More

    ಯುವಕರಿಗೆ ವಿವೇಕಾನಂದರು ಸ್ಫೂರ್ತಿ

    ರಾಯಬಾಗ: ಸ್ವಾಮಿ ವಿವೇಕಾನಂದರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆ ಮಾಡಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಜೀವನ ಸಂದೇಶವನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಭವ್ಯ ಭಾರತ ಕಟ್ಟುವಲ್ಲಿ ಕೈ ಜೋಡಿಸಬೇಕು ಎಂದು ಬಸ್ತವಾಡ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುಖದೇವ ಕಾಂಬಳೆ ಹೇಳಿದ್ದಾರೆ.

    ಭಾನುವಾರ ಪಟ್ಟಣದ ಸನ್ಮತಿ ಶಾಲೆ ಆವರಣದಲ್ಲಿ ವಿವೇಕ ಯುವ ಜಾಗೃತಿ ವೇದಿಕೆಯವರು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ದೇಶದ ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ದೇಶದ ಯುವ ಶಕ್ತಿಯ ಚೈತನ್ಯ ಸ್ವರೂಪಿಯಾಗಿದ್ದರು. ಅವರ ಸಂದೇಶಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಿವೆ ಎಂದರು.

    ಚಂದ್ರಪ್ರಭ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸುರೇಖಾ ಡಿ.ಜೆ. ಅಧ್ಯಕ್ಷತೆ ವಹಿಸಿದ್ದರು. ವಿವೇಕ ಯುವ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ವಸಂತ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಯು.ಜಾ. ವೇದಿಕೆ ತಾಲೂಕಾಧ್ಯಕ್ಷ ಪರಶುರಾಮ ಪೂಜೇರಿ, ಮಹಾಂತೇಶ ಹಿರೇಮಠ, ರಾಜು ಕುರಾಡೆ, ವಸಂತ ಕೋಚೆರಿ, ಆನಂದ ಇಜಾರೆ, ಮಲ್ಲು ಮೇತ್ರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೀತಿ ಇಜಾರೆ ಸ್ವಾಗತಿಸಿದರು. ಅನಿತಾ ಪಾಟೀಲ ನಿರೂಪಿಸಿ, ವಂದಿಸಿದರು.

    ಮುಗಳಖೋಡ: ಪಟ್ಟಣದ ಮಾಧವಾನಂದ ಆಶ್ರಮದಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಸಂಗಪ್ಪ ಜಂಬಗಿ, ಆದಿತ್ಯವರ್ಮ ದೇಸಾಯಿ, ಮಹಾದೇವ ಕುಲಕರ್ಣಿ, ಸಿದ್ರಾಮ ಹೊಸಪೇಟಿ, ಭೀಮಪ್ಪ ಕೊಪ್ಪದ, ಸಿದ್ದು ಕುಲಿಗೋಡ, ಎಸ್.ಎಂ. ಬಡಿಗೇರ, ಸದಾಶಿವ ಬಡಿಗೇರ, ಕಾಂಚನಾ ಬಡಿಗೇರ, ಶ್ರೀಶೈಲ ಮಠದ, ಪರಗೌಡ ಪಾಟೀಲ, ಶ್ರೀಮಂತ ಘಟನಟ್ಟಿ, ಸಿ.ಎಸ್. ಹಿರೇಮಠ, ಸಂಪತ್ತ ಬಡಿಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts