ವಿವಿಧೆಡೆ ಬಿಎಸ್ಪಿ ಪ್ರಚಾರ

ಹಲಗೂರು: ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮಂಡ್ಯ ಲೋಕಸಭಾ ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ ಪರ ಬಿಎಸ್ಪಿ ಮುಖಂಡ ಎಚ್.ಎನ್.ವೀರಭದ್ರಯ್ಯ ಮತ್ತು ಕಾರ್ಯಕರ್ತರು ಮತ ಯಾಚನೆ ಮಾಡಿದರು.

ನಡಕಲಪುರ, ನಂಜೇಗೌಡನದೊಡ್ಡಿ, ಡಿ.ಹಲಸಹಳ್ಳಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಎಸ್ಪಿ ಉಸ್ತುವಾರಿ ಸತೀಶ್ ಹಲಸಹಳ್ಳಿ, ತಾಲೂಕು ಉಸ್ತುವಾರಿ ಡಿ.ಎನ್.ಮುನಿರಾಜು, ಕಾರ್ಯದರ್ಶಿ ಉಮೇಶ್‌ಮೌರ್ಯ, ಮುಖಂಡರಾದ ಎಸ್.ಕೃಷ್ಣ, ಮಣಿ ಮೌರ್ಯ, ಸಿದ್ದಾರ್ಥ ಹಲಸಹಳ್ಳಿ, ಮಹೇಶ್ ಇದ್ದರು.