More

  ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಅಸ್ತ್ರ

  ಹಿರಿಯೂರು: ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಪ್ರಬಲ ಅಸ್ತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

  ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

  ಸರ್ವ ಸ್ಪರ್ಶಿ ಆಡಳಿತದ ಸಂಕಲ್ಪ ಮಾಡಿರುವ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿ- ಶಿಕ್ಷಣ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ

  ಹೆಚ್ಚು ಅನುದಾನ ಮೀಸಲಿಟ್ಟಿದ್ದು, ಶಕ್ತಿ ಯೋಜನೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವರದಾನವಾಗಿದೆ ಎಂದರು.

  ಪದವಿ ಹಂತದ ಶಿಕ್ಷಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಿದ್ದು, ಹೆತ್ತವರ ತ್ಯಾಗ, ಪರಿಶ್ರಮ ಕಷ್ಟ ಅರಿತು, ಅವರ ಕನಸು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

  ಪದವಿ ಹಂತದಲ್ಲಿ ಮೊದಲ ರ‌್ಯಾಂಕ್ ಪಡೆವ ವಿದ್ಯಾರ್ಥಿಗಳಿಗೆ 2 ಲಕ್ಷ, ವಿದ್ಯಾರ್ಥಿನಿಯರಿಗೆ 1 ಲಕ್ಷ ರೂ, ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.

  ಯುವ ಜನತೆ ಮೊಬೈಲ್, ಸಾಮಾಜಿಕ ಜಾಲತಾಣ ಬಳಕೆ, ದುಶ್ಚಟಗಳಿಗೆ ಕಡಿವಾಣ ಹಾಕಿ, ಗುರಿಯೊಂದಿಗೆ ಶ್ರಮವಹಿಸಿದರೆ ಯಶಸ್ಸು ಸಿಗಲಿದೆ, ಆಧುನಿಕ ಪೈಪೋಟಿ ಯುಗದಲ್ಲಿ ಜ್ಞಾನಕ್ಕೆ ಮಾತ್ರ ಮನ್ನಣೆ ಎಂದರು.

  2018-2023 ರವರೆಗೆ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ನೆರವಿನ ಹಸ್ತ ಚಾಚಲಾಗುವುದು.

  ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಜತೆ ಚರ್ಚಿಸಿ, ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣಕ್ಕೆ ಬೇಕಾದ ಅಗತ್ಯ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

  ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಂ.ಶಿವಲಿಂಗಪ್ಪ ಮಾತನಾಡಿ, ಸಚಿವ ಡಿ.ಸುಧಾಕರ್ ಅವರಿಗೆ ಶಿಕ್ಷಣ ಕ್ಷೇತ್ರ-ಬಡವರ ಬಗ್ಗೆ ಅಪಾರ ಕಾಳಜಿ ಇದೆ.

  2004 ರಿಂದ ಚಳ್ಳಕೆರೆ-ಹಿರಿಯೂರಿನಲ್ಲಿ ಶಾಲಾ-ಕಾಲೇಜುಗಳು ಅಭಿವೃದ್ಧಿಗೆ ಸಚಿವರ ಕೊಡಗೆ ಸ್ಮರಣೀಯ ಎಂದರು.

  ಪ್ರಾಚಾರ್ಯ ಮಹೇಶ್ ಮಾತನಾಡಿ, ಕಾಲೇಜಿನಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ ನಡೆಯುವ ಸಂದರ್ಭ ಹೊರಗಿನ ಕಿಡಿಗೇಡಿಗಳಿಂದ ತೊಂದರೆಯಾಗುತ್ತಿದ್ದು, ನಿಯಂತ್ರಣ ಹಾಕುವಂತೆ ಪೊಲೀಸರಲ್ಲಿ ಮನವಿ ಮಾಡಿದರು.

  ಕಾಲೇಜಿನ ದತ್ತಿ ನಿಧಿಗೆ ಹಣ ನೀಡಿದ ದಾನಿಗಳು, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಚಿವರು ತಲಾ 25 ಸಾವಿರ ನೀಡಿ, ಪ್ರೋತ್ಸಾಹಿಸಿದರು.

  ಮುಖಂಡ ಮಹಮ್ಮದ್ ಫಕ್ರುದ್ಧೀನ್, ನಗರಸಭೆ ಸದಸ್ಯ ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಸುರೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ

  ಜೆ.ರಮೇಶ್, ಯುವ ಮುಖಂಡ ಅಶೋಕ್, ಪತ್ರಕರ್ತ ಆಲೂರು ಹನುಮಂತರಾಯಪ್ಪ, ಉಪನ್ಯಾಸಕ ಡಾ.ಡಿ.ಧರಣೀಂದ್ರಯ್ಯ, ತಿಪ್ಪೇಸ್ವಾಮಿ, ನಾಗರಾಜ್, ಡಾ.ಸಿದ್ದಲಿಂಗಯ್ಯ ಇತರರಿದ್ದರು.

  ಮೊಬೈಲ್ ಜಾಮರ್ ಅಗತ್ಯ: ಕಾರ್ಯಕ್ರಮದಲ್ಲಿ ಸಚಿವರು, ಗಣ್ಯರ ಉಪಸ್ಥಿತಿ ಮಧ್ಯೆಯೂ ಕೆಲ ವಿದ್ಯಾರ್ಥಿಗಳು ಕಾರ್ಯಕ್ರಮದ ವೇದಿಕೆ ಅಕ್ಕ-ಪಕ್ಕದಲ್ಲಿ ನಿಂತು ಸೆಲ್ಪಿ, ಟಿಕ್ ಟಾಕ್, ರೀಲ್ಸ್ ಮಾಡುವುದರಲ್ಲಿ ತಲ್ಲೀನರಾಗಿದ್ದರು.

  ಇದನ್ನು ಗಮನಿಸಿದ ಕೆಪಿಸಿಸಿ ಸದಸ್ಯ ಸುರೇಶ್‌ಬಾಬು, ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇದಿಸುವಂತೆ ಸಲಹೆ ನೀಡಿದರು, ಪ್ರತಿಕ್ರಿಯಿಸಿದ ಸಚಿವರು ಕಾಲೇಜು ಆವರಣದಲ್ಲಿ ಮೊಬೈಲ್ ಜಾಮರ್ ಅಳವಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

  ಹಿರಿಯೂರು ತಾಲೂಕಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಚಿವ ಸುಧಾಕರ್ ಕೊಡುಗೆ ಸ್ಮರಣೀಯ. ಸುಸಜ್ಜಿತ ಮುರಾರ್ಜಿ ವಸತಿ ಶಾಲೆ ಕ್ಯಾಂಪಸ್, ತೋಟಗಾರಿಕೆ ಕಾಲೇಜು, ಡಿಪ್ಲೋಮಾ, ಐಟಿಐ ಕಾಲೇಜ್ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಿದ್ದಾರೆ.
  ಡಾ.ಜೆ.ಸುಜಾತಾ, ತಾಪಂ ಮಾಜಿ ಅಧ್ಯಕ್ಷೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts