More

    ಜೀವಿತಾವಧಿವರೆಗೆ ಪುತಿನ್ ಅಧ್ಯಕ್ಷ? ಸಂವಿಧಾನ ತಿದ್ದುಪಡಿಗೆ ಪಸ್ತಾವನೆ

    ಮಾಸ್ಕೊ: ಜೀವಿತಾವಧಿಗೆ ಅಧ್ಯಕ್ಷರಾಗಲು ಅನುವು ಮಾಡಿಕೊಡುವ ಕಾನೂನು ರಚನೆ ಹಾಗೂ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿರುವ ಪ್ರಧಾನಿ ಡ್ಮಿಟ್ರಿ ಮೆಡ್ವೆಡೆವ್, ಸರ್ಕಾರದ ರಾಜೀನಾಮೆಯನ್ನು ಘೋಷಿಸಿದ್ದಾರೆ. ಸಂವಿಧಾನ ಸುಧಾರಣೆಯಿಂದ ದೇಶದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಅಧಿಕಾರ ಹಂಚಿಕೆಯಲ್ಲಿ ಸಮತೋಲನ ಇರಲಿದೆ. ಆದ್ದರಿಂದ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಪ್ರಸ್ತುತ ಸರ್ಕಾರ ಪದತ್ಯಾಗ ಮಾಡುತ್ತಿದೆ. ಮುಂದಿನ ಎಲ್ಲ ನಿರ್ಣಯಗಳನ್ನು ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಪ್ರಧಾನಿ ಡ್ಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ. ಪ್ರಧಾನಿ ಸಹಕಾರಕ್ಕೆ ಧನ್ಯವಾದ ಹೇಳಿದ ಪುತಿನ್, ಹೊಸ ಸರ್ಕಾರ ರಚನೆ ಆಗುವವರೆಗೆ ಅಧಿಕಾರದಲ್ಲಿ ಇರುವಂತೆ ಮೆಡ್ವೆಡೆವ್​ಗೆ ಸೂಚಿಸಿದ್ದಾರೆ. ಭದ್ರತಾ ಮಂಡಳಿ ಉಪಮುಖ್ಯಸ್ಥನ ಹುದ್ದೆ ರಚಿಸಲಾಗುತ್ತಿದ್ದು, ಇದರ ಹೊಣೆ ವಹಿಸುಕೊಳ್ಳುವಂತೆ ತಿಳಿಸಿದ್ದಾರೆ.

    ಅಧ್ಯಕ್ಷರ ಅವಧಿ ಬಗ್ಗೆ…

    ಅಮೆರಿಕದಂತೆ ರಷ್ಯಾ ಕೂಡ ಅಧ್ಯಕ್ಷೀಯ ಮಾದರಿಯ ಸಂಸತ್ ಹೊಂದಿದೆ. ಪ್ರಧಾನಿ ಹುದ್ದೆಯೂ ಇದೆ. ರಷ್ಯಾ ಅಧ್ಯಕ್ಷರು ಜನರಿಂದಲೇ ನೇರವಾಗಿ ಆಯ್ಕೆ ಆಗುತ್ತಾರೆ. ಅವರ ಅವಧಿ ಆರು ವರ್ಷ. ಸತತ ಎರಡು ಸಾರಿ ಮಾತ್ರ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಂವಿಧಾನದಲ್ಲಿ ಅವಕಾಶ ಇದೆ. ಈಗ ಪುತಿನ್ ಈ ನಿಯಮಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಯಕ್ತಿಯು ಜೀವಿತಾವಧಿವರೆಗೆ ಉಮೇದುವಾರಿಕೆ ಮಾಡಿ ಗೆಲುವು ಸಾಧಿಸಿ ಅಧ್ಯಕ್ಷರಾಗಬಹುದು ಎಂಬ ಕಾನೂನು ರಚಿಸಲು ಮುಂದಾಗಿದ್ದಾರೆ. ಪ್ರಧಾನಿಯಾಗಿ ಎರಡು ಅವಧಿ ಮತ್ತು ಅಧ್ಯಕ್ಷರಾಗಿ ಎರಡನೇ ಅವಧಿಯ ಅಂತ್ಯಕ್ಕೆ ಬಂದಿರುವ ಪುತಿನ್ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿ ಇದ್ದಾರೆ. 2024ಕ್ಕೆ ಅವರ ಅಧಿಕಾರ ಕೊನೆಗೊಳ್ಳುತ್ತದೆ. ಆದರೆ, ಐದು ವರ್ಷಕ್ಕೊಮ್ಮೆ ನಡೆಯುವ ಪಾರ್ಲಿಮೆಂಟ್ ಚುನಾವಣೆ 2021ರಲ್ಲೆ ನಡೆಯಲಿದೆ. ಹೀಗಾಗಿ ಅಧ್ಯಕ್ಷ ಪುತಿನ್ ಸಂವಿಧಾನ ತಿದ್ದುಪಡಿಗೆ ತರಾತುರಿ ಮಾಡಿದ್ದಾರೆ. ಕಮ್ಯುನಿಸ್ಟ್ ಆಡಳಿತವಿರುವ ಚೀನಾದಲ್ಲೂ ಜೀವಿತಾವಧಿಯವರಿಗೆ ಅಧ್ಯಕ್ಷರಾಗಿ ಮುಂದುವರಿಯುವಂಥ ತಿದ್ದುಪಡಿಯನ್ನು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts