ಕುಡಚಿ: ನೂತನ ಸಂಸದೆಯಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಮೀಪದ ಮೊರಬ
ಗ್ರಾಮದಲ್ಲಿ ಮತದಾರರ ಮನೆ ಮನೆಗೆ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಯುವ ಧುರೀಣ ರಾಹುಲ ಜಾರಕಿಹೊಳಿ ಸೋಮವಾರ ಚಾಲನೆ ನೀಡಿದರು.
ಜಿಪಂ ಮಾಜಿ ಸದಸ್ಯ ಡಿ.ಎಸ್.ನಾಯಿಕ ಮಾತನಾಡಿ, ಪ್ರಿಯಾಂಕಾ ಜಾರಕಿಹೊಳಿ ಅವರು ಬಹುಮತದಿಂದ ಗೆಲುವು ಸಾಧಿಸಿದ್ದು, ಮೊರಬ ಗ್ರಾಮದ ಮತದಾರರು ಹೆಚ್ಚಿನ ಲೀಡ್ ನೀಡಿದ್ದಾರೆ. ಗ್ರಾಮದ ಎಲ್ಲ ಮತದಾರರಿಗೆ ಗೋಕಾಕ ಕರದಂಟು ವಿತರಿಸಲಾಗುತ್ತಿದೆ. ಗ್ರಾಮದಲ್ಲಿ ಅಂದಾಜು 1,430 ಕ್ಕೂ ಅಧಿಕ ಮನೆಗಳಿದ್ದು, ನಮ್ಮ ಕಾರ್ಯಕರ್ತರು ಎಲ್ಲ ಮನೆಗಳಿಗೆ ಸಿಹಿ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದರು.
ವಕೀಲ ಡಾ.ರಾಜು ಶಿರಗಾಂವೆ, ರೇವಣ ಸರವ, ಸಂಜೀವ ಬಾನೆ, ನಿರ್ಮಲಾ ಪಾಟೀಲ, ಅರ್ಜುನ ನಾಯಿಕವಾಡೆ, ವಕೀಲ ಪ್ರಶಾಂತ ಕಾಂಬಳೆ, ದೇವಕರ ಹೇಗಡೆ, ಖೇದಾರಿ ಚೌಗಲಾ, ಶ್ರವಣ ಕಾಂಬಳೆ, ಅಣ್ಣಾಸಾಹೇಬ ಅಸೋದೆ, ಇರ್ಫಾನ್ ತರಡೆ ಇತರರು ಇದ್ದರು.