Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಉದ್ಧಾರವೆಂಬ ಹೆದ್ದಾರಿಯ ಪಯಣ…

Friday, 23.03.2018, 3:05 AM       No Comments

| ಸ್ವಾಮಿ ವೀರೇಶಾನಂದ ಸರಸ್ವತೀ

ಇಂದು ಇಡೀ ಜಗತ್ತು ಭಾರತೀಯ ಜೀವನವಿಧಾನಕ್ಕೆ ಇರುವ ಆಧ್ಯಾತ್ಮಿಕ ಹಿನ್ನೆಲೆ, ನೆಲೆಗಟ್ಟಿನ ವಿಚಾರಗಳನ್ನು ಶ್ರದ್ಧೆಯಿಂದ ಗಮನಿಸಿ ಆಸಕ್ತಿಯಿಂದ ಅಧ್ಯಯನಗೈಯುತ್ತಿದೆ. ಮಾನವ ನಿರ್ಮಾಣ ಧರ್ಮ, ಮಾನವ ನಿರ್ಮಾಣ ಶಿಕ್ಷಣಕ್ಕೆ ಒತ್ತುಕೊಟ್ಟ ಭಾರತೀಂುುರಿಗೆ ಉಪನಿಷತ್ತುಗಳೇ ತಳಹದಿ. ಸ್ವಾಮಿ ವಿವೇಕಾನಂದರು ಉಪನಿಷತ್ತುಗಳ ಮಹತ್ವವನ್ನು ಮನದಟ್ಟು ಮಾಡಿಕೊಟ್ಟಿದ್ದರು.

‘ಮಾನವನೇಕೆ ಧರ್ವವಲಂಬಿಯಾಗಬೇಕು?’- ಇದೊಂದು ಪ್ರಾಚೀನ ಪ್ರಶ್ನೆ ಎಂದೆನಿಸಿದರೂ ನಿತ್ಯನೂತನವಾಗಿಯೂ ಕಂಡುಬರುವಂಥದ್ದೇ ಆಗಿದೆ. ಸ್ವಾಮಿ ವಿವೇಕಾನಂದರ ಎರಡು ಮಾತುಗಳು ಇಲ್ಲಿ ಉಲ್ಲೇಖಾರ್ಹ- ‘ಧಾರ್ವಿುಕ ಮೌಲ್ಯಗಳನ್ನು ಮಾನವನ ಬದುಕಿನಿಂದ ಬೇರ್ಪಡಿಸಿದರೆ ಸಮಾಜದಲ್ಲಿ ಉಳಿಂುುುವುದು ಮನುಷ್ಯರೂಪದ ಮೃಗಗಳು!… ದೋಷವಿರುವುದು ಧರ್ಮದಲ್ಲಲ್ಲ, ಜನರಲ್ಲಿ; ದೂಷಿಸಬೇಕಾಗಿರುವುದು ಧರ್ಮವನ್ನಲ್ಲ, ಜನರನ್ನು; ಮಾನವನ ಬದುಕಿಗೆ ಧರ್ಮವೇ ಜೀವನ ಸಂಹಿತೆ, ‘ದಿಕ್ಸೂಚಿ’! ಪರೋಪಕಾರವೇ ಪುಣ್ಯ, ಪರಪೀಡೆಂುೆುೕ ಪಾಪ! ಧರ್ಮವಿರುವುದು ಸಿದ್ಧಾಂತಗಳಲ್ಲಲ್ಲ, ಆಚರಣೆೆಂುುಲ್ಲಿ. ಒಳ್ಳೆಂುುವರಾಗುವುದು ಮತ್ತು ಒಳ್ಳೆಂುುದನ್ನು ಮಾಡುವುದೇ ಧರ್ಮದ ತಿರುಳು’.

ಮೇಲಿನ ಮಾತುಗಳನ್ನು ಕೂಲಂಕಷವಾಗಿ ಪರಾಂಬರಿಸಿದಾಗ ಧರ್ಮದ ಮರ್ಮ ನಮಗೆ ಕಾಣಸಿಗುತ್ತದೆ. ಧರಿಸಲು ಂುೋಗ್ಯವೆನಿಸಿದ್ದೇ ಧರ್ಮ ಎಂದಾದ ಮೇಲೆ ಅದು ನಮ್ಮ ರಕ್ಷಕವೇ ಸರಿ. ಆದರೆ ಆಲ್ಲೊಂದು ಒಡಂಬಡಿಕೆಗೆ ಒತ್ತಾಸೆ ಇದೆ: ‘ಧರ್ಮವನ್ನು ರಕ್ಷಿಸಿದವನನ್ನು ಧರ್ಮವು ರಕ್ಷಿಸುತ್ತದೆ’. ಹಾಗಾದರೆ ಧರ್ಮವನ್ನು ರಕ್ಷಿಸಬೇಕಾದವರ್ಯಾರು? ಸಮಾಜದ ಸಕಲರಿಗೂ ಧರ್ಮದ ಅಗತ್ಯತೆ ಇದೆ ಎಂದಾದ ಮೇಲೆ ಅದರ ರಕ್ಷಕರನ್ನು ಪ್ರತ್ಯೇಕವಾಗಿ ಗುರ್ತಿಸಬೇಕಾದ ಅನಿವಾಂುರ್ುತೆ ಏನು? ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಂುುಬೇಕಾದ್ದು ಅತ್ಯಗತ್ಯ.

ಮಾನವ ನಿತ್ಯಜೀವನದಲ್ಲಿ ವಿಧಿ-ನಿಷೇಧಗಳಿಗೆ ಅರ್ಥವನ್ನು ನೀಡಿದ್ದಾನೆ. ಮಾನವನ ಮೂಲಪುರುಷ ಮನು ಮಹರ್ಷಿ ಹೇಳಿದ್ದಾನೆ: ‘ಧೃತಿ, ಕ್ಷಮಾ, ದಮ, ಅಸ್ತೇಂುು, ಶೌಚ, ಇಂದ್ರಿಂುು ನಿಗ್ರಹ, ಧೀ, ವಿದ್ಯಾ, ಸತ್ಯ ಮತ್ತು ಅಕ್ರೋಧ- ಇವು ಧರ್ಮದ ಹತ್ತು ಲಕ್ಷಣಗಳೆಂದೆನಿಸಿವೆ’. ‘ಇತರರ ಪತ್ನಿಂುುರನ್ನು ತಾಯಿಂುುಂತೆ, ಇತರರ ಸಂಪತ್ತನ್ನು ಮಣ್ಣಿನಂತೆ, ಎಲ್ಲ ಜೀವಿಗಳಲ್ಲಿಯೂ ತನ್ನನ್ನೇ ಗುರ್ತಿಸಿಕೊಳ್ಳುವುದು’- ಈ ದೃಷ್ಟಿಕೋನವನ್ನು ಹೊಂದಿದವನೇ ‘ಪಂಡಿತ’ ಎಂದಿವೆ ಸುಭಾಷಿತಗಳು. ಶಿಸ್ತುಬದ್ಧ ಜೀವನಕ್ಕೆ ಅತ್ಯುಪಂುುುಕ್ತವಾದ ಈ ಸಂದೇಶಗಳು ಬಾಳನ್ನು ಬೆಳಗುವಲ್ಲಿ ಮಹತ್ತರ ವಿಚಾರಗಳಾಗಿವೆ. ಮಾನವನು ‘ಮಾನವ ಸಂಪನ್ಮೂಲ’ವಾಗಿ ಪರಿವರ್ತನೆ ಹೊಂದುವುದು ಮಹತ್ತರವೂ ಹಾಗೂ ಸುದೀರ್ಘವೂ ಆದ ಪಂುುಣ.

ಭಗವಂತ ಕೊಟ್ಟ ವರಗಳು: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು ಭಗವಂತನು ಮಾನವನಿಗಿತ್ತ ನಾಲ್ಕು ವರಗಳೆನಿಸಿವೆ. ಇಲ್ಲಿ ಅರ್ಥ-ಕಾಮಗಳು ಬದುಕಿನ ವ್ಯಾವಹಾರಿಕ ಗುರಿಗಳೆಂದೆನಿಸಿದರೆ, ಧರ್ಮ-ಮೋಕ್ಷಗಳು ಆಧ್ಯಾತ್ಮಿಕ ಆವಶ್ಯಕತೆಗಳು ಎಂದು ಪರಿಗಣಿಸಲ್ಪಡುತ್ತದೆ. ‘ಜೀವನದಲ್ಲಿ ಗುರಿಗಿಂತಲೂ ದಾರಿ ಅತ್ಯಂತ ಮುಖ್ಯವಾದುದು’ ಎಂದಿರುವ ಸ್ವಾಮಿ ವಿವೇಕಾನಂದರು ಜೀವನವೆಂಬುದು ಕೇವಲ ಂುುಾಂತ್ರಿಕವಲ್ಲ, ಗುರಿಂುೆುಡೆಗೆ ಸಾಗಬೇಕಾದರೆ ನಮ್ಮಮಾರ್ಗವು ‘ಸನ್ಮಾರ್ಗ’ವೇ ಆಗಿರಬೇಕೆಂದು ಪ್ರತಿಪಾದಿಸುತ್ತಾರೆ. ‘ಸತ್ಯದ ಬಗೆಗಿನ ನಮ್ಮ ಪಂುುಣ ನಮ್ಮಲ್ಲಿ ನಿಜವಾದ ವಿಕಾಸಕ್ಕೆ ನಾಂದಿ ಹಾಡುತ್ತದೆಂುುಲ್ಲದೆ, ಜೀವನವು ವಿಕಾಸಕ್ಕಾಗಿಂುೆುೕ ಹೊರತು ವಿಲಾಸಕ್ಕಾಗಿ ಅಲ್ಲ’ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡುತ್ತದೆ.

ವಾಲ್ಮೀಕಿ ಋಷಿ ಹೇಳುತ್ತಾರೆ:

ಶ್ರೂಂುುತಾಂ ಧರ್ಮ ಸರ್ವಸ್ವಂ ಶೃತ್ವಾವೈವಾವಧಾಂುರ್ುತಾಂ

ಆತ್ಮನಃ ಪ್ರತಿಕೂಲಾನಿ ಪರೇಶಾಂ ನ ಸಮಾಚರೇತ್||

(ಧರ್ಮದ ಸರ್ವಸ್ವವನ್ನು ಕೇಳಿಕೇಳಿ ನಿಶ್ಚಯಿಸಿಕೊಳ್ಳಿ. ತಮಗೆ ಂುುಾವುದು ಪ್ರತಿಕೂಲವೋ ಅದನ್ನು ಇತರರ ವಿಷಂುುದಲ್ಲಿ ಆಚರಿಸಬಾರದು.)

ಗ್ರೀಕ್ ದಾರ್ಶನಿಕ ಪ್ಲೇಟೋ ಹೇಳುತ್ತಾನೆ: ‘ಒಂದು ಉತ್ತಮ ಗಣರಾಜ್ಯದ ಸ್ಥಾಪನೆಗೆ ದೇವರು ಮತ್ತು ಧರ್ಮದ ಜ್ಞಾನವು ಅತ್ಯಗತ್ಯವಾಗಿರಬೇಕು. ಜಗತ್ತಿನ ಮಾನವರೆಲ್ಲರಿಗೂ ದೇವರೇ ಪರಮ ಪಿತ. ಅವನೇ ನಿಜವಾದ ರಾಜ. ಅವನ ಹೊರತು ಇನ್ನಾರಿಗೂ ಮಾನವನ ಮೇಲೆ ಅಧಿಕಾರ ನಡೆಸುವ ಹಕ್ಕು ಎಂಬುದಿಲ್ಲ. ಜಗತ್ತಿನ ಮಾನವರೆಲ್ಲ ಒಬ್ಬನೇ ತಂದೆಂುು ಮಕ್ಕಳಾಗಿರುವುದರಿಂದ ಜನ್ಮಗತ ಮತ್ತ ಅರ್ಥಗತ ಅಸಮಾನತೆಂುುು ಒಂದು ಪಾಪ’. ಈ ಮಾತನ್ನು ಗಮನಿಸಿದಾಗ ಕೇವಲ ಜಾತಿಂುು ವಿಚಾರವಾಗಲಿ ಅಥವಾ ಹಣಕಾಸಿನ ವಿಚಾರವಾಗಲಿ ಮನುಷ್ಯ ಮನುಷ್ಯರ ನಡುವೆ ಅಸಮಾನತೆ ಅಥವಾ ತರತಮ ಭಾವನೆಗಳಿಗೆ ಆಧಾರವಾಗದು! ಭಾರತೀಂುು ಪರಂಪರೆಂುುಲ್ಲಂತೂ ವ್ಯಕ್ತಿಂುುು ಸಾಧನೆಯಿಂದ ದೊಡ್ಡವನೆನಿಸಿದನೇ ಹೊರತು ಕೇವಲ ಮಾನದಂಡದಿಂದಲ್ಲ.

ವೈಂುುಕ್ತಿಕ ಬದುಕಿನಲ್ಲಿ ಮಾನವನು ಅನುಸರಿಸಬೇಕಾದ ಧರ್ಮಜೀವನದ ಪಂಚಶೀಲಗಳನ್ನು ಕುರಿತಾಗಿ ಋಷಿವಾಣಿ ಹೀಗೆನ್ನುತ್ತದೆ:

1. ಂುುಾವ ಜೀವಿಂುುನ್ನೂ ಅನ್ಯಾಂುುವಾಗಿ ಹಿಂಸಿಸದಿರುವುದು. 2. ಂುುಾವಾಗಲೂ

ಸತ್ಯವಚನವನ್ನು ಪರಿಪಾಲಿಸುವುದು. 3. ಂುುಾವುದೇ ರೀತಿಂುು ಮೋಸದಿಂದ ಹಣ-ಆಸ್ತಿ ಸಂಪಾದಿಸದಿರುವುದು. 4. ಕಾಂುುಾ-ವಾಚಾ-ಮನಸಾ ಶುದ್ಧವಾಗಿರುವುದು. 5. ಇಂದ್ರಿಂುುಗಳನ್ನು ಹತೋಟಿಂುುಲ್ಲಿಟ್ಟುಕೊಳ್ಳುವುದಲ್ಲದೆ,

ಅವುಗಳಿಂದ ಂುುಾವುದೇ ರೀತಿಂುು ಅನ್ಯಾಂುು-ಅನೀತಿ ಕ್ರಿಂುೆುಗಳಾಗದಂತೆ ಎಚ್ಚರವಹಿಸುವುದು. ಶಕ್ತಸಮಾಜದ ನಿರ್ವಣದಲ್ಲಿ ಧಾರ್ವಿುಕ ಕ್ಷೇತ್ರದ ಪಾತ್ರ ಹಿರಿದಾದದ್ದು. ಜನ್ಮತಃ ಪ್ರತಿಂುೊಂದು ಜೀವಿಯೂ ಮೃಗ, ಸಂಸ್ಕಾರಗಳಿಂದ ಮಾನವ; ಸಾಧನೆಯಿಂದ ದೇವತೆ! ಮಾನವ ವಿಕಾಸದ ಸುದೀರ್ಘ ಪಂುುಣವನ್ನು ಸೂಚಿಸುವಂತಿದೆ ಈ ಮಾತು. ‘ಮಾನವರಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ, ಶಕ್ತಿಂುುನ್ನು ಕುರಿತು ಚಿಂತಿಸುವುದೇ ಪರಿಹಾರ’ ಎಂದಿರುವ ಸ್ವಾಮಿ ವಿವೇಕಾನಂದರು ಮಾನವ ಶಕ್ತಿವಂತನೂ ಶ್ರದ್ಧಾವಂತನೂ ಆಗಬೇಕಾದ ಜೀವನಪಾಠದೆಡೆಗೆ ಬೆಳಕು ಚೆಲ್ಲುತ್ತಾರೆ.

ಸರಳ ಜೀವನಕ್ಕೆ ಪ್ರೇರೇಪಿಸಿ: ದೇವಸ್ಥಾನಗಳು, ಮಠ-ಮಾನ್ಯಗಳು, ಧಾರ್ವಿುಕ ಕೇಂದ್ರಗಳು ಜನರಿಗೆ ಬದುಕನ್ನು ಸನ್ಮಾರ್ಗದಲ್ಲಿ ನಡೆಸಲು ಪ್ರೇರಣಾದಾಂುುಕವಾಗಿ ಶ್ರಮವಹಿಸಬೇಕು. ವಿಶೇಷವಾಗಿ ದೇವಾಲಂುು ವ್ಯವಸ್ಥೆಗೆ ಶ್ರಮಿಸುವ ಪುರೋಹಿತರ ಮತ್ತು ಧರ್ಮ ಪ್ರತಿನಿಧಿಗಳೆನಿಸಿರುವ ತ್ಯಾಗ ವೈರಾಗ್ಯ ಮೂರ್ತಿಗಳು ಸಾಮಾನ್ಯ ಜನರ ಬದುಕಿನಲ್ಲಿ ಮೌಲ್ಯಗಳ ಭರವಸೆ ಮೂಡಿಸಬೇಕು. ‘ಧರ್ಮವಿರುವುದು ಸಿದ್ಧಾಂತಗಳಲ್ಲಲ್ಲ, ಆಚರಣೆೆಂುುಲ್ಲಿ. ಒಳ್ಳೆಂುುವರಾಗುವುದು ಮತ್ತು ಒಳ್ಳೆಂುುದನ್ನು ಮಾಡುವುದೇ ಧರ್ಮ’ ಎಂಬ ಸ್ವಾಮಿ ವಿವೇಕಾನಂದರ ಮಾತು ಧರ್ಮಪ್ರತಿನಿಧಿಗಳ ಬದುಕಿನಲ್ಲಿ ಪ್ರತಿಫಲನಗೊಳ್ಳಬೇಕು.

ಭಗವದ್ಗೀತೆ ಪ್ರತಿಪಾದಿಸುತ್ತದೆ-

ಂುುದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|

ಸ ಂುುತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ|| (3-21)

(‘ಶ್ರೇಷ್ಠನಾದ ಪುರುಷನು ಂುುಾವಂುುಾವುದನ್ನು ಆಚರಿಸುತ್ತಾನೋ, ಅದನ್ನೇ ಇತರ ಜನರು ಅನುಸರಿಸುತ್ತಾರೆ. ಅವನು ಂುುಾವುದನ್ನು ‘ಪ್ರಮಾಣ’ವನ್ನಾಗಿ ಮಾಡುತ್ತಾನೆಂುೋ ಅದನ್ನೇ ಲೋಕವು ಅನುಮೋದಿಸುತ್ತದೆ’.)

ಇದೊಂದು ಅದ್ಭುತ ಸಂದೇಶ. ಅಂುುಸ್ಕಾಂತದ ಸಂಪರ್ಕಕ್ಕೆ ಬಂದ ಕಬ್ಬಿಣಕ್ಕೆ ಅಂುುಸ್ಕಾಂತೀಂುು ಗುಣ ದೊರೆಂುುುವಂತೆ ಸಜ್ಜನರ ಪ್ರಭಾವ ಜನಸಾಮಾನ್ಯರ ಮೇಲೆ ಅತ್ಯಂತ ವಿಶೇಷವಾಗಿ ಮೂಡಿಬರುತ್ತದೆ. ಮಾನವ ಜೀವನದ ಧ್ಯೇಂುು ಭಗವತ್ಸಾಕ್ಷಾತ್ಕಾರ ಎಂದಾದ ಮೇಲೆ, ಭಗವಂತನು ಬಂುುಸುವ ‘ಸರಳತೆ’ ನಮ್ಮದಾಗ

ಬೇಕಾದರೆ ಹೋರಾಟ ಜೀವನವೇ ನಮ್ಮ ಬದುಕಾಗಬೇಕು. ಸರಳತೆಂುೆುೕ ಆಧ್ಯಾತ್ಮಿಕ ಜೀವನದ ಕುರುಹು. ದಾನ, ತ್ಯಾಗ ಮತ್ತು ವೈರಾಗ್ಯವೇ ಮೊದಲಾದ ಮೌಲ್ಯಗಳು ನಮ್ಮ ಜೀವನಕ್ಕೆ ಮೆರುಗು ತರುತ್ತವೆ. ಈ ಮೆರುಗಿನ ಹಿಂದೆ ನಿಃಸ್ವಾರ್ಥತೆಯಿದೆ ಎಂಬುದನ್ನು ಮರೆಂುುಬಾರದು. ಮೌಲ್ಯಂುುುಕ್ತ ಜೀವನವು ಮಾನವನನ್ನು ಮಾಧವನೆಡೆಗೆ, ಜೀವವನ್ನು ಶಿವನೆಡೆಗೆ ಧಾವಿಸಲು ಬೇಕಾದ ಚೈತನ್ಯ ನೀಡುತ್ತದೆ. ತನ್ನ ಜೀವನವನ್ನು ಸ್ಪಷ್ಟವಾಗಿ ಅರಿತು ಸಾರ್ಥಕವಾಗಿಸಿಕೊಳ್ಳಲು ಮಾನವನ ನೆರವಿಗೆ ಮೂರು ಬಗೆಂುು ವಿಜ್ಞಾನಗಳು ಲಭ್ಯವಿವೆ. ಅವುಗಳೆಂದರೆ ಭೌತಿಕ ವಿಜ್ಞಾನ (Material Science), ಮೌಲ್ಯ ವಿಜ್ಞಾನ (Science of Values) ಮತ್ತು ಅಧ್ಯಾತ್ಮ ವಿಜ್ಞಾನ (Spiritual Science). ಬದುಕಿನ ವಾಸ್ತವ ಹಾಗೂ ಸತ್ಯತೆಗಳನ್ನು ಪ್ರತಿಪಾದಿಸುವ ಈ ವಿಚಾರಗಳ ಬಗ್ಗೆ ಆಧ್ಯಾತ್ಮಿಕ ಕ್ಷೇತ್ರದ ಪ್ರತಿನಿಧಿಗಳು ಜನಸಾಮಾನ್ಯರಿಗೆ ಬೆಳಕು ಚೆಲ್ಲಬೇಕು. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಮಾತಿನ ಆಳ ಅಗಲಗಳನ್ನು ಗಮನಿಸಿದಾಗ ರಜೋಪ್ರವೃತ್ತನಾದ ಚಕ್ರವರ್ತಿಂುು ರೀತಿ-ನೀತಿಗಳು ಹೊರಜಗತ್ತಿಗೆ ಸುಲಭಗ್ರಾಹ್ಯ ಎಂದೆನಿಸಿದರೂ ಆತನು ಧ್ಯೇಂುುನಿಷ್ಠನಾಗಲು, ಕಾಂುರ್ುಕ್ಷೇತ್ರದಲ್ಲಿ ಸ್ಪೂರ್ತಿ ಪಡೆಂುುಲು ‘ಆಧ್ಯಾತ್ಮಿಕ ಗುರು’ ಅತ್ಯಗತ್ಯ.

ವಿಶ್ವವಿಖ್ಯಾತ ಖಗೋಳ-ಭೌತವಿಜ್ಞಾನಿ ಆರ್.ಎ.ಮಿಲ್ಲಿಕನ್ ತಮ್ಮ ಆತ್ಮಕಥೆಂುುಲ್ಲಿ ಹೀಗೆ ಬರೆದಿದ್ದಾರೆ: ‘ಸಮಸ್ತ ಮಾನವ ಕಲ್ಯಾಣ ಮತ್ತು ಮಾನವ ಪ್ರಗತಿಗಳನ್ನು ಹೊತ್ತಿರುವ ಎರಡು ಬೃಹತ್ ಆಧಾರಸ್ತಂಭಗಳೆಂದರೆ, ನನಗೆ ತಿಳಿದಂತೆ ಮೊದಲನೆಂುುದು ಧರ್ಮದೃಷ್ಟಿ, ಎರಡನೆಂುುದು ವಿಜ್ಞಾನದೃಷ್ಟಿ. ಒಂದು ಮತ್ತೊಂದರ ನೆರವನ್ನು ಪಡೆಂುುದೆ ಂುುಾವುದೇ ವಿಶೇಷ ಪರಿಣಾಮ ಬೀರಲಾರದು. ವಿಜ್ಞಾನ ದೃಷ್ಟಿಂುು ಅಭಿವೃದ್ಧಿಗಾಗಿ ವಿಶ್ವವಿದ್ಯಾನಿಲಂುುಗಳಿವೆ, ಸಂಶೋಧನಾ ಸಂಸ್ಥೆಗಳಿವೆ. ಆದರೆ ಂುುಾವುದೇ ವಿನಾಯಿತಿಯಿಲ್ಲದೆ ಪ್ರತಿಂುೊಬ್ಬರಿಗೂ ಪರಮಾವಕಾಶ ಇರುವುದು ಧರ್ಮದೃಷ್ಟಿಂುುಲ್ಲಿ. ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ ಧರ್ಮದಿಂದ ಆಧ್ಯಾತ್ಮಿಕ ಪೋಷಣೆೆ ಅಗತ್ಯ ಪ್ರಮಾಣದಷ್ಟು ಬಾರದೆ, ಆಧುನಿಕ ವಿಜ್ಞಾನಂುುುಗದ ಅದ್ಭುತ ಪ್ರಗತಿಂುುು ತನ್ನ ನಡೆಂುುಲ್ಲಿ ತತ್ತರಿಸುತ್ತಿದೆ, ಕುರುಡಾಗುತ್ತಿದೆ ಎಂದೆನಿಸುತ್ತದೆ’.

