ದೇಶದ ಪ್ರಗತಿ ಹಿತದೃಷ್ಟಿಯಿಂದ ಮತ ಚಲಾಯಿಸಿ

ಕಡಬಿ: ಪ್ರತಿಯೊಬ್ಬ ಮತದಾರ ತನ್ನ ಅಮೂಲ್ಯ ಮತವನ್ನು ಯಾವುದೇ ಆಮಿಷಕ್ಕೆ ಒಳಗಾಗದೇ ದೇಶದ ಪ್ರಗತಿಗೆ ಶ್ರಮಿಸುವಂತಹ ವ್ಯಕ್ತಿಗಳಿಗೆ ಚಲಾಯಿಸಬೇಕು ಎಂದು ಪಿಡಿಒ ಸುವರ್ಣಗೌರಿ ಕೊಣ್ಣೂರ ಹೇಳಿದ್ದಾರೆ.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಮುಂದಿನ ತಿಂಗಳು ಜರುಗುವ ಲೋಕಸಭಾ ಚುಣಾವಣೆ ನಿಮಿತ್ತ ಮತದಾರರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಕಡಬಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ರಥದೊಂದಿಗೆ ಜಾಥಾ ಸಂಚರಿಸಿತು.

ದಾರಿಯುದ್ದಕ್ಕೂ ಪಂಚಾಯಿತಿ ಸಿಬ್ಬಂದಿ, ಮತಗಟೆ ಅಕಾರಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳೊಂದಿಗೆ ನನ್ನ ಮತ ನನ್ನ ಹಕ್ಕು, ತಪ್ಪದೇ ಮತಚಲಾಯಿಸಿ, ಮತಚಲಾಯಿಸಿದವನೇ ಹೀರೊ ಎಂಬ ಘೋಷಣೆ ಕೂಗುತ್ತಾ ಮತದಾರರಿಗೆ ಅರಿವು ಮೂಡಿಸಿದರು. ಮತಗಟೆ ಅಕಾರಿಗಳಾದ ಬಿ.ಎಸ್.ಗಾಣಗಿ, ಎಂ.ಐ.ಚನ್ನಿನಾಯ್ಕರ, ಸಿ.ಎಸ್.ಹೊಸೂರ, ವಿಠ್ಠಲ ದಳವಾಯಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.