ವಿಜಯವಾಣಿ ಸುದ್ದಿಜಾಲ ಹಾವೇರಿ
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಗೆ ಮತಗೋಷ್ಠಿ (ಕವಿಗೋಷ್ಠಿ) ವಾರ್ತಾ ಭವನದಲ್ಲಿ ಶುಕ್ರವಾರ ಜರುಗಿತು.
ಜಿಲ್ಲಾಡಳಿತ, ಜಿ.ಪಂ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗದ 23 ಕವಿಗಳು ಭಾಗವಹಿಸಿದ್ದರು. ಯಾವುದೇ ಆಮಿಷಕ್ಕೊಳಗಾಗದೇ ತಮ್ಮ ಹಕ್ಕನ್ನು ಚಲಾಯಿಸುವಂತೆ ಕಾವ್ಯದ ಮೂಲಕ ವಿನಂತಿಸಿದರು.
ಸಾಹಿತಿ ಸತೀಶ ಕುಲಕರ್ಣಿ ಕವಿಗೋಷ್ಠಿ ನಿರ್ವಹಿಸಿದರು. ಗೋಷ್ಠಿಯಲ್ಲಿ ಪ್ರಕಾಶ ಇಚ್ಚಂಗಿ, ವಿಠ್ಠಲವಾರ್ ಮಾಳೋದಕರ, ಸೀತಾರಾಂ ಕಣೇಕಲ್, ಸಂತೋಷ್ ಪಿಶೆ, ಎಸ್.ಜೆ. ಚಿತ್ರಗಾರ, ಜಿ.ಎಂ. ಓಂಕಾರಣ್ಣನವರ, ರವಿಂದ್ರ ಕೊಳ್ಳಿ, ಗೀತಾ ಸಾಲಿಮಠ, ಶಕುಂತಲಾ ದಾಳೆರ, ಸುರೇಖಾ ನೇಲಕರ, ಶಶಿಕಲಾ ಅಕ್ಕಿ, ಕುಮಾರದಾಸ್ ಹೂಗಾರ, ರಾಜಾಭಕ್ಷು ಸಿ.ಎಂ., ಕಾಂತೇಶ ಗೊಲ್ಲರ, ಭಾಗ್ಯವತಿ ಕೋಡಬಾಳ, ಮಂಜುನಾಥ ಹರಿಜನ, ಎಂ.ಬಿ. ನಾಗಲಾಪುರ, ರಾಜೇಶ್ವರಿ, ಶ್ವೇತಾ, ಸಿದ್ದುಮತಿ ನೆಲವಿಗಿ, ರೇಣುಕಾ ಗುಡಿಮನಿ ಅವರು ಸ್ವರಚಿತ ಕವನಗಳನ್ನು ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಗಂಗಾಧರ ನಂದಿ ಮಾತನಾಡಿ, ನಗರದ ಸುಶಿಕ್ಷಿತರು ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗುತ್ತದೆ. ಹೆಚ್ಚು ಮತದಾನವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ ಎಂದರು.
ಕವಿಗೋಷ್ಠಿಗೆ ಜಿ.ಪಂ. ಸಿಇಒ ಕೆ. ಲೀಲಾವತಿ ಚಾಲನೆ ನೀಡಿದರು. ಅಂಗವಿಕಲ ಮತದಾರರ ಜಿಲ್ಲಾ ರಾಯಭಾರಿ ಹಸೀನಾ ಹೆಡಿಯಾಲ ಮಾತನಾಡಿದರು. ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಫ್. ಕಾಳೆ ಇತರರಿದ್ದರು.