Friday, 16th November 2018  

Vijayavani

Breaking News

ಎಷ್ಟು ಮತಗಳೋ ಅಷ್ಟು ಪಥಗಳು…

Friday, 23.02.2018, 3:03 AM       No Comments

| ಸ್ವಾಮಿ ವಿರೇಶಾನಂದ ಸರಸ್ವತೀ

ಪ್ರತಿಂುೊಂದು ಮತದ ಮೂಲತತ್ವ, ಸಿದ್ಧಾಂತಗಳಲ್ಲಿ ಶ್ರದ್ಧೆಯನ್ನು ಬಲಗೊಳಿಸಿ ಆಯಾ ಮತೀಯರು ಅವುಗಳ ಅಂತಿಮ ಸತ್ಯವನ್ನು ಅರಿಯುವುದರಿಂದ ಮಾನವಜನಾಂಗದ ಏಕತೆಯ ಕನಸು ನನಸಾಗುವುದೇ ಹೊರತು ಎಲ್ಲರನ್ನೂ ಮತ್ತೊಂದು ಮತಕ್ಕೆ ಪರಿವರ್ತಿಸುವುದರಿಂದಲ್ಲ. ಬಲ, ಭಯ, ಪ್ರಲೋಭನೆಗಳಿಂದ ಹೇರಲ್ಪಟ್ಟ ವಿಚಾರಗಳು ವ್ಯಕ್ತಿಯ ಪ್ರಗತಿಗೆ ಪೂರಕವಾಗಲಾರವು.

ಧರ್ಮ ಎಂದರೇನು? ಮನುಷ್ಯನಿಗೆ ಧರ್ಮದ ಅವಶ್ಯಕತೆ ಇದೆಂುೆುೕ? ಮತ ಎಂದರೇನು? ಅದನ್ನು ಅನುಸರಿಸುವುದರ ಪ್ರಂುೋಜನಗಳೇನು? ಈ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ಅರಿತ ಯಾರಲ್ಲಿಯೂ ಮತಧರ್ಮಗಳ ವಿಚಾರಗಳಲ್ಲಿ ಎಂದಿಗೂ ಸಂಶಯ ತುಮುಲಗಳು ಉದ್ಭವವಾಗಿಲ್ಲ.

ಧರ್ಮ ಎಂಬುದು ವಾಸ್ತವವಾಗಿ ಮನುಷ್ಯನ ವಿಕಾಸಕ್ಕೆ ರೂಪಿಸಲಾಗಿರುವ ನಿಯಮಾವಳಿಗಳು ಮಾತ್ರ. ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ ಮನುಷ್ಯನ ಹಂತದವರೆಗೆ ಜೀವವಿಕಾಸ ಪ್ರಕ್ರಿಂುೆು ಶರೀರಕ್ಕೆ ಮಾತ್ರ ಸೀಮಿತವಾಗಿತ್ತು. ಅತ್ಯಂತ ಜಟಿಲ, ಆಶ್ಚರ್ಯಕರವಾದ ನರವ್ಯೂಹ, ಮಿದುಳುಗಳನ್ನು ಮನುಷ್ಯನಲ್ಲಿ ಸೃಷ್ಟಿಸಿರುವ ಪ್ರಕೃತಿ ಇದರ ಮುಂದಿನ ಹಂತದ ವಿಕಾಸದ ಸ್ವಾತಂತ್ರ್ಯವನ್ನು ಮನುಷ್ಯನಿಗೇ ನೀಡಿದೆ. ಇಲ್ಲಿಂದ ಮುಂದಕ್ಕೆ ಅದು ಮನೋಸಾಮಾಜಿಕ ವಿಕಾಸ. ಈ ಹಂತದಲ್ಲಿ ಧರ್ಮ ನಮ್ಮ ನೆರವಿಗೆ ಬರುತ್ತದೆ. ಅಗಾಧ ಶಕ್ತಿಯಿದ್ದರೂ ಚಂಚಲತೆಯಿಂದ ಹತ್ತು ಹಲವು ವಿಚಾರಗಳಲ್ಲಿ ಹಂಚಿಹೋಗಿರುವ ಮನುಷ್ಯನ ಮಾನಸಿಕ ಶಕ್ತಿಯನ್ನು ಒಗ್ಗೂಡಿಸಿ ಆತನನ್ನು ಮತ್ತೂ ಉನ್ನತ ಹಂತಕ್ಕೆ ಕರೆದೊಯ್ಯುವ ನಿಯಮಾವಳಿಗಳೇ ‘ಧರ್ಮ’. ‘ಮತ’ ಎಂಬುದು ಒಂದೊಂದು ಗುಂಪಿನ ಜನ ತಮ್ಮ ಉದ್ಧಾರಕ್ಕೆ ರೂಪಿಸಿಕೊಂಡಿರುವ ತತ್ತ ್ವಳು ಅಷ್ಟೇ.

ಸತ್ಯ, ಅಹಿಂಸೆ, ನಿಸ್ವಾರ್ಥತೆ, ತಾಳ್ಮೆ ಮುಂತಾದ ಸಾತಿ ್ವ ಮೌಲ್ಯಗಳು ಎಲ್ಲ ಮತಗಳೂ ಪ್ರತಿಪಾದಿಸುವ ಮೂಲಧರ್ಮಸೂತ್ರಗಳು. ತಲೆತಲಾಂತರದಿಂದ ಕೆಲವೊಂದು ಧರ್ಮಸೂತ್ರಗಳನ್ನು ಅನುಸರಿಸುತ್ತ, ತಮ್ಮ ಭಾವನೆಗೆ ಅನುಸಾರವಾಗಿ ಒಂದು ರೂಪದ ಭಗವಂತನನ್ನು ಆರಾಧಿಸುತ್ತ (ಅದು ಸಾಕಾರವಾಗಿರಬಹುದು ಅಥವಾ ನಿರಾಕಾರವಾಗಿರಬಹುದು) ಬಂದಿರುವ ಒಂದು ಜನಾಂಗದ ಜನರಿಗೆ ಸಹಜವಾಗಿಂುೆುೕ ಆ ವಿಚಾರಗಳು, ಭಾವನೆಗಳು ಆನುವಂಶಿಕವಾಗಿ ಬಂದಿರುತ್ತವೆ. ತಂದೆ ತಾಯಂದಿರ ಶಾರೀರಿಕ ಲಕ್ಷಣಗಳು ಮಕ್ಕಳಲ್ಲಿ ಮೂಡಿಬರುತ್ತವೆ ಎಂಬುದು ಹೇಗೆ ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿರುವ ಸತ್ಯವೋ ಹಾಗೆಂುೆುೕ ಮಾನಸಿಕ ವಿಚಾರಗಳೂ, ಗುಣಗಳೂ ಅವರಲ್ಲಿ ಆನುವಂಶಿಕವಾಗಿ ಹರಿದುಬಂದಿರುತ್ತವೆ ಎಂಬುದೂ ಅಷ್ಟೇ ಸತ್ಯ. ವ್ಯಕ್ತಿ ಬೆಳೆದಂತೆ ಸುತ್ತಲಿನ ಪರಿಸರದ ಪ್ರಭಾವದಿಂದ ಅದು ಬದಲಾಗಬಹುದೇ ಹೊರತು ಉನ್ನತಿ/ಅವನತಿ ಮೂಲವನ್ನು ಬದಲಾಯಿಸುವುದು ಅಸಾಧ್ಯ. ತಾನು ಹುಟ್ಟಿನಿಂದ ಅನುಸರಿಸುತ್ತ ಬಂದಿರುವ ತತ್ವಗಳ ಜತೆಗೆ ತನ್ನ ಉದ್ಧಾರಕ್ಕೆ ಪೂರಕವಾಗುವಂತಹ ಮತ್ತಷ್ಟು ತತ್ವಗಳನ್ನು ಸೇರಿಸಿಕೊಂಡು ಮುಂದುವರಿಯುವುದು ಬುದ್ಧಿವಂತರ ಲಕ್ಷಣ.

ಮಾವು, ಸೇಬು ಉತ್ತಮ ಫಲಗಳಾದರೂ ಮಾವಿನ ತಳಿಗೆ ಕಸಿಮಾಡಿ ಅದನ್ನು ಮತ್ತಷ್ಟು ಉತ್ತಮ ಮಾವಿನ ತಳಿಯನ್ನಾಗಿ ಮಾಡುವುದು ಬೆಳವಣಿಗೆಯ ಲಕ್ಷಣವೇ ಹೊರತು, ಅದನ್ನು ಸೇಬಿನ ತಳಿಯನ್ನಾಗಿ ಪರಿವರ್ತಿಸುವುದು ಸಾಧ್ಯವೇ? ಆ ದಿಕ್ಕಿನಲ್ಲಿ ಪ್ರಯತ್ನಿಸಿದರೂ ಅದು ಮಾವೂ ಅಲ್ಲದ ಸೇಬೂ ಅಲ್ಲದ ಯಾವುದೋ ಮತ್ತೊಂದು ಫಲವಾಗಿ ರೂಪುಗೊಳ್ಳುವುದಿಲ್ಲವೇ? ಮಾವು, ಸೇಬನ್ನು ಆಸ್ವಾದಿಸಿದಂತೆ ಅದನ್ನು ಆಸ್ವಾದಿಸಲು ಸಾಧ್ಯವೇ? ಹಾಗೆಂುೆುೕ ಒಬ್ಬ ಹಿಂದೂ ಉತ್ತಮ ಹಿಂದೂವಾಗಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು, ಒಬ್ಬ ಮುಸ್ಲಿಂ ಉತ್ತಮ ಮುಸಲ್ಮಾನನಾಗಬೇಕು. ಇಲ್ಲಿ ಒಬ್ಬರನ್ನು ಮತ್ತೊಂದು ವಿಕಾಸದ ದಾರಿಯಲ್ಲಿ ಕರೆದೊಯ್ಯುವುದೆಂದರೆ ಅದು ಮನುಷ್ಯನ ವಿಕಾಸದ ಪ್ರಕ್ರಿಂುೆುಯನ್ನು ನಿಧಾನಗೊಳಿಸಿದಂತೆ. ಬದಲಿಗೆ ಆತನ ದಾರಿಯಲ್ಲಿನ ಮುಳ್ಳುಕಲ್ಲುಗಳನ್ನು ತೆಗೆದು ಶುಚಿಗೊಳಿಸಿ ಆತ ತನ್ನ ಮಾರ್ಗದಲ್ಲಿಂುೆುೕ ವಿಕಾಸ ಪ್ರಕ್ರಿಂುೆುಯನ್ನು ತ್ವರಿತಗೊಳಿಸಿಕೊಳ್ಳುವುದಕ್ಕೆ ನೆರವಾಗುವುದು ಉತ್ತಮ ಸಹಾಯವಲ್ಲವೇ?

ಪ್ರತಿಂುೊಂದು ಮತದ ಮೂಲತತ್ವ, ಸಿದ್ಧಾಂತಗಳಲ್ಲಿ ಶ್ರದ್ಧೆಯನ್ನು ಬಲಗೊಳಿಸಿ ಆಯಾ ಮತೀಯರು ಅವುಗಳ ಅಂತಿಮ ಸತ್ಯವನ್ನು ಅರಿಯುವಂತೆ ಮಾಡುವುದರಿಂದ ಮಾನವಜನಾಂಗದ ಏಕತೆಯ ಕನಸು ನನಸಾಗುವುದೇ ಹೊರತು ಎಲ್ಲರನ್ನೂ ಯಾವುದೋ ಒಂದು ಮತಕ್ಕೆ ಪರಿವರ್ತಿಸುವುದರಿಂದಲ್ಲ. ಎಲ್ಲ ಮತಗಳ ಅಂತಿಮ ಸತ್ಯವು ಒಂದೇ ಆಗಿರುವುದರಿಂದ ಸಹಜವಾಗಿಂುೆುೕ ಆಗ ಏಕತ್ವದ ಭಾವನೆ ನೆಲೆಸುತ್ತದೆ. ವಿವಿಧತೆಯಲ್ಲಿ ಏಕತೆ ಸಾರ್ವತ್ರಿಕತೆಯ ಪ್ರಮಾಣವೇ ಹೊರತು ಸತ್ವಹೀನ ಸಮಾನತೆಯಲ್ಲ.

