20.4 C
Bengaluru
Sunday, January 19, 2020

ಮತದಾನದ ಹಕ್ಕು ಹಾಗೆಯೇ ಜನರ ಉಡಿಯಲ್ಲಿ ಬಿದ್ದಿದ್ದಲ್ಲ!

Latest News

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

ಚಿಕ್ಕಮಗಳೂರಿನ ಎಲ್ಲ ರೆಸಾರ್ಟ್ ಮತ್ತು ಹೋಂಸ್ಟೇ  ಗಳು ಈ ವಾರ ಪೂರ್ತಿ ಬುಕ್ ಆಗಿರುವ ವರದಿಯನ್ನು ಪತ್ರಿಕೆಗಳಲ್ಲಿ ಓದಿ ಒಂದು ಕ್ಷಣ ಮೌನವಾದೆ. ನೋವಿನ ಕಿರುನಗು ತುಟಿಯಂಚಿನಲ್ಲಿ ಹಾದುಹೋಯಿತು. ಭಾರತದ ಚುನಾವಣಾ ಆಯೋಗ ಕೋಟಿಗಟ್ಟಲೇ ಖರ್ಚು ಮಾಡಿ ಮತದಾನದ ಮಹತ್ವದ ಬಗ್ಗೆ ಕ್ಷಣಕ್ಷಣಕ್ಕೂ ಜಾಹೀರಾತು ನೀಡಿದರೂ ಮುಲಾಜೇ ಇಲ್ಲದೆ ಹಿಂದುಮುಂದಿನ ರಜೆಗಳ ಜತೆಗೆ ಮತದಾನದ ದಿನದ ರಜೆಯನ್ನೂ ಸೇರಿಸಿಕೊಂಡು ಪ್ರವಾಸ ಹೊರಡುವ ನಮ್ಮ ಪ್ರಜ್ಞಾವಂತ ನಾಗರಿಕರ ಬಗ್ಗೆ ವಿಷಾದವೆನಿಸಿತು.

ಬಹುಶಃ ನಾವು ಹೀಗೆಯೇ. ಬೇರೆಯವರ ಬಗ್ಗೆ ಮಾತಾಡುವಾಗ, ಟೀಕೆ ಮಾಡುವಾಗ ಜಾಗೃತವಾಗುವ ನಮ್ಮ ಸರಿತಪ್ಪುಗಳ ಉದ್ದದ ಪಟ್ಟಿಯನ್ನು ನಮ್ಮದೇ ಅಂತರಂಗದ ಒಳಹೊಕ್ಕು ಶೋಧಿಸಿಕೊಳ್ಳುವ ಪ್ರಸಂಗಬಂದಾಗ ಮುಚ್ಚಿಟ್ಟು ಬಿಡುವುದು ನಮಗೆ ಅಭ್ಯಾಸ ಆಗಿಹೋಗಿದೆ. ಅಷ್ಟಕ್ಕೂ, ನಮ್ಮ ಅಂತರಂಗಕ್ಕೆ ಪಾತಾಳಗರಡಿ ಹಿಡಿದುಕೊಳ್ಳುವ ರೂಢಿಯೇ ನಿಂತುಹೋಗುತ್ತ ಬಂದಿರುವಾಗ ರ್ತಾಕ ಆಲೋಚನೆಗಳಿಗೆ ಜಾಗವೆಲ್ಲಿ?

ಅನ್ಯರ ಸರ್ವಾಧಿಕಾರವನ್ನು ನಿರಾಕರಿಸಿ ಪ್ರಜೆಗಳೇ ಪ್ರಭುಗಳು ಎಂಬ ಉದಾತ್ತ ಧ್ಯೇಯವನ್ನಿಟ್ಟುಕೊಂಡು ಜಾರಿಗೆ ಬಂದ ಆಡಳಿತ ಪದ್ಧತಿಯೇ ಪ್ರಜಾಪ್ರಭುತ್ವ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಪ್ರಜಾಪ್ರಭುತ್ವದ ಅತ್ಯುತ್ತಮ ಮತ್ತು ಮೂಲಭೂತ ಅಂಶಗಳಲ್ಲೊಂದು. ಮತದಾನ ಪ್ರಜೆಗಳ ಅಭಿಪ್ರಾಯ ವ್ಯಕ್ತಪಡಿಸುವ ಒಂದು ಮಾರ್ಗ. ಆಳುವವರ ತಲೆಯನ್ನು ಭುಜದ ಮೇಲೇ ಇರಿಸುವ ಮಾಯಾದಂಡ. ಆದರೆ ಈ ಮಾಯಾದಂಡವನ್ನು ಬಡವ ಬಲ್ಲಿದ, ಮೇಲುಕೀಳೆನ್ನದೇ ಚಲಾಯಿಸುವ ವಯಸ್ಕ ಮತದಾನದ ಈ ಹಕ್ಕು ಹಾಗೆಯೇ ಬಂದು ಜನರ ಉಡಿಯಲ್ಲಿ ಬಿದ್ದಿದ್ದಲ್ಲ!

ಪ್ರಜಾಪ್ರಭುತ್ವದ ವಿಕಾಸದ ಹಾದಿಯನ್ನು ಒಮ್ಮೆ ಸುಮ್ಮನೇ ಗಮನಿಸಿದರೂ ಸಾಕು, ಇದಕ್ಕೆ ಬೇಕಾದಷ್ಟು ನಿದರ್ಶನಗಳು ಸಿಗುತ್ತವೆ. ಬಡವರು, ಮಹಿಳೆಯರು, ಅನಕ್ಷರಸ್ಥರು ತಮ್ಮ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಲಾರರು ಎಂಬ (ಮೂಢ)ನಂಬಿಕೆಯಿಂದ ಜನಸಂಖ್ಯೆಯ ಬಹುಭಾಗವಿರುವ ಅವರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ ಉದಾಹರಣೆಗಳು ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಕಾಣಸಿಗುತ್ತವೆ. ಭಾರತದಲ್ಲಂತೂ ಬ್ರಿಟಿಷರ ಆಳ್ವಿಕೆಯಲ್ಲಿ ಜನಸಂಖ್ಯೆಯ ಅತ್ಯಂತ ಕನಿಷ್ಟ ಭಾಗಕ್ಕಷ್ಟೇ ಮತದಾನ ಮಾಡುವ ಹಕ್ಕಿತ್ತು! ಆದರೆ ಭಾರತೀಯ ಸಂವಿಧಾನರಚನಾಕಾರರು ಪ್ರಜಾಪ್ರಭುತ್ವದ ಜೀವನಾಡಿ ವಯಸ್ಕ ಮತದಾನ ಪದ್ಧತಿ ಎಂದು ನಂಬಿದ್ದರು.

ಅನಕ್ಷರತೆ ತುಂಬಿತುಳುಕುತ್ತಿದ್ದ ನಮ್ಮ ದೇಶ ಈ ರೀತಿಯ ದಿಟ್ಟ ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬಹುದೆ ಎಂದು ಸಂವಿಧಾನ ರಚನಾ ಸಮಿತಿಯಲ್ಲಿರುವ ಕೆಲವರೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಬಹಳ ಜನ ಸದಸ್ಯರ ಒಲವು ಜನರೆಡೆಗೇ ಇತ್ತು. ಸಮಾನತೆಯ ಹರಿಕಾರರಾದ ಸಂವಿಧಾನ ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ ಅಂಬೇಡ್ಕರ್ 326ನೇ ವಿಧಿಯನ್ನು ಸಂವಿಧಾನದಲ್ಲಿ ಅಳವಡಿಸಿ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕವೇ ಚುನಾವಣೆಗಳು ನಡೆಯಬೇಕೆಂಬುದನ್ನು ಸಂವಿಧಾನಬದ್ಧಗೊಳಿಸಿದರು. ಪ್ರತಿಯೊಬ್ಬ ಮನುಷ್ಯನಿಗೂ ತನಗೆ ಏನು ಬೇಕು ಎಂದು ಗೊತ್ತಿರುತ್ತದೆ, ಅನಕ್ಷರಸ್ಥನಿಗೂ ಅದನ್ನು ನಿರ್ಧರಿಸುವ ಜಾಣತನವಿರುತ್ತದೆ ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು. ಇದು ನಮ್ಮ ಸಂವಿಧಾನರಚನಾಕಾರರಿಗೆ ಸಾಮಾನ್ಯ ಜನರ ಮೇಲಿದ್ದ ಅಪಾರ ಮತ್ತು ಅಚಲ ನಂಬಿಕೆಯನ್ನು ಸೂಚಿಸುತ್ತದೆ. ಜಗತ್ತಿನ ಮುಂದುವರಿದ ಪ್ರಜಾಪ್ರಭುತ್ವ ದೇಶಗಳಲ್ಲೇ ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿ ಜಾರಿಗೆ ಬಂದಿದ್ದು ನಿರಂತರ ಹೋರಾಟಗಳ ಮೂಲಕ.

