More

  ದಾನ ಧರ್ಮದಿಂದ ಜನ್ಮ ಸಾರ್ಥಕ

  ವಡಗೇರಾ: ದಾನ-ಧರ್ಮ ಮಾಡುವುದರಿಂದ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಎಂದು ಬೆಂಡೆಬೆಂಬಳಿಯ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ಅಭಿನವ ನಿಜಗುಣ ಶಿವಯೋಗಿ ನುಡಿದರು.

  ಬೆಂಡೆಬೆಂಬಳಿಯ ಸಿದ್ಧಾರೂಢ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರಾವಣ ಮಂಗಲೋತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರೋಪಕಾರ ಕಾರ್ಯ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗಲಿದೆ ಎಂದರು.

  ಇಂದು ಪ್ರತಿಯೊಬ್ಬರೂ ಒತ್ತಡದ ಜೀವನಕ್ಕೆ ಬಲಿಯಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢರು ಎಲ್ಲ ಜಾತಿ ಜನಾಂಗದವರ ಒಳಿತು ಬಯಸಿದ ಮಹಾನ್ ಶರಣರು. ಹೀಗಾಗಿ ನಾವು ಕೂಡ ಅವರ ತತ್ವ ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

  ಶ್ರೀ ಸದಾನಂದ ಸ್ವಾಮಿ, ಶ್ರೀ ಬಸಯ್ಯ ಸ್ವಾಮಿ, ಚೋಳಪ್ಪ ಸಾಹುಕಾರ, ಮೈಬೂಬ್ ಸಾಬ್ ಕಾಡ್ಲೂರ, ಭೀಮರಾಯ ತೇಕರಾಳ, ಭಾಷಾಸಾಬ್ ಕಾಲೇಗಾರ, ಶೇಖರ ಸಾಹುಕಾರ, ಮರಿಲಿಂಗಪ್ಪ ಮಡಿವಾಳ, ಶಾಂತಗೌಡ ಬೆಳ್ಳಿಕಟ್ಟಿ, ಹಂಪಣ್ಣ ಪೂಜಾರಿ, ಸದಾಶಿವಪ್ಪ ಗಣೇಕಲ್, ಸೋಮಯ್ಯ ಸ್ವಾಮಿ, ಪರ್ವತರೆಡ್ಡಿ ಗೌಡ, ಮರಲಿಂಗಪ್ಪ ಹಿರೇಮಠ, ಬಂದೇಶಗೌಡ ಐರೆಡ್ಡಿ, ಸತೀಶಗೌಡ ಸೂಗರಡ್ಡಿ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts