ವಿವೇಕಾನಂದರ ಆದರ್ಶ ಪಾಲಿಸಿ

ಬಾಗಲಕೋಟೆ:ನಗರದ ಸೇರಿ ಜಿಲ್ಲೆಯ ವಿವಿಧೆಡೆ ಸ್ವಾಮಿ ವಿವೇಕಾನಂದ 156ನೇ ಜನ್ಮ ದಿನ ಆಚರಿಸಲಾಯಿತು. ಶಾಲಾ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವಿವೇಕಾನಂದರ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಲಾಯಿತು.

ಬೀಮ್್ಸ ಕಾಲೇಜಿನಲ್ಲಿ: ನಗರದ ಬಿವಿವಿ ಸಂಘದ, ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಸ್ಟಡೀಜ್ (ಬಿಮ್್ಸ) ಎಂ.ಬಿ.ಎ ಕಾಲೇಜಿನಲ್ಲಿ ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾಯಕ್ರಮ ಆಚರಿಸಲಾಯಿತು.

ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ನ್ಯಾಯಾಧೀಶ ಅನೀಲ ಕಟ್ಟಿ ಮಾತನಾಡಿ, ಇಂದಿನ ಯುವ ಪೀಳಿಗೆ ಸಾಕಷ್ಟು ಪ್ರಜ್ಞೆ ಹೊಂದಿದ್ದು, ಹೆಚ್ಚಿನ ಅರಿವು ಇದೆ. ಆದರೆ ಅವರು ಯಶಸ್ವಿ ಜೀವನ ಸಾಗಿಸಬೇಕಾದರೆ ಪರಿಣಾಮ ಹಾಗೂ ದುಷ್ಪರಿಣಾಮ ಬಗ್ಗೆ ಅರಿತುಕೊಳ್ಳಬೇಕು. ಇದರ ಸಮತೋಲನ ಮಾಡಿದಲ್ಲಿ ಸರಳವಾಗಿ ಜೀವನ ಆಚರಿಸಬಹುದು ಎಂದು ತಿಳಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಆರ್.ಎಲ್. ಹೊನೇಲೆ, ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಅಧ್ಯಕ್ಷ ಎಸ್.ಬಿ. ಕರಣಿ, ಡಾ. ಆರ್. ಜಿ. ಅಳ್ಳಗಿ, ಪ್ರಶಾಂತ ಪವಾರ ಸೇರಿ ಇತರರು ವೇದಿಕೆ ಮೇಲೆ ಇದ್ದರು. ವಿಜಯಲಕ್ಷಿ್ಮೕ ಪಾಟೀಲ ನಿರೂಪಿಸಿದರು. ಡಾ.ಅಶೋಕ ಪಿ ಉಟಗಿ ವಂದಿಸಿದರು.

ಬಸವೇಶ್ವರ ಮಹಾವಿದ್ಯಾಲಯದಲ್ಲಿ: ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಿಸಲಾಯಿತು.

ಪ್ರಾಧ್ಯಾಪಕ ಎಸ್.ಆರ್. ಮೂಗನೂರಮಠ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ, ಎಸ್.ಎಚ್ ವಟವಟಿ ಉಪಸ್ಥಿತರಿದ್ದರು. ಕುತಿಜಾ ಪ್ರಾರ್ಥಿಸಿದರು. ಶಿವಲಿಂಗಯ್ಯ ಗೋಠೆಮಠ ಸ್ವಾಗತಿಸಿದರು. ಶ್ರೀನಿವಾಸ ಪಡ್ನೀಸ್ ವಂದಿಸಿದರು.

ಅಕ್ಕ ಮಹಾದೇವಿ ಕಾಲೇಜು: ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ನ್ಯಾಯಾಧೀಶೆ ಶಾರದಾ ಕೆ. ಮಾತನಾಡಿ, ವಿವೇಕಾನಂದರು ಬಾಳಿ ಬದುಕಿದ ಕಾಲಾವಧಿ ಕಡಿಮೆ ಇದ್ದರೂ ಅವರು ಸಾಧಿಸಿ ನಮಗೆ ಕೊಟ್ಟಿರುವ ಕೊಡುಗೆ ಅಪಾರವಾಗಿದೆ. ವಿವೇಕಾನಂದರ ಜೀವನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಐ. ನಂದಿಕೋಲಮಠ, ಎಬಿವಿಪಿ ಘಟಕದ ಸಂಚಾಲಕ ಪ್ರಕಾಶ ಪೂಜಾರ ಇತರರು ಇದ್ದರು. ಎಂ.ವಿ. ಬಾಜಪ್ಪನವರ ಸ್ವಾಗತಿಸಿದರು. ಎ.ವಿ.ಪುರಾಣಿಕ ವಂದಿಸಿದರು. ಗಿರಿಜಾ ನಿರೂಪಿಸಿದರು.

Leave a Reply

Your email address will not be published. Required fields are marked *