24.7 C
Bangalore
Sunday, December 15, 2019

ಶಕ್ತಿ ತುಂಬುವರೆ ದಾಸ್?

Latest News

ಈರುಳ್ಳಿ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ತನ್ನ ವ್ಯಾಪಾರ ಬಲಪಡಿಸಿಕೊಳ್ಳುತ್ತಿರುವ ಬಟ್ಟೆ ಅಂಗಡಿ ಮಾಲೀಕ

ಮುಂಬೈ: ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು ಸಾಮಾನ್ಯಜನರಿಗೆ ಹೊರೆಯಾಗುತ್ತಿದೆ. ಅದನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ.ಹೀಗಿರುವಾಗ ಇದೇ ಈರುಳ್ಳಿಯನ್ನು ಇಲ್ಲೋರ್ವ ಬಟ್ಟೆ ವ್ಯಾಪಾರಿ ತನ್ನ ಉದ್ಯಮವನ್ನು...

ನೀರಿನ ಹೊಂಡಕ್ಕೆ ಬಿದ್ದ ಯುವತಿ ರಕ್ಷಣೆ ವಿಡಿಯೋ ವೈರಲ್

ವಿಜಯವಾಣಿ ಸುದ್ದಿಜಾಲ ರಾಯಚೂರು ಖಾಸಗಿ ನಿವೇಶನ ನಿರ್ಮಾಣಕ್ಕಾಗಿ ತೆಗೆದ ಗುಂಡಿಯಲ್ಲಿ ಆಯತಪ್ಪಿ ಬಿದ್ದಿದ್ದ ಬಾಲಕಿ ಯನ್ನು ಯುವಕನೊಬ್ಬ ರಕ್ಷಣೆ ಮಾಡಿದ ವಿಡಿ ಯೋ ಸಾಮಾಜಿಕ...

ವಿಶ್ವಸುಂದರಿ ವಿಜೇತೆಗೆ ಕೊನೆಯ ಪ್ರಶ್ನೋತ್ತರ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಾಳವುವು? ಜಮೈಕಾ ಬ್ಯೂಟಿಯ ಉತ್ತರ ಹೇಗಿತ್ತು?

ಲಂಡನ್​: 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗುವ ಮೂಲಕ ಜಮೈಕಾದ ಟೋನಿ ಅನ್​ ಸಿಂಗ್​ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸ್ಪರ್ಧೆಯ ಕೊನೆಯ ಪ್ರಶ್ನೋತ್ತರ...

ಶಿವಸೇನೆ ಕೈಯಲ್ಲಿರುವ ಗೃಹ ಇಲಾಖೆ ಮೇಲೆ ಎನ್​ಸಿಪಿ ಕಣ್ಣು; ಅಜಿತ್​ ಪವಾರ್​ಗೆ ಜವಾಬ್ದಾರಿ ವಹಿಸುವ ಪ್ರಯತ್ನ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ನೇತೃತ್ವದ ಸರ್ಕಾರ ರಚನೆಯಾಗಿದ್ದರೂ ಇನ್ನು ಸಚಿವ ಸಂಪುಟ ರಚನೆಯಾಗಿಲ್ಲ. ಸದ್ಯ ಯಾವ ಪಕ್ಷಗಳಿಗೆ ಯಾವ ಖಾತೆ ಎಂಬುದನ್ನು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ...

ಸ್ಮಾರಕದ ಮೇಲೆ ಕುಳಿತ ಪಾರಿವಾಳದಲ್ಲಿ ನೆಚ್ಚಿನ ನಟ ದಿ.ಅಂಬರೀಶ್​ ಅವರನ್ನು ಕಂಡ ಅಭಿಮಾನಿಗಳು

ಮಂಡ್ಯ: ರೆಬಲ್​ಸ್ಟಾರ್​ ದಿ.ಅಂಬರೀಶ್​ ಅವರ ಸ್ಮಾರಕವನ್ನು ಯಲಿಯೂರು ಗ್ರಾಮದಲ್ಲಿ ಪುತ್ರ ಅಭಿಷೇಕ್​ ಅಂಬರೀಶ್​ ಲೋಕಾರ್ಪಣೆ ಮಾಡಿದರು. ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಅಭಿಮಾನಿಗಳು ದಿ....