ಅಲ್ಲದೇ ಧಾರ್ವಿುಕ ಕ್ಷೇತ್ರದ ಜನರಿಗೂ ಬೆಳಕು ಚೆಲ್ಲುವ ಂುೋಗ್ಯವಾದ ಮಾತನ್ನು Science in the modern world ಎಂಬ ತಮ್ಮ ಪುಸ್ತಕದಲ್ಲಿ ಗಣಿತ ಶಾಸ್ತ›ಜ್ಞ ಎ. ಎನ್. ವೈಟ್​ಹೆಡ್ ಬರೆಂುುುತ್ತಾರೆ: ‘ಂುುಾವ ದೃಷ್ಟಿಯಿಂದ ವಿಜ್ಞಾನ ಬದಲಾವಣೆೆಂುುನ್ನು ಎದುರಿಸಬಲ್ಲದೋ ಅದೇ ದೃಷ್ಟಿಯಿಂದ ತಾನೂ ಬದಲಾವಣೆೆಂುುನ್ನು ಎದುರಿಸಲು ಸಿದ್ಧವಾಗದ ಹೊರತು ಧರ್ಮವು ತನ್ನ ಹಿಂದಿನ ಶಕ್ತಿಂುುನ್ನು ಮತ್ತೆ ಪಡೆದುಕೊಳ್ಳಲಾರದು. ಅದರ ತತ್ತ್ವಗಳು ಶಾಶ್ವತ ಸ್ವರೂಪದ್ದಾಗಿರಬಹುದು, ಆದರೆ ಆ ತತ್ತ್ವಗಳನ್ನು ಹೇಳುವ ವಿಧಾನ ನಿರಂತರ ಬದಲಾವಣೆೆಂುುನ್ನು ಬಂುುಸುತ್ತದೆ’. ಧಾರ್ವಿುಕ ಚಿಂತನೆಗಳ ಪ್ರತಿಪಾದಕರು ಈ ನಿಟ್ಟಿನಲ್ಲಿ ಗಮನಿಸಬೇಕಾದ ಅಂಶವಿದೆ. ಅವರ ಸಮರ್ಥನೆಗಳು ಜನಸಾಮಾನ್ಯರಿಗೂ ಅರ್ಥವಾಗಬೇಕಿದೆ. ಇಂದು ಇಡೀ ಜಗತ್ತು ಭಾರತೀಂುು ಜೀವನವಿಧಾನಕ್ಕೆ ಇರುವ ಆಧ್ಯಾತ್ಮಿಕ ಹಿನ್ನೆಲೆ, ನೆಲೆಗಟ್ಟಿನ ವಿಚಾರಗಳನ್ನು ಶ್ರದ್ಧೆಯಿಂದ ಗಮನಿಸಿ ಆಸಕ್ತಿಯಿಂದ ಅಧ್ಯಂುುನಗೈಂುುುತ್ತಿದೆ. ಮಾನವ ನಿರ್ಮಾಣ ಧರ್ಮ, ಮಾನವ ನಿರ್ಮಾಣ ಶಿಕ್ಷಣಕ್ಕೆ ಒತ್ತುಕೊಟ್ಟ ಭಾರತೀಂುುರಿಗೆ ಉಪನಿಷತ್ತುಗಳೇ ತಳಹದಿ. ಆದ್ದರಿಂದಲೇ ಭಾರತವು ಪರಕೀಂುು ದಾಳಿಗೆ ತುತ್ತಾಗಿ ಮೃತಪ್ರಾಂುು ಸ್ಥಿತಿಗೆ ಸಮೀಪಿಸುತ್ತಿದ್ದಾಗ ಸ್ವಾಮಿ ವಿವೇಕಾನಂದರು ಹೇಳಿದ್ದು: ‘ವೇದೋಪನಿಷತ್ತುಗಳು ಪ್ರತಿಪಾದಿಸಿದ ರೀತಿಂುುಲ್ಲಿ ನಾವು ಜೀವನವನ್ನು ರೂಪಿಸಿಕೊಳ್ಳದೇ ಹೋದದ್ದರಿಂದ, ಜೀವನ ದೌರ್ಬಲ್ಯ ದೌರ್ಭಾಗ್ಯಗಳ ಗೂಡಾಯಿತು… ಮಾನವನು ತನ್ನ ಬಗ್ಗೆಂುೆುೕ ತಾನು ಅಸಡ್ಡೆ ತಾಳಿದಾಗ ಅವನ ಅವನತಿ ಶತಃಸಿದ್ಧ. ಮುಳುಗುತ್ತಿರುವವನು ಮತ್ತೊಬ್ಬನನ್ನು ಬದುಕಿಸಲು ಸಾಧ್ಯವೇ? ದುರ್ಬಲ ವ್ಯಕ್ತಿ ದುರ್ಬಲ ಸಮಾಜಕ್ಕೆ ಸಾಕ್ಷಿಂುುಾದ! ಪರಿಣಾಮ, ಅವನತಿ! ಆದರೆ ನಮಗಿದೆ ಪರಿಹಾರ! Go back to Upanishads

ಸಾರಾಂಶವಿಷ್ಟೆ, ಧಾರ್ವಿುಕ, ಆಧ್ಯಾತ್ಮಿಕ ಚಿಂತಕರು ಮನುಷ್ಯ ನಿರ್ವಣದ ಸಂಶೋಧಕರು. ಬುದ್ಧ, ಶಂಕರ, ಬಸವ, ವಿವೇಕಾನಂದರೇ ಮೊದಲಾದ ಮಹಾತ್ಮರು ಪ್ರತಿಪಾದಿಸಿದ ಚಿಂತನೆಗಳು ಸಾವಿಲ್ಲದವು. ಅವು ಮಾನವ ಜೀವನವನ್ನು ನೋವಿಲ್ಲದಂತೆ ಮಾಡಬಲ್ಲವು ಎಂದಲ್ಲ. ಬದಲಾಗಿ ನೋವುಗಳಿಗೆ ಅಂಜದೆ, ಅಳುಕದೆ ಅವುಗಳನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸ, ಛಲಗಳನ್ನು ಅವು ದೊರಕಿಸಿಕೊಡುತ್ತವೆ ಎಂಬ ಶ್ರದ್ಧೆ ನಮ್ಮೆಲ್ಲರದಾಗಲಿ.

Leave a Reply

Your email address will not be published. Required fields are marked *

Back To Top