.

Shami ಫಿಟ್ನೆಸ್​ ಬಿಗ್ಗೆ ಹೊರಬಿತ್ತು ಬಿಗ್​​ ಅಪ್ಡೇಟ್​; BGT ಅಲ್ಲ ಮುಂಬರುವ ಟೂರ್ನಿಗಳಲ್ಲಿ ಆಡೋದು ಡೌಟ್ ಎಂದ ಬಿಸಿಸಿಐ ​

ಮತ್ತೆ ಜೈಲು ಸೇರ್ತಾರಾ Allu Arjun? ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾದ ಫೊಲೀಸರು

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank