16 C
Bangalore
Wednesday, December 11, 2019

ತೆರೆ ಮೇಲೂ ಸ್ಪೂರ್ತಿ ಮೋದಿ: ವಿಜಯವಾಣಿ ಜತೆ ವಿವೇಕ್ ಎಕ್ಸ್​ಕ್ಲೂಸಿವ್ ಮಾತು

Latest News

ಜೆಡಿಎಸ್​​ ಶಾಸಕರಲ್ಲಿ ಅಭದ್ರತೆ, ವರಿಷ್ಠರ ಆತಂಕ

ಬೆಂಗಳೂರು: ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಜೆಡಿಎಸ್​ನಲ್ಲಿ ಈಗ ನೀರವ ಮೌನ ಆವರಿಸಿದೆ. ಆರೋಗ್ಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ...

ವಾಂಖೆಡೆಯಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವೆ ಇಂದು ನಿರ್ಣಾಯಕ ಟಿ 20 ಪಂದ್ಯ

ಮುಂಬೈ: 2011ರ ಏಪ್ರಿಲ್​ನಲ್ಲಿ ಭಾರತದ ಸ್ಮರಣೀಯ ಗೆಲುವಿಗೆ ಕಾರಣವಾಗಿದ್ದ ವಾಂಖೆಡೆ ಮೈದಾನದಲ್ಲಿಯೇ ಭಾರತ 2016ರ ಮಾರ್ಚ್ 31ರಂದು ಟಿ20 ಮಾದರಿಯ ಕೆಟ್ಟ ಸೋಲು...

ಹಿಂದಿ ಯೂ ಟರ್ನ್​ಗೆ ತಾಪ್ಸೀ ನಾಯಕಿ?

ಬೆಂಗಳೂರು: ಕನ್ನಡದ ಸಿನಿಮಾಗಳು ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿವೆ. ಈಗ ಆ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುವ ಸೂಚನೆ ಸಿಕ್ಕಿದೆ. ಅದೇ ‘ಯೂ ಟರ್ನ್’. 2016ರಲ್ಲಿ...

ಬಾಲಿವುಡ್ ಆಕ್ಷನ್ ಸಿನಿಮಾದಲ್ಲಿ ಡಬ್ಲ್ಯುಡಬ್ಲ್ಯುಇ ಖ್ಯಾತಿಯ ಡ್ವೇನ್ ದಿ ರಾಕ್ ಜಾನ್ಸನ್ 

ಡಬ್ಲೂಡಬ್ಲೂಇ ‘ದಿ ರಾಕ್’ ಖ್ಯಾತಿಯ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಸದ್ಯ ‘ಜುಮಾಂಜಿ; ದಿ ನೆಕ್ಟ್ಸ್ ಲೆವೆಲ್’ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ಎಲ್ಲೆಡೆ...

ಅಮೃತ ಬಿಂದು

ಶಾಸ್ತ್ರಸಂಚೋದಿತೇ ಕಾಲೇ ನಿಃಶಬ್ದೇ ಚ ಮನೋರಮೇ | ಶಿವಲಿಂಗಾರಾಧನಂ ಯತ್ ಕಾಲಶುದ್ಧಿರಿಹೋದತೇ || ಧರ್ಮಶಾಸ್ತ್ರಗಳಲ್ಲಿ ಹೇಳಲಾದ ಪ್ರಶಾಂತವೂ ನಿಃಶಬ್ದವೂ ಮನೋರಮವೂ ಆದ ಸಮಯದಲ್ಲಿ ನಿಯತವಾಗಿ ತಪ್ಪದೆ ಶಿವಲಿಂಗಪೂಜೆ...

ನರೇಂದ್ರ ಮೋದಿ ಜೀವನಾಧಾರಿತ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಈಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣಕ್ಕೆ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಇಂದು (ಮೇ 24) ಈ ಚಿತ್ರ ರಿಲೀಸ್ ಆಗುತ್ತಿದೆ. ಮೋದಿ ಪಾತ್ರದಲ್ಲಿ ವಿವೇಕ್ ಓಬೆರಾಯ್ ನಟಿಸಿದ್ದು, ‘ಮೇರಿಕೋಮ್ ಖ್ಯಾತಿಯ ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹಲವಾರು ಆಸಕ್ತಿಕರ ವಿಚಾರಗಳನ್ನು ತನ್ನೊಳಗಿಟ್ಟುಕೊಂಡಿರುವ ಈ ಸಿನಿಮಾ ಬಗ್ಗೆ ವಿವೇಕ್ ವಿಜಯವಾಣಿ ಜತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

# ಈ ಸಿನಿಮಾ ಆಫರ್ ಬಂದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನಾಗಿತ್ತು?

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದಲೇ ಅವರ ಪಾತ್ರದಲ್ಲಿ ನಟಿಸುವಂತೆ ಆಫರ್ ಬರುತ್ತಿದ್ದವು. ಆದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಿರ್ವಪಕ ಸಂದೀಪ್ ಸಿಂಗ್ ಬಂದು ಕೇಳಿದಾಗ ಗಂಭೀರವಾಗಿ ತೆಗೆದುಕೊಂಡೆ. ಯಾಕೆಂದರೆ, ಅತಿ ಕಿರಿಯ ವಯಸ್ಸಿನಲ್ಲಿ ಒಳ್ಳೊಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು ಸಂದೀಪ್. ರಾಮ್ ಲೀಲಾ, ರೌಡಿ ರಾಥೋಡ್, ಸರಬ್ಜಿತ್, ಮೇರಿಕೊಮ್ ಮುಂತಾದ ಜನಪ್ರಿಯ ಚಿತ್ರಗಳನ್ನು ಅವರು ನಿರ್ವಿುಸಿದ್ದಾರೆ. ಹಾಗಾಗಿ ಅವರಿಗೆ ಮೋದಿ ಬಯೋಪಿಕ್ ಬಗ್ಗೆ ಸೀರಿಯಸ್​ನೆಸ್ ಇದೆ ಎಂಬುದು ಗೊತ್ತಾಯಿತು. ಕೇವಲ 13 ಸೆಕೆಂಡ್ ಯೋಚನೆ ಮಾಡಿದೆ ಅಷ್ಟೇ! ತಕ್ಷಣ ಒಪ್ಪಿಕೊಂಡೆ. ಸಂದೀಪ್​ಗೆ ಅಚ್ಚರಿ ಆಯಿತು.

# ಸಾಕಷ್ಟು ಪ್ರಧಾನಮಂತ್ರಿಗಳನ್ನು ಈ ದೇಶ ಕಂಡಿದೆ. ಅವರೆಲ್ಲರ ನಡುವೆ ನಿರ್ದಿಷ್ಟವಾಗಿ ಮೋದಿಯವರ ಬಯೋಪಿಕ್​ನ ಅಗತ್ಯವೇನು?

ಮೋದಿ ಬಗ್ಗೆ ರಿಸರ್ಚ್ ನಡೆಸಿದ್ದು ನಿಜಕ್ಕೂ ಇಂಟರೆಸ್ಟಿಂಗ್ ಆಗಿತ್ತು. ಪ್ರಧಾನಮಂತ್ರಿಯಾಗಿ ಅವರು ನಮಗೆ ಚೆನ್ನಾಗಿ ಗೊತ್ತು. ಆದರೆ ಗೊತ್ತಿರದ ವಿಚಾರಗಳೂ ಸಾಕಷ್ಟಿವೆ. ಚಾಯ್ವಾಲಾ ಆಗಿ ವೃತ್ತಿ ಆರಂಭಿಸಿದ ಅವರು ಸನ್ಯಾಸಿ ಆಗಲು ಹಿಮಾಲಯಕ್ಕೆ ಹೊರಟಿದ್ದೇಕೆ? ಸನ್ಯಾಸಿ ಆಗಲೇಬೇಕು ಎಂದುಕೊಂಡವರು ಮತ್ತೆ ವಾಪಸು ಬಂದಿದ್ದೇಕೆ? ನಂತರ ಆರ್​ಎಸ್​ಎಸ್ ಸೇರಿಕೊಂಡಿದ್ದು ಯಾಕೆ? ಅವರು ರಾಜಕೀಯಕ್ಕೆ ಕಾಲಿಡಲು ಕಾರಣವೇನು? ಮುಖ್ಯಮಂತ್ರಿಯಾದ ಬಳಿಕ ಅವರ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳಾದವು? ಪ್ರಧಾನಮಂತ್ರಿ ಪಟ್ಟಕ್ಕೇರಿದ್ದು ಹೇಗೆ? ಇದನ್ನೆಲ್ಲ ಅವರು ಬೆನ್ನತ್ತಿ ಹೋದರಾ ಅಥವಾ ಅವರನ್ನೇ ಹುಡುಕಿಕೊಂಡು ಇವೆಲ್ಲ ಬಂದಿವೆಯೇ? ಈ ಎಲ್ಲ ಅಂಶಗಳಿಂದಾಗಿ ಅವರ ಬದುಕು ಆಸಕ್ತಿಕರವಾಗಿದೆ. ರಾಜಕೀಯ ಹಿನ್ನೆಲೆ ಇಲ್ಲದೆ, ಹಣಬಲವಿಲ್ಲದೆ, ದೊಡ್ಡ ಕುಟುಂಬದ ಬ್ರಾ್ಯಂಡ್​ನೇಮ್ ಇಲ್ಲದೆಯೂ ಪ್ರಧಾನಮಂತ್ರಿ ಸ್ಥಾನವನ್ನು ಅವರು ಅಲಂಕರಿಸಿದ್ದೇ ದೊಡ್ಡ ಸಾಧನೆ. ಅದನ್ನು ಜನರು ತಿಳಿದುಕೊಳ್ಳುವ ಅಗತ್ಯವಿದೆ.

# ರಾಜಕೀಯ ವಿಚಾರಗಳನ್ನು ಹೊರತುಪಡಿಸಿ, ಮೋದಿಯವರಲ್ಲಿ ನಿಮಗೆ ಇಷ್ಟವಾಗುವ ಅಂಶಗಳೇನು?

ಅವರೊಬ್ಬ ಭಯವಿರದ ವ್ಯಕ್ತಿ. ಆ ಗುಣವೇ ನನಗೆ ಹೆಚ್ಚು ಇಷ್ಟ. ನಮ್ಮ ಜೀವನದಲ್ಲಿ ನಾವು ಹೆಚ್ಚಿನ ಸಂದರ್ಭ ಭಯಪಡುತ್ತಲೇ ಕಾಲ ಕಳೆಯುತ್ತೇವೆ. ಒಂದುವೇಳೆ ಸೋತರೆ ಏನಾಗುತ್ತೋ ಎಂಬ ಭಯ ನಮ್ಮನ್ನು ಆವರಿಸಿರುತ್ತದೆ. ಆದರೆ ಮೋದಿ ಅದಕ್ಕೆ ವಿರುದ್ಧ. ತಮ್ಮ ಗಡಿಯೊಳಗೆ ಬಂದರೆ ನ್ಯೂಕ್ಲಿಯರ್ ಬಾಂಬ್ ಹಾಕುತ್ತೇವೆ ಎಂದು ಪಾಕಿಸ್ತಾನದವರು ಮೊದಲಿನಿಂದಲೂ ಹೆದರಿಸುತ್ತಲೇ ಇದ್ದರು. ಆದರೆ ಮೋದಿ ಅದಕ್ಕೆಲ್ಲ ಕಿವಿಗೊಡದೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿಯೇ ಬಿಟ್ಟರು. ಅವರೊಳಗಿದ್ದ ಅಪಾರ ಪ್ರಮಾಣದ ಧೈರ್ಯವೇ ಇಷ್ಟಕ್ಕೆಲ್ಲ ಕಾರಣ. ಆ ಗುಣ ನನಗೆ ತುಂಬ ಇಷ್ಟ.

# ಮೋದಿಯವರಲ್ಲಿ ನಿಮಗೆ ಇಷ್ಟವಾಗದಿರುವ ಗುಣ ಏನಾದರೂ ಇದೆಯೇ?

ವೈಯಕ್ತಿಕ ಬದುಕಿನ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿಲ್ಲ. ಅದು ನನಗೆ ಇಷ್ಟವಾಗುವುದಿಲ್ಲ. ದಿನದ 24 ಗಂಟೆಯೂ ಕೆಲಸ ಮಾಡುತ್ತಲೇ ಇರುತ್ತಾರೆ. ದೇಶದ ಹಿತದೃಷ್ಟಿಯಿಂದ ಅದು ಒಳ್ಳೆಯದು. ಆದರೆ ಒಬ್ಬ ವ್ಯಕ್ತಿಯಾಗಿ ಅವರಿಗೂ ಒಂದಷ್ಟು ಸಮಯ ಬೇಕಲ್ಲವೇ? ಸಂಗೀತ ಕೇಳಬಹುದು, ಕುಟುಂಬದವರ ಜತೆ ಕಾಲ ಕಳೆಯಬಹುದು, ಒಂದು ಸಿನಿಮಾ ನೋಡಬಹುದು. ಅದರ ಬಗ್ಗೆ ಮೋದಿ ಯೋಚಿಸುವುದೇ ಇಲ್ಲ.

# ವಿವೇಕ್ ಒಬೆರಾಯ್ ರಾಜಕೀಯ ಪ್ರವೇಶಿಸುವ ಸಲುವಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಜನರು ಏನು ಬೇಕಾದರೂ ಮಾತನಾಡುತ್ತಾರೆ. ಪ್ರಚಾರಕ್ಕಾಗಿಯೇ ಈ ಸಿನಿಮಾ ಮಾಡಲಾಗಿದೆ ಎನ್ನುತ್ತಾರೆ. ನಾನು ರಾಜಕೀಯಕ್ಕೆ ಬರುವುದಾಗಿದ್ದರೆ ಯಾವಾಗಲೋ ಬರಬಹುದಿತ್ತು. 2004ರ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಲು ಹಲವು ರಾಜಕೀಯ ಪಕ್ಷಗಳು ಮುಂದೆಬಂದಿದ್ದವು. ಈವರೆಗೆ ಒಂದು ಉಪ ಚುನಾವಣೆಯನ್ನೂ ಸೇರಿ ಒಂದಲ್ಲ, ಎರಡಲ್ಲ, 5 ಬಾರಿ ಆಫರ್ ಬಂದಿದೆ. ಪ್ರತಿ ಸಲವೂ ನಾನು ನಿರಾಕರಿಸಿದ್ದೇನೆ. ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ ನಾನು. ನನ್ನಂಥವನನ್ನು ಯಾವ ರಾಜಕೀಯ ಪಕ್ಷವೂ ಸಹಿಸುವುದಿಲ್ಲ ಎಂಬುದು ಗೊತ್ತು. ಸಕ್ರಿಯ ರಾಜಕೀಯದಲ್ಲಿದ್ದರೆ ಪಕ್ಷದ ಕಟ್ಟಳೆಗಳಿಗೆ ಬದ್ಧರಾಗಿರಬೇಕಾಗುತ್ತದೆ. ಪಕ್ಷದ ಯಾವುದೇ ಹಿರಿಯ ಮುಖಂಡ ಏನೋ ಹೇಳಿದ್ದು ನನಗೆ ಇಷ್ಟವಾಗಲಿಲ್ಲವೆಂದರೆ ನೇರವಾಗಿ ಹೇಳಿಬಿಡುತ್ತೇನೆ. ಸುಮ್ಮನಿರುವುದು ನನಗೆ ಸವಾಲಿನ ಕೆಲಸ. ಅಂಥ ಸಂದಿಗ್ಧತೆಯಲ್ಲಿ ನಾನೇಕೆ ಇರಬೇಕು? ಮಲಗಿದ 5 ನಿಮಿಷಕ್ಕೆ ನನಗೆ ನಿದ್ರೆ ಬರುತ್ತದೆ. ಹೀಗೆ ರಾಜನಂತೆ ನಿದ್ರೆ ಮಾಡುವಷ್ಟು ಶುದ್ಧವಾಗಿ ಬದುಕಿದ್ದೇನೆ. ರಾಜಕೀಯದಲ್ಲಿದ್ದರೆ ಅದು ಸಾಧ್ಯವಿಲ್ಲ.

