More

    ಮತದಾರರ ನೋಂದಣಿ ಜಾಗೃತಿ ಜಾಥಾ

    ಸುಂಟಿಕೊಪ್ಪ: ಯುಸಮೂಹ ಮತದಾನದ ಹಕ್ಕು ಹೊಂದುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪಿ.ಸೋಮಚಂದ್ರ ಹೇಳಿದರು.

    ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ನೋಂದಣಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಪವಿತ್ರವಾದ ಹಕ್ಕು. 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
    ಉಪನ್ಯಾಸಕಿ ಕೆ.ಸಿ.ಕವಿತಾ ಮಾತನಾಡಿ, 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.

    ಜಾಥಾಗೆ ಉಪನ್ಯಾಸಕಿ ಮಂಜುಳಾ ಮತ್ತು ಬೆಳ್ಳಿಯಪ್ಪ ಚಾಲನೆ ನೀಡಿದರು. ಉಪನ್ಯಾಸಕರಾದ ಈಶ, ಪಿಲಿಫ್‌ವಾಸ್, ಸುಕನ್ಯಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts