Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಹೋರಾಟದ ಬದುಕೇ ಮಾನವ ವಿಕಾಸದ ಸೋಪಾನ

Friday, 09.03.2018, 3:05 AM       No Comments

ಮಾನವನ ಬದುಕು ಸಾಮಾನ್ಯ ಸ್ತರದಿಂದ ಮೇಲಕ್ಕೆ ಚಲಿಸಿ ವಿಶೇಷಗೊಳ್ಳಬೇಕಾದರೆ ಜೀವನದಲ್ಲಿ ಕಷ್ಟಗಳನ್ನು ಸ್ವಾಗತಿಸುವ, ಕಷ್ಟಗಳನ್ನು ಸಹಿಸಿ ಸಮರ್ಪಕವಾಗಿ ನಿರ್ವಹಿಸುವ ಮನೋಭಾವ ಬೇಕಾಗುತ್ತದೆ. ಕಷ್ಟಗಳನ್ನು ಬದುಕಿನ ಆನಂದದ ವಸ್ತುವಾಗಿ ಪರಿಗಣಿಸುವಲ್ಲಿ ನಮ್ಮ ಸ್ವಾತಂತ್ರ್ಯದ ಮಹಿಮೆ ಇದೆ.

| ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವ ಜನ್ಮವು ನಿಜಕ್ಕೂ ಒಂದು ಅಪೂರ್ವ ಅವಕಾಶವೆಂದರೆ ಅತಿಶಯೋಕ್ತಿಂುುಾಗಲಾರದು. ಮಾನವನ ದಿನನಿತ್ಯದ ಬದುಕಿನಲ್ಲಿ ಸಣ್ಣಪುಟ್ಟ ಕಷ್ಟಗಳು ಹಾಗೂ ಸವಾಲುಗಳು ಅನುಭವಕ್ಕೆ ಬಂದೇ ತೀರುತ್ತವೆ. ಪ್ರಕೃತಿ ಂುುಾವ ವ್ಯಕ್ತಿಂುುನ್ನೂ ಸುಮ್ಮನೆ ಇರಗೊಡುವುದಿಲ್ಲ! ತನ್ನ ಆಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಲು ಮನುಷ್ಯನು ಹೋರಾಟ ನಡೆಸುತ್ತಾನೆ, ಂುುಶಸ್ಸಿಗಾಗಿ ಪರಿತಪಿಸುತ್ತಾನೆ! ಆವಶ್ಯಕತೆಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಪ್ರಂುುತ್ನ ಂುುಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನಾಧರಿಸಿ ಆತನ ಜೀವನದ ಆದರ್ಶದ ವಿಚಾರವನ್ನು ತಿಳಿಂುುಬಹುದು. ಜೀವನದಲ್ಲಿ ಅತ್ಯುತ್ತಮ ಧ್ಯೇಯವನ್ನು ಹೊಂದಿರಬೇಕು; ಆ ಧ್ಯೇಯವನ್ನು ಸಾಕಾರಗೊಳಿಸಿಕೊಳ್ಳುವ ದಿಸೆಯಲ್ಲಿ ಉನ್ನತ ಮಾರ್ಗಕ್ಕೆ ಮೊರೆ ಹೋಗಬೇಕು. ನಾವು ಬಯಸಿರುವ ಉತ್ತಮ ವಿಚಾರಗಳ ಕುರಿತಾಗಿ ಪ್ರಯತ್ನ ಮಾಡಿದಂತೆ ನಮ್ಮ ಸಾಧನೆಯ ಹಾದಿಯು ‘ಹೋರಾಟದ ದಾರಿ’ ಎಂಬುದು ಅರಿವಿಗೆ ಬರುತ್ತದೆ.

ಪ್ರಕೃತಿ, ಪ್ರಾಣಿಗಳು, ಂುುಂತ್ರಗಳು ಮತ್ತು ಮನುಷ್ಯ ಸಂಕುಲದ ಬಗ್ಗೆ ವಿಶ್ಲೇಷಿಸಿದಾಗ ಹಲವಾರು ರೋಚಕ ಸಂಗತಿಗಳು ಅರಿವಿಗೆ ಬರುತ್ತವೆ. ಇವೆಲ್ಲದರ ಅಸ್ತಿತ್ವ ಹಾಗೂ ಸಾಮರ್ಥ್ಯದ ಪರಿಧಿಗಳನ್ನರಿಂುುದೆ ಮನುಷ್ಯನನ್ನು ಸ್ಪಷ್ಟವಾಗಿ ಚಿತ್ರಿಸಲಾಗದು. ಪ್ರಕೃತಿಂುು ಕಾಂುರ್ುಪ್ರಣಾಳಿಕೆಗಳು ಮಾನವನ ಸಾಮಾನ್ಯ ಮನಸ್ಸಿಗೆ ಎಟುಕುವಂಥದ್ದಲ್ಲ. ಅಪರಿಮಿತ ಶಕ್ತಿ ಇರುವ ಪ್ರಕೃತಿಂುುನ್ನು ನಿಂುುಂತ್ರಿಸುವುದು ಬಹುತೇಕ ಅಸಾಧ್ಯವೋ ಎಂದೆನಿಸುತ್ತದೆ. ಗುಡುಗು, ಸಿಡಿಲು, ಮಳೆ, ಬಿರುಗಾಳಿ, ಚಂಡಮಾರುತ, ಭೂಕಂಪವೇ ಮೊದಲಾದವು ಮಾನವನ ಬದುಕಿಗೆ ಅತ್ಯಂತ ಅನಿವಾರ್ಯ ಅಯಾಚಿತ ಅನುಭವದ ವಿಷಂುುಗಳಾದರೂ ಅವುಗಳನ್ನು ನಿಂುುಂತ್ರಿಸಲಾರದೆ ಮೂಕವಿಸ್ಮಿತನಾಗುತ್ತಾನೆ!

ಪ್ರಾಣಿಸಂಕುಲವು ಬದುಕಿಗಾಗಿ ಹಾಗೂ ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತವೆ. ‘ಖ್ಠ್ಟಜಿಡಚ್ಝ ಟ್ಛ ಠಿಜಛಿ ್ಛಠಿಠಿಛಿಠಠಿ’ ಎಂಬುದು ಕಾಡಿನ ನಿಂುುಮ! ಪ್ರಾಣಿಗಳು ಪ್ರಕೃತಿಂುು ಅಧೀನದಲ್ಲಿ ಬದುಕುತ್ತವೆ, ಅಸಹಾಂುುಕತೆ ಮತ್ತು ಭಂುುದಲ್ಲಿ ಜೀವನವನ್ನು ಸಾಗಿಸುತ್ತವೆ. ಂುುಂತ್ರಗಳು ಮತ್ತೊಂದು ಶಕ್ತಿಂುುನ್ನು ಅವಲಂಬಿಸಿಂುೆುೕ ಕಾಂುರ್ು ನಿರ್ವಹಿಸುತ್ತವೆ. ಅವುಗಳಿಗೆ ಸ್ವಂತ ಅಸ್ತಿತ್ವವೆಂಬುದಿಲ್ಲ. ಇನ್ನು ಮನುಷ್ಯ ಸಂಕುಲದ ಬಗ್ಗೆ ಇತಿಹಾಸವು ಅಗಾಧವಾದ ವಿಚಾರವನ್ನು ಹೊರಗೆಡವಿದೆ. ಮನುಷ್ಯನಿಗೆ ಅಪಾರವಾದ ಸ್ವಾತಂತ್ರ್ಯವಿದೆ, ಕಾಂುರ್ುನಿರ್ವಹಿಸುವಲ್ಲಿ ಅಮಿತವಾದ ಅವಕಾಶಗಳೂ ಇವೆ. ಮನುಷ್ಯನ ಸಾಮರ್ಥ್ಯಕ್ಕಂತೂ ಇತಿಮಿತಿಂುೆುೕ ಇಲ್ಲ!

‘ಸ್ವಾತಂತ್ರ್ಯ ಎಂಬುದು ಬೆಳವಣಿಗೆಯ ಮೊದಲ ಹೆಜ್ಜೆ: ಸ್ವಾತಂತ್ರ್ಯ ಎಂದರೆ ಜವಾಬ್ದಾರಿ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಗಳು. ಜವಾಬ್ದಾರಿಯನ್ನು ನಿರ್ಲಕ್ಷಿಸಿ ಸ್ವಾತಂತ್ರ್ಯವನ್ನು ಅನುಭವಿಸಬೇಕೆಂದು ಬಂುುಸುವ ವ್ಯಕ್ತಿಂುುು ಸಮಾಜದಲ್ಲಿ ಘಾತುಕ ಕಾಂುರ್ುಗಳ ಕೇಂದ್ರಬಿಂದು ಆಗುತ್ತಾನೆ!

ಸ್ವಾತಂತ್ರ್ಯದ ಮಹಾಮೌಲ್ಯವನ್ನು ಎತ್ತಿಹಿಡಿಂುುುವ ವಿಶ್ವಕವಿ ರವೀಂದ್ರನಾಥ ಟ್ಯಾಗೋರರ ಮಾತು ಇಲ್ಲಿ ಉಲ್ಲೇಖಾರ್ಹ. ‘ಮಾನವನ ಬದುಕಿನಲ್ಲಿ ಸ್ವಾತಂತ್ರ್ಯವೆಂಬ ಮಹಾಮೌಲ್ಯವು ಅವನನ್ನು ಸಂಕಷ್ಟಗಳನ್ನು ಕಂಡು ಹೇಡಿಯಂತೆ ಪಲಾಯನಗೈಯುವ ಪ್ರಕ್ರಿಯೆಯತ್ತ ಗಮನಹರಿಸುವುದಕ್ಕೆ ದಾರಿ ತೋರಿಸುವುದಕ್ಕಿಂತ ಧೈರ್ಯದಿಂದ ಬದುಕಿನಲ್ಲಿ ಎದುರಾದ ಸಂಕಷ್ಟಗಳನ್ನು ಸ್ವಾಗತಿಸಿ, ಸಮರ್ಪಕವಾಗಿ ನಿರ್ವಹಿಸಿ ಮತ್ತು ಯಶಸ್ವಿಯಾಗಿಸುವ ಸಕಾರಾತ್ಮಕ ದಿಕ್ಸೂಚಿಯಾಗಬೇಕು’ ಎಂಬುದು ಟ್ಯಾಗೋರರ ಅಭಿಮತ. ಮಾನವನ ಬದುಕು ಸಾಮಾನ್ಯ ಸ್ತರದಿಂದ ವಿಶೇಷಗೊಳ್ಳಬೇಕಾದರೆ ಜೀವನದಲ್ಲಿ ಕಷ್ಟಗಳನ್ನು ಸ್ವಾಗತಿಸುವ, ತನ್ನ ಒಳಿತಿಗಾಗಿ ಕಷ್ಟಗಳನ್ನು ಸಹಿಸಿ ಸಮರ್ಪಕವಾಗಿ ನಿರ್ವಹಿಸುವ ಮನೋಭಾವ ಬೇಕಾಗುತ್ತದೆ. ಕಷ್ಟಗಳನ್ನು ಬದುಕಿನ ಆನಂದದ ವಸ್ತುವಾಗಿ ಪರಿಗಣಿಸುವಲ್ಲಿ ನಮ್ಮ ಸ್ವಾತಂತ್ರ್ಯದ ಮಹಿಮೆ ಅಡಗಿದೆ.

ಸ್ವಾತಂತ್ರ್ಯದ ಮಹಾಮೌಲ್ಯವನ್ನು ಅರಿಂುುಬಲ್ಲ ಮಹಾನುಭಾವ ಮನುಷ್ಯ ಮಾತ್ರ! ‘ಜವಾಬ್ದಾರಿ’ ಎಂಬುದು ಮಾನವನ ಅಸ್ತಿತ್ವದ ಮೂಲತತ್ತ್ವ ಇದನ್ನವನು ಅರಿಂುುುವುದಕ್ಕಾಗಿಂುೆುೕ ಶಿಕ್ಷಣ. ಮಾನವನ ಸಾಮರ್ಥ್ಯದ ಸಾಧ್ಯತೆಗಳು ಅಗಾಧವಾಗಿರುವುದರಿಂದ ಅವನು ಸಾರ್ಥಕ ತರಬೇತಿಗಳಿಗೆ ಒಳಪಟ್ಟು ತನ್ನ ಮೃಗೀಂುು ಸಾಮರ್ಥ್ಯಗಳಿಗೆ ಮಾನವೀಂುು ಸ್ವರೂಪವನ್ನು ನೀಡಲೆಂದು ಶಿಕ್ಷಣವೆಂಬ ಸಂಸ್ಕಾರ ಅವನ ಪಾಲಿಗೆ ದೊರೆತಿದೆ. ಆದ್ದರಿಂದಲೇ ಮಾನವನ ಬದುಕಿನಲ್ಲಿ ಶಿಕ್ಷಣ, ತರಬೇತಿ ಮತ್ತು ಶಿಸ್ತಿನ ಪ್ರಾಮುಖ್ಯತೆ ಅತ್ಯಧಿಕ. ಶಿಸ್ತುಬದ್ಧ ನಡವಳಿಕೆಂುುು ಮಾನವನನ್ನು ಸ್ವನಿಂುುಂತ್ರಣದ ಅಡಿಂುುಲ್ಲಿ ಕಾಂುರ್ುನಿರ್ವಹಿಸುವಂತೆ ಸಹಕರಿಸಿ ಅವನನ್ನು ‘ಯೋಗಿ’ಂುುಾಗಿಸುತ್ತದೆ.

‘ಬದುಕಿನಲ್ಲಿ ಸಮೃದ್ಧ ಫಸಲನ್ನು ಕೊಯ್ಯುವ ಹಾಗೂ ಮಹಾನಂದವನ್ನು ಹೊಂದುವ ರಹಸ್ಯವೇನು ಗೊತ್ತಾ? ಅಪಾಯಕರ ರೀತಿಯಲ್ಲಿ ಜೀವಿಸುವುದು’ ಎನ್ನುತ್ತಾನೆ ಚಿಂತಕ ನೀಶೆ. ಅಂದರೆ ಬದುಕಿನಲ್ಲಿ ನಮ್ಮ ನಡವಳಿಕೆ ಪುಟಿದೇಳುವ ಚೆಂಡಿನಂತಿರಬೇಕು ಎಂಬುದೇ ವಿವೇಕದ ಸಂಗತಿ. ಆಕ್ರಮಣಕಾರಿ ಅಥವಾ ಆಘಾತಕಾರಿಂುುಾಗಿ ಬದುಕು ಎಂದರೆ ಬದುಕನ್ನು ಹೂವಿನ ಹಾಸಿಗೆ ಎಂದಷ್ಟೇ ಭ್ರಮಿಸಬೇಡ, ಕೇವಲ ಕೋಮಲತೆಂುೆುೕ ನಿನ್ನ ಸಮಗ್ರ ಸ್ವಭಾವವಾಗದಿರಲಿ ಎಂಬುದು ಇಲ್ಲಿನ ಸಂದೇಶ. ‘ಹೂವಿನಂಥ ಮನೋಧರ್ಮವು ಮಗದೊಮ್ಮೆ ವಜ್ರದಂಥ ಕಾಠಿಣ್ಯವನ್ನು ಹೊಂದಲೇಬೇಕಾದ ಸನ್ನಿವೇಶಕ್ಕೂ ಸನ್ನದ್ಧವಾಗಬೇಕು’ ಎಂಬ ತಿಳಿವಳಿಕೆಂುೆುೕ ಆಗಿದೆ. ಈ ಸಂಬಂಧವಾಗಿಂುೆುೕ ಸ್ವಾಮಿ ವಿವೇಕಾನಂದರು ಹೇಳಿದ್ದುಂಟು, ‘ಶಕ್ತಿಶಾಲಿಂುೂ ಪೌರುಷವಂತನೂ ಆದ ದುಷ್ಟನನ್ನೂ ನಾನು ಗೌರವಿಸುತ್ತೇನೆ, ಆದರೆ ಹೇಡಿಂುುನ್ನಲ್ಲ!’ ಎಂದು.

ಮಾನವಜೀವನಕ್ಕೆ ಮಹತ್ತ್ವ ತುಂಬುವ ವಿಚಾರಗಳೇ ಮೌಲ್ಯಗಳು!‘. ಜೀವನವೆಂಬುದು ಹೇಗೋ ಸಾಗಬೇಕಾದುದಲ್ಲ. ಹೇಗೆಂದರೆ ಹಾಗೆ ಸಾಗಲೂಬಾರದು. ಅಸ್ತಿತ್ವವು ಮೌಲ್ಯಗಳಿಂದೊಡಮೂಡಿದಾಗ ಅದು ಬದುಕಾಗುತ್ತದೆ. ಅಂತಹ ಬದುಕು ಮಾತ್ರವೇ ಸಾರ್ಥಕವೂ ಸಾಹಸಮಯವೂ ಹಾಗೂ ಸರ್ವಜನಮಾನ್ಯವೂ ಆಗಿ ಗೌರವಿಸಲ್ಪಡುತ್ತದೆ.

‘ಮೌಲ್ಯ’ ಎಂಬ ಶಬ್ದ ನಮ್ಮ ನೆನಪಿಗೆ ಬಂದಾಗ ಅದರ ಅರ್ಥ, ವ್ಯಾಪ್ತಿಗಳ ಬಗ್ಗೆಯೂ ಕುತೂಹಲ ಮೂಡುತ್ತದೆ. ಆಲೋಚನೆ ಆಳಕ್ಕೆ ಸಾಗುತ್ತದೆ. ಯಾವುದೇ ವಸ್ತುವನ್ನು ಹಣದ ದೃಷ್ಟಿಯಿಂದ, ‘ಇದರ ಬೆಲೆ ಇಂತಿಷ್ಟೆ’ ಎಂದು ಹೇಳಬಹುದಾದುದು ಲೋಕಾರೂಢಿ. ಅಲ್ಲದೇ ಯಾವುದೇ ವಸ್ತುವಿನ ಉಪಯುಕ್ತತೆ ಹಾಗೂ ಪ್ರಾಮುಖ್ಯತೆಗಳು ಸಹ ಅದರ ‘ಮೌಲ್ಯ’ವನ್ನು ನಿರ್ಧರಿಸಲೂಬಹುದಲ್ಲವೇ? ಆದರೆ ನಮ್ಮ ಸರಿ-ತಪ್ಪುಗಳ ವಿಶ್ಲೇಷಣೆಯೊಂದಿಗೆ ಅತಿಮುಖ್ಯವಾದ ವಿಚಾರಗಳಲ್ಲಿನ ನಮ್ಮ ನಂಬಿಕೆಗಳೇ ‘ಮೌಲ್ಯ’ಗಳು ಎಂದು ಗೌರವಿಸಲ್ಪಟ್ಟಾಗ ಅದರ ವ್ಯಾಪ್ತಿ ನಿಜಕ್ಕೂ ಅತ್ಯಪಾರ. ಆದ್ದರಿಂದ ನಮ್ಮ ಜೀವನವು ಮೌಲ್ಯಗಳೊಂದಿಗೆ ಮೇಳೈಸಿದಾಗ ಅದೊಂದು ಅಸಾಮಾನ್ಯ ಜೀವನ ಎಂದೆನಿಸುತ್ತದೆ. ಸಾಮಾನ್ಯರ ನಡುವಿನ ಸಮಾಜದಲ್ಲಿ ಸಾಮಾನ್ಯವಾಗಿ ಜನಿಸಿ, ಸಾಧನೆಯ ಮೂಲಕ ಅಸಾಮಾನ್ಯ ಎಂದೆನಿಸುವವನು ಸ್ಮರಣೀಯನಾಗುತ್ತಾನೆ, ಅನುಸರಣಯೋಗ್ಯನೆನಿಸುತ್ತಾನೆ.

ಸಮಾಜದ ನಡುವೆ ವಿಕಸನಗೊಳ್ಳುವ ಪ್ರತಿಯೊಂದು ಜೀವಿಯೂ ಮೌಲ್ಯಗಳಲ್ಲಿ ಭರವಸೆ ತಾಳುವುದು ಮೌಲ್ಯವಂತರ ಜೀವನಶೈಲಿಯನ್ನು ಕಂಡು ಆಕರ್ಷಿತವಾದಾಗ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಸಮಾಜವು ಎಂದಿಗೂ ಮೌಲ್ಯಗಳನ್ನು ಆದರಿಸಿ ಗೌರವಿಸುವ ಕ್ರಿಯಾಶೀಲತೆಯ ವ್ಯವಸ್ಥೆಯಾಗಬೇಕು. ಮೌಲ್ಯಗಳನ್ನು ನಿರ್ಲಕ್ಷಿಸುವ ಸಮಾಜ ಮೃತಪ್ರಾಯವೇ ಸರಿ. ಆದ್ದರಿಂದ ಸಮಾಜವನ್ನು ಮೌಲ್ಯಪೂರ್ಣವಾಗಿ ರೂಪಿಸುವುದೇ ಎಲ್ಲ ಕಾಲದಲ್ಲಿನ ತುರ್ತು ಅಗತ್ಯ.’

ಸ್ವಾಮಿ ವಿವೇಕಾನಂದರು ಅಭಿಪ್ರಾಂುುಪಡುವಂತೆ ಮಾನವನನ್ನು ಸಮರ್ಪಕವಾಗಿ ನಿರ್ವಿುಸುವಲ್ಲಿ ಸುಖ, ಹೊಗಳಿಕೆ, ಮಾನಗಳಿಗಿಂತ ದುಃಖ, ತೆಗಳಿಕೆ ಹಾಗೂ ಅವಮಾನಗಳೇ ಪ್ರಧಾನ ಪಾತ್ರವಹಿಸುತ್ತವೆ.

ಮಾನವನ ಜೀವನದ ಂುುಶಸ್ಸು ಅವನ ಜೀವನಾದರ್ಶಗಳ ಆಂುೆ್ಕುಂುುಲ್ಲಡಗಿದೆ. ‘ಉನ್ನತವಾಗಿ ಆಲೋಚಿಸು, ಕೆಳಮಟ್ಟದ ಆಲೋಚನೆ ಎಂಬುದು ಅಪರಾಧವೇ ಸರಿ’ ಎಂಬ ಮಹಾತ್ಮರ ಮಾತು ನಮ್ಮ ಎದೆಬಡಿತದಂತೆ ನಮ್ಮನ್ನು ಎಚ್ಚರಿಸುತ್ತಿರಬೇಕು.

‘ತನ್ನ ಪ್ರಂುುತ್ನವನ್ನು ಕೈಚೆಲ್ಲಿ ಮನುಷ್ಯನು ದುರ್ಬಲನಾಗುತ್ತಾನೆ. ಸೋಲಿಗೆ ಹೆದರಿ ಪ್ರಂುುತ್ನಹೀನನಾಗುತ್ತಾನೆ. ಆದರೆ ಸೋತ ನಂತರದ ಮರುಪ್ರಂುುತ್ನವು ಅವನಲ್ಲಿ ಹೊಸ ಭರವಸೆಂುುನ್ನು ಮೂಡಿಸುತ್ತದೆ, ಗೆಲುವಿಗೆ ಸೋಪಾನವಾಗುತ್ತದೆ’ ಎಂದಿದ್ದಾನೆ ಸಹಸ್ರಾರು ಸಂಶೋಧನೆಗಳನ್ನು ಂುುಶಸ್ವಿಂುುಾಗಿ ಮಾಡಿದ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್!

