ಐಪಿಎಲ್‌ನಿಂದ ವಿವೋ ಔಟ್, ಚೀನಾ ಕಂಪನಿ ಪ್ರಾಯೋಜಕತ್ವ ಕೈಬಿಟ್ಟ ಬಿಸಿಸಿಐ

ನವದೆಹಲಿ: ಲಡಾಖ್ ಗಡಿ ಗಲಾಟೆಯ ಬಳಿಕ ಚೀನಾ ದೇಶಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕಡಿವಾಣಗಳನ್ನು ಹಾಕಿದೆ. ಇದರ ಜತೆಗೆ ಚೀನಾ ಉತ್ಪನ್ನಗಳ ವಿರುದ್ಧ ಜನಾಕ್ರೋಶ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೂಡ ಚೀನಾದ ಮೊಬೈಲ್ ಕಂಪನಿ ವಿವೋ ಜತೆಗಿನ ಸಂಬಂಧ ಮುರಿದುಕೊಂಡಿದೆ. ಮುಂಬರುವ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಕಂಪನಿಯನ್ನು ಕೈಬಿಡುತ್ತಿರುವುದಾಗಿ ಬಿಸಿಸಿಐ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಕೇವಲ ಒಂದು ವಾಕ್ಯದ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, 2020ರ ಸಾಲಿನ ಐಪಿಎಲ್‌ಗೆ ವಿವೋ ಪ್ರಾಯೋಜಕತ್ವವನ್ನು ಅಮಾನತುಗೊಳಿಸುತ್ತಿರುವುದಾಗಿ ತಿಳಿಸಿದೆ. … Continue reading ಐಪಿಎಲ್‌ನಿಂದ ವಿವೋ ಔಟ್, ಚೀನಾ ಕಂಪನಿ ಪ್ರಾಯೋಜಕತ್ವ ಕೈಬಿಟ್ಟ ಬಿಸಿಸಿಐ