ಸಂಕೇಶ್ವರರ ಉದ್ಯೋಗ ಸೇವೆ ಅನನ್ಯ

ರಾಯಚೂರು:ವಿಆರ್​ಎಲ್​ನಂತಹ ಬೃಹತ್ ಸಂಸ್ಥೆ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಡಾ.ವಿಜಯ ಸಂಕೇಶ್ವರರ ಕಾರ್ಯ ಅನನ್ಯ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀಮಠಕ್ಕೆ ಭಾನುವಾರ ಆಗಮಿಸಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ಸಂಕೇಶ್ವರ ದಂಪತಿಯನ್ನು ಶ್ರೀಗಳು ಸನ್ಮಾನಿಸಿ ಮಾತನಾಡಿದರು.

ವಿಆರ್​ಎಲ್ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಬದುಕು ಕಲ್ಪಿಸಿದ್ದು, ದೇಶದಲ್ಲೇ ಮಾದರಿ ಸಂಸ್ಥೆಯಾಗಿದೆ. ಸಂಕೇಶ್ವರರ ಸಂಕಲ್ಪ, ನಿರಂತರ ಪರಿಶ್ರಮ ಇತರರಿಗೆ ಅನುಕರಣೀಯ. ‘ವಿಜಯವಾಣಿ’ ಪತ್ರಿಕೆ ಮತ್ತು ದಿಗ್ವಿಜಯ 247 ನ್ಯೂಸ್ ವಾಹಿನಿಯು ಧಾರ್ವಿುಕ ಕಾರ್ಯಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡುವ ಮೂಲಕ ಧರ್ಮ, ಸಂಸ್ಕೃತಿ ಉಳಿವಿಗಾಗಿ ಉತ್ತಮ ಕಾರ್ಯ ಮಾಡುತ್ತಿವೆೆ. ಧರ್ಮ ನಿಷ್ಠೆಯಿಂದ ಮಾಡುವ ನಿಮ್ಮ ಕೆಲಸಗಳು ಯಶಸ್ವಿಯಾಗಲಿ, ಸಮಾಜಕ್ಕೆ ಮತ್ತಷ್ಟು ಉಪಯುಕ್ತ ಕಾರ್ಯಗಳಾಗಲಿ ಎಂದು ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ ರಾವ್, ಐ.ಪಿ.ನರಸಿಂಹಾಚಾರ್, ಪಿಆರ್​ಒ ಬಿಂದು ಮಾಧವ ಇದ್ದರು.