# ಮೋದಿ ಪಾತ್ರದಲ್ಲಿ ನಟಿಸಲು ನೀವು ಮಾಡಿಕೊಂಡ ತಯಾರಿ ಏನು?

ಈ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿತ್ತು. ಯಾಕೆಂದರೆ, ಯಾವುದೋ ಕಾಲದಲ್ಲಿದ್ದ ವ್ಯಕ್ತಿಯ ಪಾತ್ರವನ್ನು ನಾನು ಮಾಡುತ್ತಿಲ್ಲ. ಪ್ರತಿದಿನ ಮೋದಿಯನ್ನು ಜನರು ಟಿವಿಯಲ್ಲಿ ನೋಡುತ್ತಾರೆ. ಮೊದಲಿಗೆ ಸಿನಿಮಾ ಘೋಷಣೆ ಮಾಡಿದಾಗ ವಿವೇಕ್ ಒಬೆರಾಯ್ ಸೂಕ್ತ ಆಯ್ಕೆ ಎಂಬ ಪ್ರತಿಕ್ರಿಯೆಗಳು ಬಂದವು. ಅದನ್ನೇ ನಾವು ಸವಾಲಾಗಿ ಸ್ವೀಕರಿಸಿದೆವು. ಮೇಕಪ್ ಹೇಗೋ ಮಾಡಬಹುದು. ಆದರೆ ಮೋದಿಯವರ ಕಣ್ಣಿನಲ್ಲಿ ಇರುವ ಶಕ್ತಿಯನ್ನು ನಾನು ತೋರಿಸುವುದು ಹೇಗೆ? ಅದನ್ನು ನಟಿಸಿ ತೋರಿಸಲು ಸಾಧ್ಯವಿಲ್ಲ. ನಾನೇ ಆ ಶಕ್ತಿಯನ್ನು ಭರಿಸಿಕೊಳ್ಳಬೇಕು.ಶೂಟಿಂಗ್ ಶುರುವಾಗುವುದಕ್ಕೂ 5 ತಿಂಗಳು ಮುನ್ನ ನಾನು ಬೇರೆಯದೇ ರೀತಿಯ ಜೀವನಶೈಲಿ ರೂಢಿಸಿಕೊಂಡೆ. ಪ್ರತಿ ದಿನ ಮುಂಜಾನೆ 4 ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ, ಧ್ಯಾನ ಮಾಡಲು ಆರಂಭಿಸಿದೆ. ರಾತ್ರಿ ಎರಡು ಗಂಟೆಗೆ ಮಲಗಿದರೂ ಈ ಅಭ್ಯಾಸ ತಪ್ಪಿಸಲಿಲ್ಲ. ಸಂಪೂರ್ಣ ಸಸ್ಯಾಹಾರ. ಅದರಲ್ಲೂ ಈರುಳ್ಳಿ, ಬೆಳ್ಳುಳ್ಳಿ ಬಳಸುತ್ತಿರಲಿಲ್ಲ. ವಿವೇಕಾನಂದರ ಕೃತಿಗಳನ್ನು ಓದಲು ಶುರುಮಾಡಿದೆ. ಅದೆಲ್ಲದರ ಪರಿಣಾಮವಾಗಿ ನನ್ನ ಕಣ್ಣಲ್ಲೂ ಆ ಶಕ್ತಿ ಬಂತು.

# ಫಸ್ಟ್​ಲುಕ್ ಬಿಡುಗಡೆ ಆದಾಗ ಇದು ಮೋದಿ ರೀತಿಯೂ ಇಲ್ಲ, ವಿವೇಕ್ ರೀತಿಯೂ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿದರು. ಅವುಗಳನ್ನು ನೀವು ಹೇಗೆ ಸ್ವೀಕರಿಸಿದಿರಿ?

ಮೊದಲಿಗೆ ನಿರ್ವಪಕರು ಅಂತಾರಾಷ್ಟ್ರೀಯ ಮೇಕಪ್ ಕಲಾವಿದರನ್ನು ಸಂರ್ಪಸಿದ್ದರು. ಆದರೆ ನಾನು ಒಪ್ಪಲಿಲ್ಲ. ಮೋದಿ ಹೆಸರಿನಲ್ಲಿ ಸಿನಿಮಾ ಆಗುತ್ತಿದೆ ಎಂದಾಗ ವಿದೇಶಿ ತಂತ್ರಜ್ಞರಿಗಿಂತ ನಮ್ಮವರೇ ಸೂಕ್ತ ಎನಿಸಿತು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ತಕ್ಕಂತೆ ನಮ್ಮದೇ ಮೇಕಪ್ ಕಲಾವಿದರನ್ನು ಆಯ್ಕೆ ಮಾಡಿಕೊಂಡೆವು. ಮೊದಲ ಬಾರಿಗೆ ಸತತ 8 ಗಂಟೆ ಮೇಕಪ್ ಮಾಡಿಕೊಳ್ಳಲಾಯಿತು. ಅದೇ ರೀತಿ 15 ಬಾರಿ ಲುಕ್ ಟೆಸ್ಟ್ ಮಾಡಿದೆವು. ನಂತರ ಒಂದು ಲುಕ್ ಸೂಕ್ತವಾಗಿ ಮೂಡಿಬಂತು. ಸಾಮಾಜಿಕ ಜಾಲತಾಣದಲ್ಲಿ ಕೆಲವರು ನೆಗೆಟಿವ್ ಕಮೆಂಟ್ ಮಾಡಿದರು ಎಂಬುದು ನಿಜ. ಆದರೆ ಅದನ್ನೆಲ್ಲ ನಾನು ನಿರ್ಲಕ್ಷ್ಯ ಮಾಡಿದೆ. ಮೋದಿ ಪಾತ್ರ ಮಾಡಿ ನಾನು ಕಲಿತ ದೊಡ್ಡ ಪಾಠವೇ ಇದು.

ನಿಜಜೀವನದಲ್ಲಿ ಅವರನ್ನೂ ಅನೇಕರು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಅದಕ್ಕೆ ಮೋದಿ ಬೆಲೆ ನೀಡಿಲ್ಲ. ಅವುಗಳನ್ನು ನಿರ್ಲಕ್ಷಿಸಿದ್ದಕ್ಕಾಗಿಯೇ ಅವರು ಬೆಳೆಯಲು ಸಾಧ್ಯವಾಯ್ತು. ನೆಗೆಟಿವ್ ಕಮೆಂಟ್​ಗಳು ಬಂದಿದ್ದಕ್ಕೆ ನಮ್ಮ ಸೋಷಿಯಲ್ ಮೀಡಿಯಾ ತಂಡದವರು ಬೇಸರಪಟ್ಟುಕೊಂಡಿಲ್ಲ. ಯಾಕೆಂದರೆ, ಎಂಥ ಸ್ಟಾರ್ ಚಿತ್ರಕ್ಕಾದರೂ ಅಂದಾಜು 50 ಸಾವಿರ ಕಮೆಂಟ್ಸ್ ಬರುತ್ತವೆ. ಆದರೆ ನಮ್ಮ ಚಿತ್ರಕ್ಕೆ ಒಂದೂವರೆ ಲಕ್ಷ ಕಮೆಂಟ್ಸ್ ಬಂದವು. ಒಟ್ಟಿನಲ್ಲಿ ನಾವು ಹೆಚ್ಚು ಜನರನ್ನು ತಲುಪಿದ್ದೇವೆ ಎಂಬುದು ನಮಗೆ ಖುಷಿ ನೀಡಿದೆ.

# ಈ ಚಿತ್ರದಿಂದ ಜನರಿಗೆ ಮೋದಿ ಬಗ್ಗೆ ಕೇವಲ ಮಾಹಿತಿ ಸಿಗಲಿದೆಯೋ ಅಥವಾ ಸ್ಪೂರ್ತಿಯೂ ಆಗಲಿದೆಯೇ?

ಇಂಟರ್​ನೆಟ್​ನಲ್ಲಿ ಹುಡುಕಿದರೆ ಮೋದಿ ಬಗ್ಗೆ ನಿಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ನಮ್ಮ ಸಿನಿಮಾ ಒಂದು ಸಾಕ್ಷ್ಯಚಿತ್ರ ಅಲ್ಲ. ಇದನ್ನು ಒಂದು ಎಮೋಷನಲ್ ಸಿನಿಮಾ ಆಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಎಲ್ಲವೂ ಇದ್ದಾಗ ನಾವು ಧಾನ-ಧರ್ಮದ ಬಗ್ಗೆ ಮಾತನಾಡುತ್ತೇವೆ. ಆದರೆ ಮೋದಿ ಅಂಥವರಲ್ಲ. ಅವರೂ ಬಡತನದಲ್ಲಿದ್ದರು. ಹಾಗಂತ ಅವರು ಹಣದ ಹಿಂದೆ ಬೀಳಲಿಲ್ಲ. ಒಬ್ಬ ಗುಜರಾತಿಯಾಗಿ ಬಿಜಿನೆಸ್ ಎಂಬುದು ಅವರ ರಕ್ತದಲ್ಲೇ ಇತ್ತು. ಯಾರದ್ದಾದರೂ ಜತೆ ಸೇರಿ ಅವರು ಬಿಜಿನೆಸ್​ನಲ್ಲಿ ತೊಡಗಿಕೊಳ್ಳಬಹುದಿತ್ತು. ಆದರೆ ಮೋದಿ ಹಾಗೆ ಮಾಡಲಿಲ್ಲ. ತನ್ನ ಬಳಿ ಏನೂ ಇಲ್ಲದಿದ್ದಾಗಲೂ ದೇಶಕ್ಕಾಗಿ ದುಡಿಯಲು ಮುಂದಾದ ಮಹಾನ್ ವ್ಯಕ್ತಿ ಅವರು. ಆ ಕಾರಣಕ್ಕಾಗಿ ಈ ಚಿತ್ರ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ.

Stay connected

278,738FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...