ನಿಜ, ಬದುಕಿನಲ್ಲಿ ಪ್ರಂುುತ್ನಶೀಲತೆ ಅತ್ಯಗತ್ಯ. ಮಾರ್ಗ ಮಧ್ಯದ ಅಪಜಂುುವು ನಮ್ಮ ಜೀವನದ ಪೂರ್ಣ ವೈಫಲ್ಯವಲ್ಲ; ಬದುಕಿನಲ್ಲಿ ಗುರಿಸಾಧನೆಂುೆುೕ ಪ್ರಧಾನ ಅಂಶವಲ್ಲ; ಗುರಿ ಸಾಧನೆಯಲ್ಲಿ ನಮ್ಮ ಪ್ರತಿಂುೊಂದು ಹಂತದ ಗೆಲುವು ಸಾಮಾನ್ಯ ವಿಷಂುುವಲ್ಲ!

‘ನನ್ನ ಬದುಕಿನ ಕುರಿತಾದ ಬಾಹ್ಯ ಜಗತ್ತಿನ ಪ್ರಯತ್ನಗಳೆಲ್ಲವೂ ಬಹುತೇಕ ವೈಫಲ್ಯದತ್ತ ಸಾಗಿ ಸೋಲು ನನ್ನನ್ನು ಅಪ್ಪಿಯೇಬಿಟ್ಟಿತು ಎನ್ನುವಷ್ಟರಲ್ಲಿ ಆಂತರ್ಯದ ಮೂಲೆಯಲ್ಲಿ ನೀನು ಗೆಲ್ಲಬಲ್ಲೆ, ಹೋರಾಡು ಎಂಬ ಸ್ಪೂರ್ತಿಯ ಕರೆ ನನ್ನನ್ನು ಪುಟಿದೇಳುವಂತೆ ಮಾಡಿತು’ ಎಂದಿದ್ದಾನೆ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಲ್ಬರ್ಟ್ ಕಾಮೂ. ಜೀವನವನ್ನು ನಿಜವಾದ ಹೋರಾಟವೆಂದು ಪರಿಗಣಿಸಿ ಅದನ್ನು ಎದುರಿಸಲು ಪ್ರಾಮಾಣಿಕವಾಗಿ ಸನ್ನದ್ಧರಾದಾಗ ನಾವಿಟ್ಟ ಹೆಜ್ಜೆಗಳು ದಿಟ್ಟ ಹೆಜ್ಜೆಗಳಾಗುತ್ತವೆ, ನಮ್ಮ ನಡೆನುಡಿಗಳು ವೀಂುರ್ುವತ್ತಾಗುತ್ತವೆ. ಅಂತಹ ಜೀವನ ಮಾತ್ರವೇ ಹೋರಾಟಕ್ಕೆ ಬರೆದ ಭಾಷ್ಯವಾಗಬಲ್ಲದು. ತಾನು ಬೆಳಗಿದ ಹಣತೆ ಇತರ ಹಣತೆಗಳನ್ನು ಬೆಳಗಿಸುವಲ್ಲಿ ಸಮರ್ಥವಾಗದಿರದು.

ನಮ್ಮ ಆಸಕ್ತಿಯ ಕ್ಷೇತ್ರವನ್ನು ನಿರ್ಧರಿಸಿಕೊಂಡು ಈ ವಿಶಾಲಕ್ಷೇತ್ರದಲ್ಲಿ ನಮ್ಮ ಕನಸಿನ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ನಿಂದನೆ, ಸೋಲು, ನಿರಾಶೆಗಳು ಎಲ್ಲ ಕಡೆಯೂ ಇದ್ದೇ ಇರುವುದಂತೂ ದಿಟ. ನಾವು ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯಲ್ಲಿ ‘ಯೋಜನೆ’ಯನ್ನು ಮಾರ್ಗಮಧ್ಯದಲ್ಲೇ ಕೈಬಿಡುವ ಯೋಚನೆಯನ್ನಂತೂ ಎಂದಿಗೂ ಮಾಡಬಾರದು. ನಮ್ಮ ಹೋರಾಟದ ಪಥದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ಬರುವುದು ಸಹಜ. ಆದರೆ ಅವುಗಳನ್ನು ಸಕಾರಾತ್ಮಕ ಚಿಂತನೆಗಳಿಂದ ನಿರ್ವಹಿಸುವುದೇ ವಿವೇಕದ ನಡೆ.

ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಈ ಮಾತನ್ನು ನಮ್ಮ ನಮ್ಮ ಬದುಕಿಗೆ ಹತ್ತಿರವಾಗಿಸಿಕೊಳ್ಳಬೇಕಿದೆ-ಜನ ಹೇಳುತ್ತಾರೆ: ‘ಅವರನ್ನು ನಂಬು, ಇವರನ್ನು ನಂಬು ಎಂದು, ಆದರೆ ನಾನು ಹೇಳುತ್ತೇನೆ: ‘ಮೊದಲು ನಿನ್ನನ್ನು ನೀನು ನಂಬು! ಹಳೆಯ ವೇದಾಂತದ ದೃಷ್ಟಿಯಿಂದ ದೇವರನ್ನು ನಂಬಿದವ ಆಸ್ತಿಕ, ನಂಬದವ ನಾಸ್ತಿಕ. ಆದರೆ ನಾನು ಹೇಳುತ್ತೇನೆ, ‘ಯಾರು ದೇವರನ್ನು ನಂಬಿಯೂ ತನ್ನನ್ನು ತಾನು ನಂಬಲಾರನೋ ಅವನೇ ನಾಸ್ತಿಕ! ಎಂದು.’

ಮುಂದುವರಿದು ವಿವೇಕಾನಂದರು ಹೇಳುತ್ತಾರೆ: ‘ನಮ್ಮ ಜೀವನಸತ್ತ್ವವು ಅಧ್ಯಾತ್ಮವೇ ಆಗಿದೆ. ಈ ಸತ್ತ್ವವು ಸ್ಪಷ್ಟವಾಗಿ ಚಲನಶೀಲವಾದಾಗ ಅದು ಶುದ್ಧವೂ ಸಾಮರ್ಥ್ಯಪೂರ್ಣವೂ ಹಾಗೂ ಕ್ರಿಯಾಶೀಲವೂ ಆಗುತ್ತದೆ. ಆಗ ಮಾತ್ರವೇ ರಾಜಕೀಯ, ಸಾಮಾಜಿಕ ಅಥವಾ ದೇಶದ ದಾರಿದ್ರ್ಯ ನಿಮೂಲನೆಗೊಳ್ಳಲು ಸಾಧ್ಯವಾಗುತ್ತದೆ.’

ಸ್ವಾಮಿ ವಿವೇಕಾನಂದರ ಅಭಿಪ್ರಾಯಗಳಲ್ಲಿ ವ್ಯಕ್ತಿ, ಕುಟುಂಬ, ಸಮಾಜ ಅಷ್ಟೇ ಏಕೆ ಇಡೀ ಮನುಕುಲದ ಅಭ್ಯುದಯಕ್ಕೆ ಮಾರ್ಗೇಪಾಯವಿದೆ. ಮಾನವನು ಈ ಧೀರೋದಾತ್ತ ಚಿಂತನೆಗಳನ್ನು ವಿಶ್ವಾಸದಿಂದ, ಧೈರ್ಯದಿಂದ ಸ್ವಾಗತಿಸಿ ಸ್ವೀಕರಿಸಬೇಕು, ಕಾರ್ಯಪ್ರವೃತ್ತನಾಗಬೇಕು. ಹೋರಾಟದ ಬದುಕೇ ಮಾನವ ವಿಕಾಸದ ಕುರುಹು, ಅಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Leave a Reply

Your email address will not be published. Required fields are marked *

Back To Top