ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ

jkd 16 timmapur

ಜಮಖಂಡಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸೇವೆ ಮಾಡುವ ಯೋಗ್ಯ ವ್ಯಕ್ತಿಗೆ ನೀಡಿ ಮತದಾನದ ಮೌಲ್ಯ ಅರಿತುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಮುಖಂಡ ತೌಫಿಕ್ ಪಾರ್ಥನಳ್ಳಿ ಅವರ ಅಭಿಮಾನ ಬಳಗದಿಂದ ಸೋಮವಾರ ಆಯೋಜಿಸಿದ್ದ ತಮ್ಮ 62ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಒಂದೊಂದು ಮತದಲ್ಲಿ ಗೆದ್ದವರು ಸೋತವರೂ ಇದ್ದಾರೆ. ದೇಶದ ಕಟ್ಟಕಡೆಯ ವ್ಯಕ್ತಿಯ ಮತಕ್ಕೂ ದೇಶದ ಅತ್ಯುನ್ನತ ಹುದ್ದೆ ಶ್ರೀಮಂತಿಕೆಯ ವ್ಯಕ್ತಿಯ ಮತಕ್ಕೂ ಒಂದೇ ಮೌಲ್ಯವನ್ನು ಅಂಬೇಡ್ಕರರು ನಮಗೆ ನೀಡಿದ್ದಾರೆ. ಅವರು ನೀಡಿದ ಹಕ್ಕನ್ನು ಸಾರಾಯಿ, ಹಣಕ್ಕೆ ಮಾರಿಕೊಳ್ಳದೆ, ಒಳ್ಳೆ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಅಂದು ದೇವರಾಜ ಅರಸು ಸಾಮಾಜಿಕ ಸಮಾನತೆಯಡಿಯಲ್ಲಿ ಅತಿ ಸಣ್ಣ ವರ್ಗದ ವ್ಯಕ್ತಿಗಳಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸಿದ್ದು ಸದಾ ಸ್ಮರಣೀಯ ಎಂದರು.

ದೇವರಾಜ ಅರಸರಂತೆ ಇಂದಿನ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಕಟ್ಟಕಡೆಯ ವ್ಯಕ್ತಿಯೂ ಹಸಿವಿನಿಂದ ಇರಬಾರದೆಂಬ ಸದುದ್ದೇಶದಿಂದ ಅನ್ನಭಾಗ್ಯ ಸೇರಿ ಹಲವಾರು ಮಹತ್ತರ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಜನರ ಆಶೀರ್ವಾದದಿಂದ ನಾನು ಮೇಲಕ್ಕೆ ಬಂದಿದ್ದೇನೆ. ತಮ್ಮ ಪ್ರೀತಿಗೆ ಧಕ್ಕೆ ಬಾರದಂತೆ ನಾನು ಕಾರ್ಯನಿರ್ವಸುವೆ ಎಂದು ಹೇಳಿದರು.

ಯುವ ಮುಖಂಡ ತೌಫಿಕ್ ಪಾರ್ಥನಳ್ಳಿ ಮಾತನಾಡಿ, ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ ನಾಯಕರಾಗಿದ್ದಾರೆ. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡುತ್ತ ಬಂದಿದ್ದಾರೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನೀಡುವ ಪಕ್ಷದ ಮತ್ತು ಸರ್ಕಾರದ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ರಾಜ್ಯದ ಮುತ್ಸದ್ಧಿ ನಾಯಕರಾಗಿದ್ದಾರೆ. ಅವರು ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

ತಿಮ್ಮಾಪೂರ ಕುಟುಂಬಕ್ಕೂ ಪಾರ್ಥನಳ್ಳಿ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ, ತಿಮ್ಮಾಪೂರ ಅವರದ್ದು ರೈತ ಕುಲವಾಗಿದೆ ಎಂದರು.

ನಗರ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಅನಾಥಾಶ್ರದ ಮಕ್ಕಳಿಗೆ ಉಪಾಹಾರ, ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ರುದ್ರಾವದೂತ ಮಠದ ಸಹಜಾನಂದ ಶ್ರೀಗಳು, ಕೃಷ್ಣಾನಂದ ಶ್ರೀಗಳು, ಮಲ್ಲಪ್ಪ ಶ್ರೀಗಳು, ಗಜಾನಂದ ಶ್ರೀಗಳು, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮುನ ಪಾರ್ಥನಳ್ಳಿ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ದಳವಾಯಿ, ಸುಶೀಲಕುಮಾರ ಬೆಳಗಲಿ, ರಫೀಕ್ ಬಾರಿಗಡ್ಡಿ, ಅಬುಬಕರ ಕುಡಚಿ, ಮುತ್ತಣ್ಣ ಮೇತ್ರಿ, ಶ್ರೀದೇವಿ ಉಲ್ಲಾಸಕರ ಇತರರಿದ್ದರು.

ಡಾ. ಮಲ್ಲಿಕಾರ್ಜುನಯ್ಯ ಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…