ಬಲವಂತದಿಂದಲೋ, ಭಯದಿಂದಲೋ, ಪ್ರಲೋಭನೆಗಳಿಂದಲೋ ವ್ಯಕ್ತಿಯ ಮೇಲೆ ಹೇರಲ್ಪಟ್ಟ ವಿಚಾರಗಳು ಆತನ ಪ್ರಗತಿಗೆ ನಿಜಕ್ಕೂ ಪೂರಕವಾಗುವುವೇ? ತಾನು ವಿಚಾರಮಾಡಿ ಹೃತ್ಪೂರ್ವಕವಾಗಿ ಸ್ವೀಕರಿಸಿದ ತತ್ವಗಳಿಂದ ಮಾತ್ರ ಆತನ ಪ್ರಗತಿ ಸಾಧ್ಯ. ಇಲ್ಲದಿದ್ದರೆ ಅವು ಕೇವಲ ಬಾಹ್ಯಾಚರಣೆಗಳಾಗುತ್ತವೆ ಅಷ್ಟೇ.

ಮನುಷ್ಯ ತನ್ನಲ್ಲಿ ಇಲ್ಲದ, ತನ್ನಲ್ಲಿರಬೇಕೆಂದು ಬಯಸುವ ಎಲ್ಲ ಗುಣ ಆದರ್ಶಗಳಿಗೆ ಒಂದು ರೂಪವನ್ನು ನೀಡಿ ಅದನ್ನು ಆರಾಧಿಸುತ್ತಾನೆ. ‘ಯದ್ಭಾವಂ ತದ್ಭವತಿ’ ಎನ್ನುವಂತೆ ನಾವು ಏನಾಗಬೇಕೆಂದು ಬಯಸುತ್ತೇವೆಂುೋ ಆ ಎಲ್ಲ ಗುಣಗಳುಳ್ಳ ಆದರ್ಶಪೂರ್ಣ ವ್ಯಕ್ತಿತ್ವವನ್ನು ಪೂಜಿಸಿ ಧ್ಯಾನಿಸುವುದರಿಂದ ಆ ಸ್ಥಿತಿ ನಮಗೆ ಪ್ರಾಪ್ತವಾಗುತ್ತದೆ. ಹಿಂದೂಧರ್ಮದ ಸನಾತನ ಋಷಿಗಳಾಗಲೀ, ಕ್ರೈಸ್ತ ಸಂತರಾಗಲೀ, ಮುಸಲ್ಮಾನ ಪ್ರವಾದಿಗಳಾಗಲೀ ಯಾವ ಮಾರ್ಗದಲ್ಲಿ ನಡೆದು ಸಿದ್ಧಿಯನ್ನು ಪಡೆದರೋ ಅವರ ಮಾರ್ಗವನ್ನು ನಾವು ಅನುಸರಿಸುವುದರಿಂದ ಆ ಸಿದ್ಧಿಯನ್ನು ಪಡೆದು ಅವರಂತಾಗಬಹುದು. ಈ ಪರಮ ಉನ್ನತ ಸ್ಥಿತಿಯನ್ನು ಪಡೆಯುವುದೇ ಮನುಷ್ಯ ಜೀವನದ ಗುರಿ.

