More

    ವಿಎಸ್‌ಕೆ ವಿವಿಯಲ್ಲಿ ವಸ್ತ್ರ ಸಂಹಿತೆ ಜಾರಿ, ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸುವಂತಿಲ್ಲ

    ಬಳ್ಳಾರಿ: ನಗರದ ವಿಎಸ್‌ಕೆ ವಿವಿ ಸಿಬ್ಬಂದಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಬೋಧಕ, ಬೋಧಕೇತರ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ವಸ್ತ್ರಸಂಹಿತೆ ಅನ್ವಯಿಸಲಿದೆ. ಪುರುಷರು ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸುವಂತಿಲ್ಲ. ಮಹಿಳೆಯರ ಮೊದಲ ಆದ್ಯತೆ ಸೀರೆಯಾಗಿದ್ದು, ಅನಿವಾರ್ಯವಾದರೆ ಚೂಡಿದಾರ ಧರಿಸಬಹುದು ಎಂದು ಸೂಚಿಸಲಾಗಿದೆ. ವಿವಿಯ ಕುಲಸಚಿವೆ ಬಿ.ಕೆ.ತುಳಸಿಮಾಲಾ ಗುರುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ವಿವಿಯಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಯಾರು ಎಂಬುದನ್ನು ತಿಳಿಯದ ಪರಿಸ್ಥಿತಿ ಇತ್ತು. ವಸ್ತ್ರ ಸಂಹಿತೆ ಜಾರಿ ಮಾಡಿದ್ದು ಉತ್ತಮ ಬೆಳವಣಿಗೆ ಆಗಿದೆ. ಸಮವಸ್ತ್ರ ಪದ್ಧತಿ ಜಾರಿಗೊಳಿಸಿದರೆ ಇನ್ನೂ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ವಸ್ತ್ರಸಂಹಿತೆ ಜಾರಿಗೆ ಸಂಬಂಧಿಸಿದಂತೆ ವಿಎಸ್‌ಕೆ ವಿವಿಯ ಕುಲಪತಿ ಸಿದ್ದು ಅಲಗೂರು ಹಾಗೂ ಕುಲಸಚಿವೆ ಬಿ.ಕೆ.ತುಳಸಿಮಾಲಾ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts