ಬೆಂಗಳೂರು ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ನೂತನ ಅಧ್ಯಕ್ಷ; 1,900ಕ್ಕೂ ಅಧಿಕ ಮತಗಳ ಅಂತರದ ಜಯ

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜತೆಗೆ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಜಿ. ರವಿ ಹಾಗೂ ಖಜಾಂಚಿಯಾಗಿ ಎಂ.ಟಿ. ಹರೀಶ್ ಆಯ್ಕೆಯಾಗಿದ್ದಾರೆ. 2021ರಿಂದ 2024ರ ವರೆಗಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಸಂಘದ 16,568 ನೋದಾಯಿತ ಸದಸ್ಯರಲ್ಲಿ ಅಂದಾಜು ಹನ್ನೊಂದೂವರೆ ಸಾವಿರ ಸದಸ್ಯರು ಮತ ಚಲಾಯಿಸಿದ್ದರು. ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. … Continue reading ಬೆಂಗಳೂರು ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ನೂತನ ಅಧ್ಯಕ್ಷ; 1,900ಕ್ಕೂ ಅಧಿಕ ಮತಗಳ ಅಂತರದ ಜಯ