ಮತದಾನದ ಅರಿವು ಮೂಡಿಸಲು ಒನಕೆ ಓಬವ್ವ, ರಾಣಿ ಚೆನ್ನಮ್ಮರಾದ ಮಹಿಳೆಯರು

ಬೆಳಗಾವಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಮತದಾನದ ಅರಿವು ಮೂಡಿಸುವ ಕೆಲಸವಾಗುತ್ತಿದ್ದು ಬೆಳಗಾವಿಯಲ್ಲಿ ಮಹಿಳೆಯರು ಸಾಂಪ್ರದಾಯಿಕ ಧಿರಿಸು ತೊಟ್ಟು ಜನರಿಗೆ ಮತದಾನದ ಮಹತ್ವ ತಿಳಿಸಿದರು.

ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಚೆನ್ನಮ್ಮ ಮತ್ತಿತರ ವೀರ ವನಿತೆಯರ ಉಡುಗೆ ತೊಟ್ಟು ಕುದುರೆ ಏರಿ ಮೆರವಣಿಗೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಡಾ. ರಾಜೇಂದ್ರ ಕೆ.ವಿ. ಮೆರವಣಿಗೆಗೆ ಚಾಲನೆ ನೀಡಿದರು.