| ರವೀಂದ್ರ ಎಸ್. ದೇಶಮುಖ್

ಈಗಿನ ಸ್ಥಿತಿಯಲ್ಲಿ ಪ್ರಶ್ನೆ, ಅನುಮಾನ, ಸವಾಲುಗಳ ಮೊತ್ತ ದೊಡ್ಡದಿದೆ. ಹೀಗಿರುವಾಗ ಆರ್​ಬಿಐ ಚುಕ್ಕಾಣಿ ಸರ್ಕಾರದ ನಿವೃತ್ತ ಅಧಿಕಾರಿ ಕೈಗೆ ಬಂದಿದ್ದು, ಮುಂದೇನು ಎಂಬ ಯಕ್ಷಪ್ರಶ್ನೆ ಸೃಷ್ಟಿಯಾಗಿರುವಾಗಲೇ ಅನುಭವ, ದಕ್ಷತೆ, ಸೌಮ್ಯಸ್ವಭಾವ, ತಾಳ್ಮೆ ಇದೆಲ್ಲದರ ಮಿಳಿತವಾಗಿರುವ ಶಕ್ತಿಕಾಂತ್ ದಾಸ್ ವಿತ್ತನೀತಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತ ಮದ್ದರೆಯುವುದಾಗಿ ಭರವಸೆ ತುಂಬಿದ್ದಾರೆ. ಡಿಸೆಂಬರ್ 12ರಂದು ಆರ್​ಬಿಐನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸುತ್ತಲೇ ‘ಆಕ್ಟಿವ್ ಮೋಡ್’ನಲ್ಲಿ ಕಂಡುಬಂದ ದಾಸ್, ಗುರುವಾರ ಸರ್ಕಾರಿ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪ್ರಬಂಧ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಶುಕ್ರವಾರ ಮತ್ತು ಶನಿವಾರ ಆರ್​ಬಿಐನ ಕೇಂದ್ರೀಯ ಮಂಡಳಿಯ ಮಹತ್ವದ ಸಭೆ ನಡೆದಿದ್ದು, ಇದರ ಫಲಶ್ರುತಿ ಇನ್ನಷ್ಟೇ ಗೊತ್ತಾಗಬೇಕಿದೆ. ಮುಂಬರುವ ಕೆಲ ದಿನಗಳಲ್ಲಿ ಖಾಸಗಿ ರಂಗದ ಬ್ಯಾಂಕುಗಳ ಸಿಇಒಗಳು, ಹಿರಿಯ ಅಧಿಕಾರಿಗಳೊಂದಿಗೆ ದಾಸ್ ಮಾತುಕತೆ ನಡೆಸಲಿದ್ದಾರೆ. ಈ ಎಲ್ಲ ಚಟುವಟಿಕೆಗಳ ಪರಿಣಾಮ, ಮಂಕು ಕವಿದಿದ್ದ ಆರ್​ಬಿಐ ವಲಯದಲ್ಲಿ ಈಗ ಮತ್ತೆ ಸಂಚಲನ ಸೃಷ್ಟಿಯಾಗಿದೆ.

ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಆಡಳಿತಾತ್ಮಕ ಅನುಭವ ಮತ್ತು ಆರ್ಥಿಕ ಇಲಾಖೆಯಲ್ಲಿ ಹಲವು ವರ್ಷದ ಕಾರ್ಯದ ಕಾರಣದಿಂದಾಗಿ, ಈಗ ಹೆಗಲು ಏರಿರುವ ಹೊಸ ಜವಾಬ್ದಾರಿಯ ನಿರ್ವಹಣೆ ದಾಸ್ ಅವರಿಗೆ ಸುಲಭಸಾಧ್ಯವಾಗಬಹುದು. ಆದರೂ, ಆರ್​ಬಿಐ ಗವರ್ನರ್ ಹುದ್ದೆಗೆ ಸರ್ಕಾರ ಇವರ ಹೆಸರು ಘೋಷಿಸಿದಾಗ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾದ ಕೂರಂಬುಗಳು ಕಡಿಮೆಯೇನಲ್ಲ. ಗುಜರಾತ್​ನಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕ ಜಯನಾರಾಯಣ ವ್ಯಾಸ್ ಟ್ವೀಟ್ ಮಾಡಿ- ‘ಇತಿಹಾಸ ಪದವಿಯ ಹಿನ್ನೆಲೆ ಇರುವ ದಾಸ್ ಕೇಂದ್ರೀಯ ಬ್ಯಾಂಕನ್ನೇ ಇತಿಹಾಸವಾಗಿಸದಿರಲಿ ಎಂದು ಆಶಿಸುತ್ತೇನೆ’ ಎಂದು ವಿವಾದದ ಕಿಡಿ ಹೊತ್ತಿಸಿದರು. ಬಿಜೆಪಿಯವರೇ ಆದ ಸುಬ್ರಮಣಿಯನ್ ಸ್ವಾಮಿ ‘ಸರ್ಕಾರದ ನಿರ್ಧಾರ ತಪು್ಪ’ ಎಂದು ವಾದಿಸಿದರಲ್ಲದೆ ದಾಸ್ ನೇಮಕ ವಿರೋಧಿಸಿ ಪ್ರಧಾನಿಗೆ ಪತ್ರವನ್ನೂ ಬರೆದಿದ್ದಾರೆ. ಹಾಗಾದರೆ, ಸರ್ಕಾರ ಅವಸರದಲ್ಲಿ ಇವರನ್ನು ನೇಮಿಸಿತಾ? ತಜ್ಞರ ಪ್ರಕಾರ, ಖಂಡಿತ ಇಲ್ಲ. ಶಕ್ತಿಕಾಂತ್ ಹಿನ್ನೆಲೆ, ಅವರು ನಿಭಾಯಿಸಿದ ಸವಾಲುಗಳನ್ನು ಅವಲೋಕಿಸಿದರೆ ಭೇಷ್ ಎನ್ನಲೇಬೇಕಾದ ‘ಸ್ಟ್ರಾಂಗ್ ಪ್ರೊಫೈಲ್’ ಅವರದ್ದು.

ಶಕ್ತಿಕಾಂತ್ ದಾಸ್ ಹುಟ್ಟಿದ್ದು (1957 ಫೆಬ್ರವರಿ 26) ಒಡಿಶಾದ ಭುವನೇಶ್ವರದಲ್ಲಿ. ಅವರು ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದು ಭುವನೇಶ್ವರದ Demonstration Multipurpose Schoolನಲ್ಲಿ. ಬಳಿಕ ಬಿ.ಎ. ಪದವಿ ಪೂರ್ಣಗೊಳಿಸಿದ ಅವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದರು. ಆರ್ಥಿಕ ವ್ಯವಹಾರಗಳ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಬೆಂಗಳೂರು ಐಐಎಂನಿಂದ ಅಡ್ವಾನ್ಸ್​ಡ್ ಫೈನಾನ್ಷಿಯಲ್ ಮ್ಯಾನೇಜ್​ವೆುಂಟ್ ಕೋರ್ಸ್ ಪೂರ್ಣಗೊಳಿಸಿದರು. ಮುಂದೆ, ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಐಎಎಸ್ ಅಧಿಕಾರಿಯಾದ ಬಳಿಕ ಆಯಕಟ್ಟಿನ ಹುದ್ದೆಗಳನ್ನು ನಿಭಾಯಿಸಿದರು. 1980ನೇ ಬ್ಯಾಚ್ ಐಎಎಸ್ ಅಧಿಕಾರಿಯಾದ ದಾಸ್ ತಮಿಳುನಾಡು ಸರ್ಕಾರದಲ್ಲಿ ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ವಿಭಾಗದ ವಿಶೇಷ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಯದರ್ಶಿ, ತಮಿಳುನಾಡು ಏಡ್ಸ್ ಕಂಟ್ರೋಲ್ ಸೊಸೈಟಿಯ ಪ್ರಾಜೆಕ್ಟ್ ಡೈರೆಕ್ಟರ್, ದಿಂಡಿಗಲ್ ಮತ್ತು ಕಾಂಚಿಪುರಂ ಜಿಲ್ಲೆಗಳ ಜಿಲ್ಲಾಧಿಕಾರಿ ಮುಂತಾದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಮೀನು ಮಂಜೂ ರಾತಿಗೆ ಸಂಬಂಧಿಸಿ ರಾಜಕೀಯ ಒತ್ತಡ ಬಂದಾಗ ಸಿಎಂಗೇ ‘ನೋ’ ಅಂತ ದಿಟ್ಟತನದ ಉತ್ತರ ನೀಡಿದ ದಾಸ್ ಎಂದೂ ರಾಜಿ ಮಾಡಿಕೊಂಡವರಲ್ಲ. ಅಲ್ಲದೆ, ಹಿಡಿದ ಕೆಲಸವನ್ನು ಪರಿಪೂರ್ಣತೆಯಿಂದ ಪೂರ್ಣಗೊಳಿಸುವ ಅವರು ಅಧಿಕಾರಿವಲಯದಲ್ಲಿ ‘ಮಿಸ್ಟರ್ ಪರ್ಫೆಕ್ಟ್’ ಎಂದೇ ಚಿರಪರಿಚಿತರು.

ಕೇಂದ್ರ ಸರ್ಕಾರದಲ್ಲಿ ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ರಸಗೊಬ್ಬರ ಇಲಾಖೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಅವರದ್ದು. ಅಲ್ಲದೆ, ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿ ಮೂವರು ವಿತ್ತ ಸಚಿವರ (ಪಿ.ಚಿದಂಬರಂ, ಪ್ರಣವ್ ಮುಖರ್ಜಿ ಮತ್ತು ಅರುಣ್ ಜೇಟ್ಲಿ) ಜತೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಇನ್ನು, ಜನಸಾಮಾನ್ಯರಿಗೆ ದಾಸ್ ಹೆಚ್ಚು ಪರಿಚಿತರಾಗಿದ್ದು, ನೋಟು ಅಮಾನ್ಯೀಕರಣ ಸಂದರ್ಭದಲ್ಲೇ. ಈ ಪ್ರಯೋಗವನ್ನು ಯಶಸ್ವಿಯಾಗಿಸಲು ಶ್ರಮಿಸಿದ ಕೆಲ ಅಧಿಕಾರಿಗಳ ಪೈಕಿ ಇವರೊಬ್ಬರು. 2016ರ ನವೆಂಬರ್​ನಿಂದ 2017ರ ಮೇವರೆಗೆ ಹತ್ತಾರು ಬಾರಿ ಮಾಧ್ಯಮಗಳ ಮುಂದೆ ಬಂದ ದಾಸ್ ‘ಕಪು್ಪಹಣ ಹತ್ತಿಕಲು ಮತ್ತು ಡಿಜಿಟಲ್ ವಹಿವಾಟು ಹೆಚ್ಚಿಸಲು ಈ ಕ್ರಮ ಪೂರಕವಾಗಿದೆ’ ಎಂದು ಸಮರ್ಥಿಸಿಕೊಂಡರಲ್ಲದೆ, ಜನಸಾಮಾನ್ಯರಿಗಾಗುತ್ತಿದ್ದ ಅನನುಕೂಲಗಳನ್ನು ತಪ್ಪಿಸಲು ಆಗಾಗ ಕೆಲ ವಿನಾಯ್ತಿಗಳನ್ನು ಸಹ ಘೋಷಿಸಿದರು. ಹೀಗಿದ್ದರೂ, ನೋಟು ಅಮಾನ್ಯೀಕರಣ ಪ್ರಸಂಗ ನಿಭಾಯಿಸಿದ ರೀತಿ ಕುರಿತಂತೆ ಅವರ ಬಗ್ಗೆ ಆಕ್ಷೇಪದ ದನಿಗಳೂ ಇವೆ. ಅವರು 15ನೇ ಹಣಕಾಸು ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಜಿ-20 ಒಕ್ಕೂಟದಲ್ಲಿ ಭಾರತದ ಪ್ರತಿನಿಧಿಯಾಗಿದ್ದಾರೆ. ಕಳೆದ ವರ್ಷ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತರಾದ ಬಳಿಕವೂ ಅವರ ಅನುಭವ ಬಳಸಿಕೊಳ್ಳಲೆಂದೇ ಸರ್ಕಾರ ದಾಸ್​ರನ್ನು ಸಲಹೆಗಾರರಾಗಿ ನೇಮಿಸಿತ್ತು.

ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ಬಳಿಕ ಮುಂದೆ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಭುಗಿಲೇಳುವ ಮುನ್ನವೇ ಸರ್ಕಾರ ಆರ್​ಬಿಐನ 25ನೇ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಿತು. ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವಿನ ಶೀತಲಸಮರವನ್ನು ಕೊನೆಗಾಣಿಸಬೇಕಿರುವುದು, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವುದು, ಮಾರುಕಟ್ಟೆಯ ನಗದು ನಿರ್ವಹಣೆಗೆ ಮೀಸಲು ಬಂಡವಾಳ ಬಳಸುವುದು, ಬ್ಯಾಂಕುಗಳ ಅನುತ್ಪಾದಕ ಆಸ್ತಿ ಸವಾಲನ್ನು ಬಗೆಹರಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳು ಅವರಿಂದ ಸೌಹಾರ್ದವಾಗಿ ಬಗೆಹರಿಯಬೇಕಿದೆ. ಈ ನಿಟ್ಟಿನಲ್ಲಿ ಪರಿಹಾರದ ದಾರಿ ಹುಡುಕುವಾಗ ಕೇಂದ್ರೀಯ ಬ್ಯಾಂಕ್​ನ ಸ್ವಾಯತ್ತತೆಗೆ ಧಕ್ಕೆಯಾಗದಂತೆ ಮುತುವರ್ಜಿ ವಹಿಸುವ ಹೊಣೆಗಾರಿಕೆಯೂ ದಾಸ್ ಮೇಲಿದೆ.

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ಆರ್​ಬಿಐನಿಂದ ಹೆಚ್ಚಿನ ನಿರೀಕ್ಷೆ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತರೆ ಬ್ಯಾಂಕ್​ಗಳ ಮೇಲೆ ಸೂಕ್ತ ನಿಗಾ, ನಿಯಂತ್ರಣ ಇರಿಸಿ ಎನ್​ಪಿಎ ಹೊರೆಯನ್ನು ಕಡಿಮೆ ಮಾಡುವ ಜತೆಗೆ ಆರ್ಥಿಕ ಬೆಳವಣಿಗೆಗೆ ಟಾನಿಕ್ ಒದಗಿಸುವ ಅನಿವಾರ್ಯತೆ ಈಗ ಎದುರಾಗಿದೆ. ಇಷ್ಟೊಂದು ಸವಾಲುಗಳಿಗೆ ದಾಸ್ ಶಕ್ತಿಯುತ ಪರಿಹಾರ ಕಂಡುಕೊಂಡರೆ ದೇಶದಲ್ಲಿ ನಿಜಕ್ಕೂ ‘ಅಚ್ಛೇ ದಿನ್’ ಬರಬಹುದೇನೋ? ಆ ನಿರೀಕ್ಷೆಯೊಂದಿಗೆ ಮುಂದಿನ ಬೆಳವಣಿಗೆಗಳನ್ನು ಕಾದುನೋಡೋಣ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)

[ಪ್ರತಿಕ್ರಿಯಿಸಿ: [email protected]]

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...