ಸ್ವಾತಂತ್ರ್ಯದ ಪ್ರತಿಮೆಯನ್ನು ಮುಕುಟಮಣಿಯಾಗಿ ಹೊಂದಿರುವ ಅಮೆರಿಕದಲ್ಲಿಯೂ ಪ್ರಜಾಪ್ರಭುತ್ವದ ಆಶಯಗಳು ಆರಂಭದಲ್ಲಿ ಲಿಂಗ, ಜನಾಂಗ, ಬಣ್ಣ, ಆಸ್ತಿ ಆಧಾರಿತ ಮತದಾನದ ಮೂಲಕ ಕಮರಿದ್ದವು. ಬಲಿಷ್ಠರನ್ನು ಮತ್ತಷ್ಟು ಪ್ರಭಾವಿಗಳನ್ನಾಗಿ ಮತ್ತು ಬಡವರನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡುವ ಈ ರೀತಿಯ ಭೇದಭಾವ ಎಂಥ ದೇಶಗಳನ್ನೂ ಬಿಟ್ಟಿರಲಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಕಣ್ಣು ಬಿಡುತ್ತಿರುವ ಎಳೆಯ ಕೂಸಾಗಿದ್ದ ಭಾರತ ನಿರ್ದಿಷ್ಟ ವಯಸ್ಸು ದಾಟಿದ ತನ್ನೆಲ್ಲ ಜನರಿಗೂ ಮತದಾನದ ಹಕ್ಕನ್ನು ನೀಡಿ ತನ್ನನ್ನು ತಾನೇ ಗೌರವಿಸಿಕೊಂಡಿತು. ಮತ್ತು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯಿತು.

ಆದರೆ ನಮ್ಮ ಹಿರಿಯರು ಉದಾತ್ತ ಉದ್ದೇಶವನ್ನಿಟ್ಟುಕೊಂಡು ನೀಡಿದ ಈ ಹಕ್ಕನ್ನು ಉಪಯೋಗಿಸಿಕೊಳ್ಳಲೂ ಸೋಮಾರಿತನ ಮಾಡುವವರನ್ನು ಕಂಡರೆ ಆಕ್ರೋಶ ಉಕ್ಕುತ್ತದೆ. ಮತದಾನದಂದು ಸಿಗುವ ರಜೆಯನ್ನು ಮಜವಾಗಿರಲು ಉಪಯೋಗಿಸಿಕೊಳ್ಳುವ ನಮ್ಮ ವಿದ್ಯಾವಂತ ಘನ ನಾಗರಿಕರನ್ನು ನೋಡಿ ನಮ್ಮ ಹಿರಿಯರ ಆತ್ಮಗಳು ಎಷ್ಟು ಸಂಕಟಪಡಬಹುದು? ಅಪಾತ್ರದಾನ ಮಾಡಿದ ಕೊರಗು ಅವರನ್ನು ಬಾಧಿಸಬಹುದೇನೋ?

ಏಕೆಂದರೆ ಮತದಾನ ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ ಹೌದು. ವರ್ಷವಿಡೀ ಬೆಲೆಗಳ ಬಗ್ಗೆ, ಮಹಿಳಾ ಶೋಷಣೆಯ ಬಗ್ಗೆ ಮತ್ತು ಇತರೆ ಧಾರ್ವಿುಕ, ಸಾಮಾಜಿಕ, ಆರ್ಥಿಕ ಸಂಗತಿಗಳ ಬಗ್ಗೆ ಮಾತಾಡುವ ನಮಗೆ ಅವೆಲ್ಲವನ್ನೂ ರಾಜಕೀಯವೇ ನಿರ್ಧರಿಸುತ್ತದೆ ಎಂಬುದೇ ಗೊತ್ತಿಲ್ಲ! ನಮ್ಮನ್ನೂ ಒಳಗೊಂಡು ನಮ್ಮ ಸುತ್ತಲಿನ ಪ್ರಪಂಚದಲ್ಲಿ ನಡೆಯುತ್ತಿರುವ ಸಂಗತಿಗಳ ಅರಿವು ನಮ್ಮೆಲ್ಲರಿಗೂ ಅತ್ಯಗತ್ಯ. ಶಿಕ್ಷಣಕ್ಕೆ ಎಷ್ಟು ಹಣ ಸಿಗಬೇಕು, ಕ್ರೀಡೆಗಳ ಪಾಲು ಏನು, ಉದ್ಯೋಗಗಳ ಹೆಚ್ಚಳ ಹೇಗೆ, ಆಹಾರ ಭದ್ರತೆ ಯಾವ ರೀತಿ, ದಿನಬಳಕೆಯ ವಸ್ತುಗಳ ಬೆಲೆ ನಿರ್ಧಾರ ಇವು ಮತ್ತು ಇನ್ನೂ ಅನೇಕ ಮುಖ್ಯ, ಬಹುಮುಖ್ಯ, ಸಾಧಾರಣ ಎಲ್ಲ ಸಂಗತಿಗಳೂ ಸಂಸತ್ತಿನಲ್ಲೋ ವಿಧಾನಸಭೆಯಲ್ಲೋ ರಚಿತವಾಗುವ ಮಸೂದೆಗಳ ಮೇಲೆ, ಕಾನೂನುಗಳ ಮೇಲೆಯೇ ನಿರ್ಧರಿತವಾಗುತ್ತವೆ. ಅಂದರೆ ನಮ್ಮೆಲ್ಲರ ಅಷ್ಟೇ ಅಲ್ಲ ಹುಟ್ಟುವ ಪ್ರತೀ ಮಗುವಿನ ಭವಿಷ್ಯವೂ ನಿರ್ಧರಿಸಲ್ಪಡುವುದು ಇವುಗಳಿಂದಲೇ. ಒಂದು ವೋಟಿನಿಂದ ಏನಾಗುತ್ತದೆ, ಯಾರು ಗೆದ್ದರೆ ನಮಗೇನು, ಸಿಗುವುದೇ ಒಂದು ದಿನ ರಜಾ ಸುಮ್ಮನೆ ಆರಾಮಾಗಿರೋಣ ಎಂದೆಲ್ಲ ಯೋಚನೆ ಮಾಡುವ ಜನರಿಗೆ ಮತದಾನದ ಮಹತ್ವವೇ ಇನ್ನೂ ಅರಿವಾಗದಿರುವುದು ದುರಂತ.

ಹಾಗಾಗಿ ಎಲ್ಲರೂ ರಾಜಕೀಯ ಪ್ರಜ್ಞೆ ಹೊಂದಿರುವುದು ಅತ್ಯಗತ್ಯ. ಅದನ್ನು ವ್ಯಕ್ತಪಡಿಸುವ ಮೊದಲ ಹೆಜ್ಜೆಯೇ ಮತದಾನ. ಬರಗೂರು ರಾಮಚಂದ್ರಪ್ಪನವರು ಹೇಳುವಂತೆ ರಾಜಕೀಯ ಪ್ರಜ್ಞೆ ಪಕ್ಷಪರ ಪ್ರಜ್ಞೆಯಲ್ಲ ಎಂಬುದನ್ನು ಯುವಜನತೆ ನೆನಪಿಟ್ಟುಕೊಳ್ಳಬೇಕು. ಆದರೆ ಇಂದು ರಾಜಕೀಯ ಪ್ರಜ್ಞೆ ಎಂದರೆ ಬಹುತೇಕರಿಗೆ ಯಾವುದಾದರೂ ರಾಜಕೀಯ ಪಕ್ಷವನ್ನು ಬೆಂಬಲಿಸುವುದು, ಮತ್ತೊಂದನ್ನು ವಿರೋಧಿಸುವುದು ಎಂದೇ ಅರ್ಥವಾದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುವ ಪುಂಖಾನುಪುಂಖ ಸಂದೇಶಗಳು ಕೂಡ ಅದನ್ನೇ ಹೇಳುತ್ತವೆ. ಭಿನ್ನಾಭಿಪ್ರಾಯವೆಂಬುದು ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ಗುಣ ಎಂಬುದನ್ನು ಅರ್ಥ ಮಾಡಿಕೊಳ್ಳದ ಇಂಥವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗುವುದೇ ರಾಜಕೀಯ ಪ್ರಜ್ಞೆ ಎಂದುಕೊಂಡು ತಮ್ಮ ಈ ಅರೆಬೆಂದ ಪಾಂಡಿತ್ಯದಿಂದ ಸಂಬಂಧಗಳನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.

ಹಾಂ, ಇನ್ನು ಮತ ಹಾಕದೇ ಮಕ್ಕಳ ಜತೆ ಪಿಕ್​ನಿಕ್ ಹೊರಟು ಎಂಜಾಯ್ ಮಾಡುತ್ತಿರುವವರು, ಮನೆಯಲ್ಲೇ ಕೂತು ಆಗಿರುವುದು ಐವತ್ತೇ ಶೇಕಡ ಮತದಾನ ಎಂದು ಟೀವಿಯಲ್ಲಿ ಸುದ್ದಿ ನೋಡುತ್ತಿರುವವರು, ಸಿನಿಮಾದಲ್ಲಿ ಕಾರ್ನರ್ ಸೀಟಲ್ಲಿ ಕೂತು ಪಾಪ್ಕಾರ್ನ್ ತಿನ್ನುತ್ತಿರುವವರು ಎಲ್ಲರೂ ಹಾಕದೇ ಇರುವುದು ತಮ್ಮ ಒಂದು ಮತವನ್ನು ಮಾತ್ರವಲ್ಲ. ಬದಲಾಗಿ ಅವರು ಕಳೆದುಕೊಳ್ಳುತ್ತಿರುವುದು ತಮ್ಮ ಪ್ರಶ್ನಿಸುವ ನೈತಿಕ ಅಧಿಕಾರವನ್ನು, ಸಂವಿಧಾನ ನಮಗೆ ನೀಡಿರುವ ಅಮೂಲ್ಯವಾದ ಒಂದು ಹಕ್ಕನ್ನು. ಅಂಥವರಲ್ಲಿ ಇನ್ನೂ ಒಂದು ವಿನಂತಿ, ನಿಮ್ಮ ಮನೆಗಳಲ್ಲಿ ಮಕ್ಕಳಿದ್ದರೆ ದಯವಿಟ್ಟು, ಒಬ್ಬರು ಮತ ಹಾಕದಿದ್ದರೆ ಏನೂ ಮುಳುಗಿಹೋಗಲ್ಲ ಎಂಬರ್ಥದ ಮಾತುಗಳನ್ನು ಆಡಬೇಡಿ. ನಿಮ್ಮ ನಿರಾಶಾವಾದವನ್ನು ಮುಂದಿನ ಪೀಳಿಗೆಗೂ ದಾಟಿಸಬೇಡಿ. ಇದು ಸಮಸ್ತ ಕನ್ನಡಿಗರ ಪರವಾಗಿ ನನ್ನ ಮನವಿ. ಆರೋಗ್ಯ ಅಥವಾ ಬಹಳ ಗಂಭೀರ ಸಮಸ್ಯೆಗಳಿದ್ದರೆ ಆಗ ಮತದಾನ ಮಾಡಲಾಗದಿರಬಹುದು. ಉಳಿದಂತೆ ಮತದಾನ ಮಾಡದಿರುವುದು ಘೊರ ಅವಮಾನ ಎಂಬುದು ಗೊತ್ತಿರಲಿ.

ಅಷ್ಟಕ್ಕೂ ಇಷ್ಟೆಲ್ಲ ಅವಾಂತರ ಏಕೆ? ಸುಮ್ಮನೆ ಹೋಗಿ ಮತಯಂತ್ರದ ಒಂದು ಗುಂಡಿ ಒತ್ತಿ ಬೆರಳಿಗೆ ಶಾಯಿ ಹಾಕಿಸಿಕೊಂಡು ಬಂದರಾಗದೇ? ಬನ್ನಿ ಮತದಾನ ಮಾಡೋಣ. ನಾವೆಲ್ಲ ಭಾರತದ ಪ್ರೌಢ ಪ್ರಜೆಗಳು ಎಂಬುದನ್ನು ಸಾಬೀತುಪಡಿಸೋಣ. ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯೋಣ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...