ಎಲ್ಲ ಮತಪಂಥಗಳ ಮೂಲಧರ್ಮಸೂತ್ರಗಳು ಕೇವಲ ಮನುಷ್ಯನ ಉದ್ಧಾರದ ದೃಷ್ಟಿಯಿಂದ, ಸಮಾಜದ ಶಾಂತಿ, ಸುಭದ್ರತೆ, ಸಮನ್ವಯತೆಗಳ ದೃಷ್ಟಿಯಿಂದ, ಜೀವನ ಸಾರ್ಥಕತೆಯ ದೃಷ್ಟಿಯಿಂದ ರೂಪಿಸಿದಂಥವುಗಳು. ಅವು ಶಾಶ್ವತ ಸತ್ಯಗಳು. ಅವುಗಳಲ್ಲಿ ಎಂದಿಗೂ ದೋಷವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ಆಚರಣೆಯ ವಿಷಯದಲ್ಲಿ ಮಾತ್ರ ನಾವು ಲೋಪದೋಷಗಳನ್ನು ಕಾಣಬಹುದು. ಮನುಷ್ಯ ತಾನು ಶಿಕ್ಷಿತನಾಗಿ, ಉತ್ತಮ ಸಂಸ್ಕಾರವಂತನಾಗಿ, ಪ್ರಬುದ್ಧ ವಿವೇಚನಾಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಆತ ತನ್ನ ಉದ್ಧಾರಕ್ಕೆ ಸೂಕ್ತವಾದ ಮಾರ್ಗವನ್ನು ಆರಿಸಿಕೊಳ್ಳುವುದಕ್ಕೆ ಸಮರ್ಥನಾಗುತ್ತಾನೆ. ಮನುಷ್ಯನಲ್ಲಿ ಈ ವಿವೇಚನಾಶಕ್ತಿಯನ್ನು ಬೆಳೆಸುವುದಕ್ಕೆ ತಕ್ಕ ಶಿಕ್ಷಣವನ್ನು ನೀಡಬೇಕು. ಸೆಕ್ಯುಲರ್ (ಜಾತ್ಯತೀತ) ಎಂಬ ಹೆಸರಿನಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಧರ್ಮವನ್ನೇ ಬೋಧಿಸದೆ ಇರುವುದು ಎಷ್ಟು ಸಮಂಜಸ? ‘ನೀನು ನಂಬಿರುವ ಭಗವಂತನನ್ನು ಶ್ರದ್ಧೆ, ಭಕ್ತಿ, ಶರಣಾಗತಿ ಭಾವದಿಂದ ಪೂಜಿಸಬೇಕು. ಎಲ್ಲರೊಡನೆ ಸಮರಸ ಭಾವದಲ್ಲಿ ಬದುಕಬೇಕು’ ಎಂಬ ಎಲ್ಲ ಮತಗಳ ಸಮಾನ ಧರ್ಮಸೂತ್ರಗಳನ್ನು ಬೋಧಿಸಬೇಕಾಗಿರುವುದು ಅತ್ಯಂತ ಆವಶ್ಯಕ.

ಮಹಾನ್ ಚಿಂತಕರೊಬ್ಬರು ಹೇಳುತ್ತಾರೆ- ‘ವಿಜ್ಞಾನದಲ್ಲಿ ಹಳೆಯ ಸಿದ್ಧಾಂತವನ್ನು ಹೊಸ ಸಿದ್ಧಾಂತದಿಂದ ಬದಲಾಯಿಸಿದಾಗ ಅದನ್ನು ವಿಜ್ಞಾನದ ಸೋಲಲ್ಲ, ಗೆಲುವು ಎಂದು ಪರಿಗಣಿಸಲಾಗುತ್ತದೆ. ಆದರೆ ಧರ್ಮದಲ್ಲಿ ಹಾಗಲ್ಲ. ಧರ್ಮಸೂತ್ರಗಳೆಲ್ಲ ಶಾಶ್ವತ ಸತ್ಯಗಳೇ ನಿಜ. ಆದರೆ ಅವುಗಳ ಅಭಿವ್ಯಕ್ತತೆ ನಿರಂತರ ಬೆಳವಣಿಗೆಯನ್ನು ಬಯಸುತ್ತದೆ’.

ನಮ್ಮ ಧಾರ್ವಿುಕ ಆಚರಣೆಗಳನ್ನು ಸುಧಾರಿಸಿಕೊಂಡು, ತ್ವರಿತಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸಿ ಎಲ್ಲ ಧರ್ಮಗಳೂ ಪ್ರತಿಪಾದಿಸುವ ಅನಂತಶಕ್ತಿ, ಆನಂದಗಳನ್ನು ನಮ್ಮದಾಗಿಸಿಕೊಳ್ಳುವುದು ಜಾಣತನ. ಉದ್ಧಾರಕ್ಕೆ ಬಳಸಿಕೊಳ್ಳಬೇಕಾದ ನಮ್ಮ ಮಾನಸಿಕ, ಬೌದ್ಧಿಕ ಶಕ್ತಿಗಳನ್ನು ಕೇವಲ ಸೆಣಸಾಟಕ್ಕೆ ಬಳಸಿಕೊಳ್ಳುವುದು ಸೂಕ್ತವೇ?

ಭಗವಾನ್ ಶ್ರೀರಾಮಕೃಷ್ಣರ ಸಂದೇಶಾಮೃತವನ್ನು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ತರ್ಜುಮೆಗೊಳಿಸುವಲ್ಲಿ ಮಹಾನ್ ಪಾತ್ರ ವಹಿಸಿದ ರಾಷ್ಟ್ರಕವಿ ಕುವೆಂಪುರವರು ವ್ಯಕ್ತಪಡಿಸಿದ ಅಭಿಪ್ರಾಯವು ಸಾರ್ವಕಾಲಿಕ ಮಾನ್ಯತೆಯನ್ನು ಪಡೆಯುತ್ತದೆ. ಶ್ರೀರಾಮಕೃಷ್ಣರ ಸಂದೇಶಾಮೃತವನ್ನು ‘ವಚನವೇದ’ ಎಂದೇ ದಾಖಲಿಸಿದ ಕುವೆಂಪು ಈ ಪವಿತ್ರಗ್ರಂಥದ ಬಗ್ಗೆ ಚೆಲ್ಲಿದ ಬೆಳಕು ವಿಶ್ವಶಾಂತಿಯನ್ನು ಯಶಸ್ವಿಯಾಗಿ ಆದರೆ ಪರಿಣಾಮಕಾರಿಯಾಗಿ ಸ್ಥಾಪಿಸುವಲ್ಲಿ ಅದ್ಭುತ ದಿಕ್ಸೂಚಿಯಾಗಬಲ್ಲದು. ಭಗವಾನ್ ಶ್ರೀರಾಮಕೃಷ್ಣರ ನೇರಶಿಷ್ಯರಾದ ಸ್ವಾಮಿ ಶಿವಾನಂದರಿಂದ ಶ್ರೀರಾಮಕೃಷ್ಣರ ನಾಮವನ್ನು ಮಂತ್ರದೀಕ್ಷೆಯಾಗಿ ಪಡೆದ ಕುವೆಂಪು ತಮ್ಮ ಬದುಕಿನ ನೂರಾರು ಸಂದರ್ಭಗಳಲ್ಲಿ ತಾವು ‘ಶ್ರೀರಾಮಕೃಷ್ಣ ಗೋತ್ರದವ’ರು ಎಂದು ಸಾರಿದ್ದು ಗಮನೀಯ ವಿಷಯ. ಶ್ರೀರಾಮಕೃಷ್ಣ ವಚನವೇದವನ್ನು ಕುರಿತು ಸ್ವತಃ ಕುವೆಂಪುರವರೇ ಹೀಗೆ ಹೇಳುತ್ತಾರೆ-

‘ಸ್ವತಂತ್ರ ಭಾರತವನ್ನು ನಮ್ಮ ರಾಜ್ಯಾಂಗ ‘ಸೆಕ್ಯುಲರ್ ರಾಜ್ಯ’ ಎಂದು ಕರೆದಿದೆ. ಸೆಕ್ಯುಲರ್ ಎಂದರೆ ಧಾರ್ವಿುಕವಲ್ಲದ ಮತದೂರವಾದ, ಲೌಕಿಕ, ಲೋಕಾಯತ ಎಂದು ಅರ್ಥವಾಗುತ್ತದೆ. ರಾಜ್ಯಾಂಗ ‘ಸೆಕ್ಯುಲರ್’ ಎಂದು ಕರೆದುದರ ಉದ್ದೇಶ ಆಡಳಿತದ ಸಮನ್ವಯ ದೃಷ್ಟಿಯನ್ನೂ, ಮತೀಯ ನಿಷ್ಪಕ್ಷಪಾತವನ್ನೂ, ಎಲ್ಲ ಮತದವರಿಗೂ ಸರ್ವಸಮಾನವಾದ ಹಕ್ಕುಬಾಧ್ಯತೆ ಹೊರೆಹೊಣೆ ಉಂಟೆಂಬುದನ್ನೂ ಸಾರುವುದೇ ವಿನಾ ಯಾವ ಆಸ್ತಿಕ ನಾಸ್ತಿಕ ಸಿದ್ಧಾಂತಗಳನ್ನೂ ಸಂಸ್ಥಾಪಿಸುವುದೂ ಅಲ್ಲ, ಉತ್ಪಾಟಿಸುವುದೂ ಅಲ್ಲ. ಅಂದರೆ ನಮ್ಮ ರಾಷ್ಟ್ರದ ಆಡಳಿತದ ಈ ಲಕ್ಷಣವನ್ನು ಸರಿಯಾದ ಮಾತಿನಲ್ಲಿ ವರ್ಣಿಸುವುದಾದರೆ ‘ಸಮನ್ವಯ ರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ. ಅಂತಹ ಸಮನ್ವಯ ರಾಷ್ಟ್ರಕ್ಕೆ ಅತ್ಯಂತ ಆವಶ್ಯಕವಾಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರೊ್ಯೕದಯಕ್ಕೆ ಬಹುಪೂರ್ವದಲ್ಲಿಯೆ ಸ್ಪಷ್ಟವಾಗಿ, ಅನುಭವಪೂರ್ವಕವಾಗಿ, ಸರ್ವಜನಸುಲಭಗ್ರಾಹ್ಯವಾಗಿ, ಪ್ರಭಾವಯುತವಾಗಿ, ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆಂಬಂತೆ ಲೋಕ ಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು. ಅವರ ‘ವಚನವೇದ’ ನಿಜವಾಗಿಯೂ ಸಮನ್ವಯ ದೃಷ್ಟಿಯನ್ನು ಸರ್ವಪ್ರಜೆಗಳಿಗೂ ಸುಲಭವಾಗಿ ಹೃದಯರ್ಸ³ಯಾಗುವಂತೆ ಬೋಧಿಸುವ ನವೀನವೇದ. ಮತಾಂತರಗೊಳಿಸುವುದು, ಪರಮತ ನಿಂದೆಯಿಂದ ಸ್ವಮತ ಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈ ಹಾಕುವುದು ಮೊದಲಾದ ಕಾಡುಭಾವನೆಗಳನ್ನೆಲ್ಲ ಬೇರುಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ‘ವಚನವೇದ’. ನಮ್ಮ ರಾಜ್ಯಾಂಗದ ರಾಜಕೀಯದ ಸುರತರು ಸುಫಲಸುಮಭರಿತವಾಗಬೇಕಾದರೆ ಜನಹೃದಯ ಮೂಲವಾಗಿರುವ ಅದರ ತಾಯಿಬೇರು ಈ ‘ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯ ರಾಜ್ಯಾಂಗಕ್ಕೆ ಪೂರಕವಾಗುವ ಧಾರ್ವಿುಕ ರಾಜ್ಯಾಂಗವಾಗುತ್ತದೆ ಶ್ರೀರಾಮಕೃಷ್ಣ ವಚನವೇದ!’

ಪ್ರತಿಂುೊಂದು ಮತದಲ್ಲಿಯೂ ಶ್ರದ್ಧೆ, ಶರಣಾಗತಿ, ಸಾಧನೆಗಳು ಪ್ರಮುಖವೇ ಹೊರತು ಅಂಧಾಭಿಮಾನ ಅಲ್ಲ. ಈ ರೀತಿಯಲ್ಲಿ ಪ್ರತಿಂುೊಬ್ಬ ವ್ಯಕ್ತಿಯೂ ಶಾಶ್ವತ ಮೌಲ್ಯಗಳನ್ನು ಅನುಸರಿಸುವುದರಿಂದ ವೈಯಕ್ತಿಕ ಪ್ರಗತಿ ಸಾಧ್ಯವಾಗುತ್ತದೆ. ವ್ಯಕ್ತಿ ವ್ಯಕ್ತಿಗಳ ಉದ್ಧಾರದಿಂದ ಸಮಾಜದ ಪ್ರಗತಿ, ತನ್ಮೂಲಕ ಇಡೀ ಮಾನವತೆಯ ಪ್ರಗತಿ ಸಾಧ್ಯವಾಗುತ್ತದೆ. ಇದನ್ನು ತಮ್ಮ ಜೀವನದಲ್ಲಿ ಸಾಧಿಸಿ ಸಿದ್ಧಿಯ ಶಿಖರವೇರಿದ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಸಾಧನೆಯ ಅನುಭವದಿಂದ ಹೇಳುತ್ತಾರೆ: ‘ಜತೋ ಮತ್, ತತೋ ಪಥ್’- ‘ಎಷ್ಟು ಮತಗಳೋ ಅಷ್ಟು ಪಥಗಳು’.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top