ಬೆಂಗಳೂರು: ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಪರಂಪರೆಯನ್ನು ಬಿಂಬಿಸುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ‘ವಿಟಿಯು ಯೂತ್ ಫೆಸ್ಟ್ ಇಂಟರ‌್ಯಾಕ್ಟ್-2025’ ನಗರದ ಗ್ಲೋಬಲ್ ಅಕಾಡೆಮಿ ಆ್ ಟೆಕ್ನಾಲಜಿ (ಜಿಎಟಿ)ಯಲ್ಲಿ ಮಾ.24ರಿಂದ 28ರವರೆಗೆ ನಡೆಯುತ್ತಿದೆ.
ೆಸ್ಟ್‌ನಲ್ಲಿ ವಿಟಿಯು ಸಂಯೋಜಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 100 ಕಾಲೇಜುಗಳ 3,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆಯಾ ಕ್ಷೇತ್ರಗಳ 100 ಮಂದಿ ತಜ್ಞರು ತೀರ್ಪುಗಾರರಾಗಿ ಕೈಜೋಡಿಸಲಿದ್ದಾರೆ ಎಂದು ಜಿಎಟಿ ಟ್ರಸ್ಟಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕು ದಿನಗಳ ಈ ಅದ್ಧೂರಿ ಯೂತ್ ೆಸ್ಟ್‌ಗೆ ಜಿಎಟಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾ.24ರಂದು ಚಾಲನೆ ನೀಡಲಿದ್ದಾರೆ. ಈ ವೇಳೆ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್, ನಟ ದ್ರವ ಸರ್ಜಾ ಉಪಸ್ಥಿತರಿರಲಿದ್ದಾರೆ. ಮಾ.25ರಂದು ಗಾಯಕ ವಿಜಯ್ ಪ್ರಕಾಶ್ ಸಂಗೀತ ಕಛೇರಿ ನಡೆಸಲಿದ್ದಾರೆ. ಮಾ.27ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ನಟ ವಿಜಯ್ ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದರು.
ಬ್ರ್ಯಾಂಡ್ ಕರ್ನಾಟಕ ಥೀಮ್‌ನಲ್ಲಿ ಆಯೋಜನೆ:
ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಆಡಳಿತ, ಶ್ರೀಮಂತ ಕನ್ನಡ ಸಾಹಿತ್ಯ, ಕಲೆಯ ತವರೂರಾಗಿದೆ. ಇವೆಲ್ಲವನ್ನೂ ಪ್ರದರ್ಶನಗೊಳ್ಳಲಿ ಎಂಬ ಆಶಯದಿಂದ ೆಸ್ಟ್‌ನಲ್ಲಿ ಸಂಗೀತ, ಕಲೆ, ಸಾಹಿತ್ಯ, ಲಲಿತಕಲೆ ಮತ್ತು ರಂಗಭೂಮಿ ಸೇರಿ 5 ವಿಭಾಗಗಳ 25 ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇಡೀ ಕರ್ನಾಟಕದ ಪರಂಪರೆ ಬಿಂಬಿಸುವುದರಿಂದ ‘ಬ್ರ್ಯಾಂಡ್ ಕರ್ನಾಟಕ’ ಪರಿಕಲ್ಪನೆಯಲ್ಲಿ ೆಸ್ಟ್ ಆಯೋಜಿಸಲಾಗಿದೆ ಎಂದು ಹೇಳಿದರು.
1,500 ಮಂದಿಗೆ ವಸತಿ ವ್ಯವಸ್ಥೆ:
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧೆಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಸ್ಪರ್ಧೆಗಾಗಿ ಆಗಮಿಸುವ 1,500 ಮಂದಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳ ಜತೆಗೆ ನಮ್ಮ ಕಾಲೇಜಿನ ಮೂರು ಸಾವಿರ ವಿದ್ಯಾರ್ಥಿಗಳು ಕೂಡ ಭಾಗವಹಿಸಲಿದ್ದಾರೆ ಎಂದರು.