ವಿಜಯವಾಣಿ ಸುದ್ದಿಜಾಲ, ಗದಗ
ಜಿಲ್ಲೆಯಲ್ಲಿ 8.68 ಲಕ್ಷ ಮತದಾರರಿದ್ದು, ಅದರಲ್ಲಿ 49 ವಯೋಮಿತಿ ಒಳಗಿನ ಯುವಕರೇ ಅತ್ಯಧಿಕ ಮತದಾರರಿದ್ದಾರೆ. 5.87 ಲಕ್ಷ ಮತದಾರ ವಯಸ್ಸು ಸರಾಸರಿ 49ರ ಒಳಗಿದ್ದು, ಇನ್ನೂಳಿದ 3 ಲಕ್ಷ ಮತದಾರ ಮೇಲೆ ಪ್ರಭಾವ ಬೀರಬಹುದು ಎಂಬುದು ಚುನಾವಣಾ ತಜ್ಞರ ಅಭಿಪ್ರಾಯ.
ಸಾಮಾಜಿಕ ಜಾಲತಾಣ ಈ ಮತದಾರ ಮೇಲೆ ಅಧಿಕ ಪ್ರಭಾವ ಬೀರಲಿದೆ. ಮನೆಯ ಇತರೆ ಸದಸ್ಯರ ಮೇಲೆ ಇದೇ ವಯೋಮಿತಿಯ ಮತದಾರರು ಪ್ರಭಾವ ಬೀರಬಹುದು. ಹಾಗಾಗು ಪ್ರತಿಬಾರಿಯಂತೆ ಈ ಬಾರಿಯು ಮತದಾನ ಪ್ರಕ್ರಿಯೆಯಲ್ಲಿ ಯುವಕರ ಪಾತ್ರ ಹಿರಿದಾಗಿದೆ.
ಕಡ್ಡಾಯ ಮತದಾನ ಮಾಡಿ:
ಇದು “ಮತದಾನ’ ಎಂಬ ಪ್ರಜಾಪ್ರಭುತ್ವದ ಅಸ್ತ್ರ ಬಳಸುವ ಕಾಲ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಯುವಕರೇ ಪ್ರಭಾವ ಮತ್ತು ಪ್ರಮುಖ ಪಾತ್ರ ವಹಿಸಲಿದ್ದಾರೆ. ಅದರಂತೆ ಇನ್ನೂಳಿದವರು ತಮ್ಮ ಮತದಾನದ ಮೂಲಕ ಸೂಕ್ತ ಅಭ್ಯಥಿರ್ ಆಯ್ಕೆ ಮಾಡಬೇಕಿದೆ. ಈ ಹಿನ್ನೆಲೆ “ಏಳಿ, ಎದ್ದೇಳಿ, ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡಿ’ ಎಂಬ ದ್ಯೇಯವಾಕ್ಯದೊಂದಿಗೆ ಎಲ್ಲರೂ ಕಡ್ಡಾಯ ಮತದಾನ ಮಾಡುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ಒಳಗಾಗಿ ಮತಗಟ್ಟೆಯಲ್ಲಿ ಮತದಾನ ಮಾಡಬೇಕು. ಸಂಜೆ 6 ಗಂಟೆ ನಂತರವೂ ಮತದಾರರ ಸರತಿ ಇದ್ದರೆ, ಮತಗಟ್ಟೆ ಒಳಗಿನ ಮತದಾರರಿಗೆ ಮತದಾನದ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮತದಾನ ಕಾರ್ಯವು ರ್ಪೂಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರ, ವಿವಿಪಿಎಟಿಗಳನ್ನು, ಲಕೋಟೆಗಳನ್ನು ನಗರದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ನಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಯಲ್ಲಿ ಇಡಲಾಗುವುದು ಸೂಕ್ತ ಪೋಲೀಸ್ ಭದ್ರತೆಯೊಂದಿಗೆ ಶೇಖರಿಸಿಡಲಾಗುವುದು. ಸಿಸಿಟಿವಿ, ಚುನಾವಣಾ ಏಜೆಂಟರನ್ನು ವೀಕ್ಷಣೆಗೆ ನಿಯೋಜನೆ ಮಾಡಲಾಗಿದೆ.
ಮತಗಟ್ಟೆ:
ಪ್ರತಿ ಕ್ಷೇತ್ರಕ್ಕೆ 3 ರಂತೆ 12 ಸಖಿ ಮತಟ್ಟೆಗಳನ್ನು ತೆರೆಯಲಾಗಿದೆ. ಇಲ್ಲಿ ಮಹಿಳಾ ಸಿಬ್ಬಂದಿಯೇ ಚುನಾವಣಾ ಕರ್ತವ್ಯವನ್ನು ಸಂರ್ಪೂಣವಾಗಿ ನಿಭಾಯಿಸಲಿದ್ದಾರೆ. ಕ್ಷೇತ್ರಕ್ಕೆ 3 ರಂತೆ ಒಟ್ಟು 12 ಯುವ ಮತಗಟ್ಟೆ, ಕ್ಷೇತ್ರಕ್ಕೆ 4 ರಂತೆ 16 ವಿಕಲಚೇತನ ಮತಗಟ್ಟೆ ಹಾಗೂ ಜಿಲ್ಲೆಯ ಸಂಪ್ರದಾಯ ಹಾಗೂ ಐತಿಹಾಸಿಕ ಪರಂಪರೆ ಸಾರುವ ಪರಿಕಲ್ಪನೆಯಡಿ ಒಟ್ಟು 52 ಮತಗಟ್ಟೆಗಳನ್ನು ತೆರೆಯಲಾಗಿದೆ.
4004 ಮತಚಲಾವಣೆ:
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇನತ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಒದಗಿಸಲಾಗಿತ್ತು. 80 ವರ್ಷ ಮೇಲ್ಪಟ್ಟ 810 ಮತದಾರರು ಹಾಗೂ 175 ವಿಕಲಚೇತನ ಮತದಾರರು ಈಗಾಗಲೇ ಮತ ಚಲಾಯಿಸಿದ್ದಾರೆ. ಅದರಂತೆ ಅಗತ್ಯ ಸೇವೆಗಳ 12 ಇಲಾಖೆಗಳ 312 ಅಧಿಕಾರಿ ಸಿಬ್ಬಂದಿಗಳು ತಮ್ಮ ಮತ ಚಲಾಯಿಸಿದ್ದು, ಒಟ್ಟಾರೆ 4004 ಮತದಾರರು ಈಗಾಗಲೇ ತಮ್ಮ ಮತಗಳನ್ನು ಚಲಾಯಿಸಿದ್ದಾರೆ.
ಉತ್ಸವ, ಮೇಳ ರದ್ದು:
ಇಂದು ಮತದಾನ ಜರುಗುವುದರಿಂದ ಜಿಲ್ಲೆಯಾದ್ಯಂತ ನಡೆಯುವ ವಾರದ ಸಂತೆ, ಜಾತ್ರೆ, ಉತ್ಸವ ಮೇಳ ಇತ್ಯಾದಿಗಳನ್ನು ರದ್ದುಪಡಿಸಲಾಗಿದ್ದು, ಕಡ್ಡಾಯ ಮತದಾನಕ್ಕೆ ಜಿಲ್ಲಾಡಳಿತ ಸೂಚಿಸಿದೆ.
ವೇತನ ಸಹಿತ ರಜೆ:
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಿರ್ಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಮೆ.10 ರಂದು ವೇತನ ಸಹಿತ ರಜೆ ನೀಡುವಂತೆ ಕಾಮಿರ್ಕ ಇಲಾಖೆ ಸೂಚಿಸಿದೆ. ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾಮಿರ್ಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ 1963 ಕಲಂ 3(ಎ) ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ವೇತನ ಸಹಿತ ರಜೆ ನೀಡಲು ವಿಲರಾದರೆ ಸಂಬಂದಪಟ್ಟ ಸಂಸ್ಥೆಯ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಬಾಕ್ಸ್:
ವಯೋಮಿತಿ – ಮತದಾರರು
18 ರಿಂದ 19 – 17485
20 ರಿಂದ 29 – 171848
30 ರಿಂದ 39 – 221313
40 ರಿಂದ 49 – 176735
50 ರಿಂದ 59 – 132888
60 ರಿಂದ 69 – 83551
70 ರಿಂದ 79 – 41746
80 ವರ್ಷ ಮೇಲ್ಪಟ್ಟು 14901
- ಕೋಟ್:
- ಜಿಲ್ಲಾಡಳಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದೆ. ಮತದಾರರು ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವಕ್ಕೆ ಬಲ ನೀಡಬೇಕೆಂದು ತಿಳಿಸುತ್ತೇನೆ
-ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